ದ.ಕ.ಜಿಲ್ಲಾ ಎಸಿಪಿಯಾಗಿ ಕೋದಂಡರಾಮ ಅಧಿಕಾರ ಸ್ವೀಕಾರ

Source: sonews | By Staff Correspondent | Published on 20th July 2019, 10:20 PM | Coastal News | Don't Miss |

ಮಂಗಳೂರು: ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಬೆಂಗಳೂರು ನಗರದ ತಿಮ್ಮಯ್ಯ ಕೋದಂಡರಾಮ್ ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮರಾವ್ ಅವರು ಬಳ್ಳಾರಿ ನಗರ ಠಾಣೆಗೆ ಡಿವೈಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ನೂತನ ಅಧಿಕಾರ ಸ್ವೀಕರಿಸಿಕೊಂಡಿರುವ ಟಿ.ಕೋದಂಡರಾಮ್ ಅವರು ಬೆಂಗಳೂರು ಗ್ರಾಮಾಂತರ, ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಹಲವು ವಷಗಳ ಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿದ್ದಾರೆ.

ಕೋದಂಡರಾಮ್ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕದ್ರಿ, ಉರ್ವ, ಪಣಂಬೂರು, ಕಾವೂರು, ಬಜ್ಪೆ ಠಾಣೆಗಳಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರು ನಗರ, ಮಂಡ್ಯ, ಸಿಸಿಬಿ ಬೆಂಗಳೂರು, ಬ್ಯಾಟರಾಯನಪುರ, ಭಯೋತ್ಪಾದಕ ನಿಗ್ರಹ ದಳ, ಮದ್ದೂರು, ಸಿಐಡಿ ತಂಡಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿರುವ ರಾಜ್ಯ ಸರಕಾರ ಮುಖ್ಯಮಂತ್ರಿ ಪದಕ ಹಾಗೂ ರಾಷ್ಟ್ರಪತಿ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ.

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್