ಭಟ್ಕಳದಲ್ಲಿ ಮರದಿಂದ ಕೆಳಕ್ಕೆ ಬಿದ್ದು ವ್ಯಕ್ತಿ ಮೃತ.

Source: SO News | By Laxmi Tanaya | Published on 18th June 2021, 8:26 PM | Coastal News |

ಭಟ್ಕಳ : ಬದ್ರಿಯಾ ಕಾಲೋನಿ ಬಳಿಯ ತಗ್ಗರಗೊಡನಲ್ಲಿ ತೆಂಗಿನಕಾಯಿ ತೆಗೆಯುವಾಗ ವ್ಯಕ್ತಿಯೋರ್ವ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

 ರಾಮ ಗೊಂಡಾ (30) ಎಂಬ ರೈತ ಮರದಿಂದ ಬಿದ್ದು ಸಾವನ್ನಪ್ಪಿದ ದುರ್ದೈವಿ. ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ತೆಂಗಿನಕಾಯಿ ಕೀಳಲು ರಾಮ ಗೊಂಡಾ ಮರ ಹತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌

ಮೃತ ಸಹೋದರ ಮಾದೇವ ಗೊಂಡ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read These Next