ದ.ಕ.: ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ; ಡಿಸೆಂಬರ್ 1ರಿಂದ ಅನ್ವಯ

Source: Vb | By I.G. Bhatkali | Published on 25th November 2022, 6:55 AM | Coastal News | Don't Miss |

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಡಿ.1ರಿಂದ ಅನ್ವಯಗೊಳ್ಳುವಂತೆ ಪರಿಷ್ಕರಿಸಿದ ದ.ಕ.ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆ‌. ಆದೇಶ ಹೊರಡಿಸಿದ್ದಾರೆ.

ಕನಿಷ್ಠ ದರ ಮೊದಲ ಒಂದುವರೆ ಕಿ.ಮೀ.ಗೆ 35 ರೂ., ನಂತರದ ಪ್ರತೀ 1 ಕಿ.ಮೀ. 20 ರೂ. ಆಗಿ ರುತ್ತದೆ. ಮೊದಲ 15 ನಿಮಿಷಗಳವರೆಗೆ ಕಾಯುವ ದರವಿರುವುದಿಲ್ಲ. ಅದು ಉಚಿತವಾಗಿರುತ್ತದೆ. ಬಳಿಕದ 15 ನಿಮಿಷಕ್ಕೆ 5 ರೂ. ಪಾವತಿಸಬೇಕಿದೆ. ಪ್ರತೀ 20 ಕೆಜಿ ಲಗೇಜ್ ಉಚಿತವಾಗಿರುತ್ತದೆ. ಬಳಿಕದ 10 ಕೆಜಿಗೆ 5 ರೂ. ಪಾವತಿಸಬೇಕಿದೆ.

ರಾತ್ರಿ 10ರಿಂದ ಮುಂಜಾನೆ 5ರವರೆಗೆ ಪರಿಷ್ಕತ ದರದ ಒಂದುವರೆ ಪಟ್ಟು ಹೆಚ್ಚು ವಸೂಲಿ ಮಾಡಬಹುದಾಗಿ ದೆ. ಡಿ.1ರಿಂದ ತಿಂಗಳೊಳಗೆ ಮೀಟರ್‌ಗಳನ್ನು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು. ಪ್ರತೀ ರಿಕ್ಷಾದಲ್ಲೂ ದರದ ಪಟ್ಟಿಯನ್ನು ಅಳವಡಿಸಬೇಕು. ಪ್ರಯಾಣಿಕರು ಸೂಚಿಸಿದ ಸ್ಥಳಕ್ಕೆ ಹೋಗಲು ಚಾಲಕರು ನಿರಾಕರಿಸಿದಲ್ಲಿ, ಸಾರ್ವಜನಿಕರಲ್ಲಿ ಅನುಚಿತವಾಗಿ ವರ್ತಿಸಿದಲ್ಲಿ ಪೊಲೀಸ್ ಇಲಾಖೆಯು ಕ್ರಮ ಜರಗಿಸಬೇಕು. ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಿದರೆ ದೂ.ಸಂ: 0824- 2220577/08251-230729/08255-2805 04ಕ್ಕೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Read These Next

ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್‌ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ

ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್‌ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ

ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ