ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು

Source: S O News | By I.G. Bhatkali | Published on 14th January 2022, 11:18 PM | Coastal News |

ಭಟ್ಕಳ: ತಾಲೂಕಿನ ಪ್ರವಾಸಿ ತಾಣ ಮುರ್ಡೇಶ್ವರ ಸಮುದ್ರದಲ್ಲಿ ಮುಳುಗಿ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದಾರೆ. ಮೃತನನ್ನ ಮುತ್ತು ನಿಂಗಪ್ಪ ಸೋನಾರ್ (32) ಎಂದು ಗುರುತಿಸಲಾಗಿದೆ.

ಹಾವೇರಿ  ಜಿಲ್ಲೆಯ ಅಕ್ಕಿ ಆಲೂರು ನಿಂದ ಒಂಬತ್ತು ಜನರ ತಂಡವು ಪ್ರವಾಸಕ್ಕಾಗಿ ಶುಕ್ರವಾರ ಮುರ್ಡೇಶ್ವರಕ್ಕೆ ಆಗಮಿಸಿತ್ತು,  ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯಕ್ಕೆ ಈಜಲು ಸಮುದ್ರಕ್ಕೆ ಇಳಿದಿದ್ದರು, ಈ ಸಂದರ್ಭದಲ್ಲಿ ಮುತ್ತು ಮುಳುಗಿದರು.

ಸ್ವಲ್ಪ ಸಮಯದ ನಂತರ, ಶವವನ್ನು ಸಮುದ್ರದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...