47 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದ ಮಂಗಳಗೌರಿ ಭಟ್:ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ

Source: SO NEWS | By MV Bhatkal | Published on 26th September 2021, 7:23 AM | Coastal News | Don't Miss |

ಭಟ್ಕಳ:ಕೋವಿಡ್-19 ರಿಂದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿ, ಎಸ್.ಎಸ್.ಎಲ್.ಸಿ.ಮತ್ತು ಪ್ರಥಮ ಪಿ.ಯು.ಸಿ ಯ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು. ಅಂಕಗಳನ್ನು ತಿರಸ್ಕರಿಸಿ ಪನಹ: ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ದಿ.ನ್ಯೂ ಇಂಗ್ಲೀಷ ಪಿ.ಯು.ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ 42 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಮಾರುಕೇರಿಯ ವಿಷ್ಣು ಭಟ್ ಮತ್ತು ಗೋಪಿಕಾ ಭಟ್ ದಂಪತಿಗಳ ಮಗಳಾದ ಮಂಗಳಗೌರಿ ಭಟ್ಕಳ ತಾಲೂಕಿನಲ್ಲಿ ಇಲಾಖೆ ನೀಡಿದ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿಯಾಗಿದ್ದು, ಮೊದಲು ಇಲಾಖೆ ನೀಡಿದ 539 ಒಟ್ಟೂ ಅಂಕಗಳ ಬದಲಾಗಿ 581 ಅಂಕಗಳನ್ನು ಪಡೆದು ಒಟ್ಟಾರೆ 42 ಹೆಚ್ಚುವರಿ ಅಂಕಗಳೊಂದಿಗೆ ಮಹಾವಿದ್ಯಾಲಯಕ್ಕೆ ಈ ಹಿಂದೆ ಪಡೆದ ತೃತೀಯ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಡ್ತಿ ಪಡೆದು ಅತ್ಯುತ್ತಮ ಸಾಧನೆ ಮೆರೆದಿರುತ್ತಾಳೆ. ವಿದ್ಯಾರ್ಥಿಯಾದವನು ಅಲ್ಪ ತೃಪ್ತನಾಗದೇ ಏನನ್ನೂ ಸಾಧಿಸುವ ಛಲ ಹೊಂದಿದವನಾಗಿರಬೇಕು ಎನ್ನುವುದಕ್ಕೆ ಮಂಗಳಗೌರಿ ಉತ್ತಮ ನಿದರ್ಶನವಾಗಿದ್ದಾಳೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...