ಶಿರೂರಿನ ಮಣೆಗಾರ್ ಮೀರಾನ್ ಸಾಹೇಬ್‌ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

Source: SO News | By Laxmi Tanaya | Published on 28th October 2020, 2:56 PM | State News | Coastal News | Gulf News |

ಶಿರೂರು: ಶಿರೂರಿನ ಅಭಿವೃದ್ದಿಯಲ್ಲಿ ಹಗಲಿರುಳು ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಅಪಾರ ಕೊಡುಗೆ ನೀಡಿದ ಅನಿವಾಸಿ ಉದ್ಯಮಿ ಮಣೆಗಾರ್ ಮೀರಾನ್ ಸಾಹೇಬ್ ಶಿರೂರು ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಮಣೆಗಾರ್ ಮೀರಾನ್ ಸಾಹೇಬ್ ಅವರು ಕಳೆದ 40 ವರ್ಷಗಳಿಂದ ಗಲ್ಪ್ ರಾಷ್ಟ್ರಗಳಲ್ಲಿ ಕನ್ನಡದ ನಾಡು ನುಡಿಯ ಸೇವೆ ಮಾಡಿದ್ದಾರೆ. ಶಿಕ್ಷಣ,ಸಾಮಾಜಿಕ,ಸಾಂಸ್ಕ್ರತಿಕ ಸೇರಿದಂತೆ ಹೊರನಾಡಿನಲ್ಲಿ ಪ್ರತಿ ವರ್ಷ ಕನ್ನಡಿಗರ ಸಂಘಟನೆಗೆ ಮತ್ತು ಕನ್ನಡದ ಅಭಿವೃದ್ದಿಗಾಗಿ ವಿವಿಧ ಸಂಘ ಸಂಸ್ಥೆಗಳ ಜವಬ್ದಾರಿ ಆದ್ಯತೆಯ ಮೇರೆಗೆ ಅನುಪಮ ಕೊಡುಗೆ ನೀಡಿದ್ದಾರೆ.

 ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ವಿದೇಶದಲ್ಲಿ ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಜನಪರ ಕಾಳಜಿಯ ಕಾರ್ಯಕ್ರಮ ಸಂಘಟಿಸುವ ಜೊತೆಗೆ ನೂರಾರು ಬಡ ಕುಟುಂಬಗಳಿಗೆ ನೆರವಾಗಿದ್ದಾರೆ. 

ಇದೇ ಮೊದಲ ಬಾರಿಗೆ ಶಿರೂರಿನ ವ್ಯಕ್ತಿಯೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ಹೆಚ್ಚಾಗಿದೆ. ಮಿರಾನ್ ಸಾಹೇಬರು ಶಿರೂರು ಗ್ರೀನ್‌ವ್ಯಾಲಿ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ . ಶಿರೂರಿನ ಅಭಿವೃದ್ದಿಗೆ ಅಂಬುಲೆನ್ಸ್ ಕಸದ ವಾಹನ ಸೇರಿದಂತೆ ಹಲವು ಮಹತ್ತರ ಕೊಡುಗೆ ನೀಡಿದ್ದಾರೆ.

Read These Next

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.

ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಬಿಜೆಪಿ ಬದ್ಧ; ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ್

ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ನಮ್ಮ ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವುದು ನಮ್ಮ ...

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...