ಕಡ್ಡಾಯವಾಗಿ ಖಾಸಗಿ ಶಾಲೆಗಳ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ: ಸ್ಥಾಪನೆಯಾಗಲಿ : ಡಾ. ಹರೀಶಕುಮಾರ ಕೆ

Source: so news | Published on 16th September 2019, 7:51 PM | Coastal News | Don't Miss |

 


                          


  
ಕಾರವಾರ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕಾಗಿರುವುದು ಇಂದಿನ ಅಗತ್ಯವಾಗಿರುವುದರಿಂದ ಖಾಸಗಿ ಶಾಲೆಗಳಲ್ಲೂ ಕೂಡ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸ್ಥಾಪಿಸಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ ಹರೀಶಕುಮಾರ ಕೆ ಅವರು ಸೂಚಿಸಿದರು. 
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ 2019-20 ನೇ ಸಾಲಿನ ಜಿಲ್ಲಾ ವಾರ್ಷಿಕ ಮಾಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಟಿ ವಿ, ಮೋಬೈಲ್‍ನಂತಹ ವಸ್ತುಗಳಿಗೆ ಸೀಮಿತವಾಗಿದ್ದು, ಪ್ರಾಯೋಗಿಕವಾದ ಮಾನವೀಯ ಮೌಲ್ಯಗಳನ್ನು ಮರೆತಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯÀಮಾಡಬೇಕೆಂದರು. 
      
ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿವಿಧ ಚಟುವಟಿಕಗೆಗಳಿಗಾಗಿ ಕೈಗಾ ಮತ್ತು ನೇವಿಯವರಿಂದ ಸಮನ್ವಯ ಸಾಧಿಕಸಿಕೊಳ್ಳಿ,  ಜನ ಪ್ರತಿನಿದಿಗಳಿಂದ ಹಣವನ್ನು ಸಂಗ್ರಹಿಸಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರಕಾರಿ ಜಾಗಗಳನ್ನು ಗುರುತಿಸಿ, ಕಚೇರಿಗಳನ್ನು ಕಟ್ಟಿಕೊಂಡು  ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಕ್ರೀಯಾಶೀಲವಾಗಿ ಕಾರ್ಯಮಾಡಬೇಕಂದು ತಿಳಿಸಿದರು. 
ಸಭೆಯಲ್ಲಿ   ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಜಿ. ಜಿ. ಸಭಾಹೀತ, ಕಾರ್ಯದರ್ಶಿ ಬಿ ಡಿ ಫರ್ನಾಂಡಿಸ್, ಸಂಯೋಜಕ ಕರಿಸಿದ್ದಪ್ಪಾ ಟಿ.  ಶೋಭಾ ಕುಲಕರ್ಣಿ, ಆರ್.ಟಿ. ಹೆಬ್ಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...