ಮಂಗಳೂರು | ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ; ಯುವಕ ಪೊಲೀಸ್ ವಶಕ್ಕೆ

Source: Prajavani | Published on 30th July 2020, 12:15 AM | Coastal News | Don't Miss |

 

ಮಂಗಳೂರು: ಜಾನುವಾರು ಸಾಗಾಣಿಕೆ ಸಮಯದಲ್ಲಿ ವಾಹನಗಳಿಗೆ ಹಾನಿ ಮಾಡುವವರು ಮತ್ತು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ರಾಮ್ ಸೇನಾ ಅಭಿಮಾನಿಗಳು’ ಎಂಬ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಮಂಗಳವಾರ ಬೆದರಿಕೆ ಹಾಕಲಾಗಿತ್ತು. ‘ಇವಳನ್ನು ಮೊದಲು ಕಡಿದು ಕೊಲ್ಲಬೇಕು’ ಎಂದು ಜಿಲ್ಲಾಧಿಕಾರಿ ಅವರನ್ನುದ್ದೇಶಿಸಿ ತುಳು ಭಾಷೆಯಲ್ಲಿ ಬೆದರಿಕೆ ಸಂದೇಶ ಹಾಕಲಾಗಿತ್ತು.
ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಸಂಖ್ಯೆ ಆಧಾರದಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮೂಡುಬಿದಿರೆ ನಿವಾಸಿ ರಂಜಿತ್ ಎಂಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...