ಭಟ್ಕಳದಲ್ಲಿ ವೃದ್ಧರೊಬ್ಬರ ಆತ್ಮಹತ್ಯೆ

Source: S O News | By I.G. Bhatkali | Published on 14th January 2022, 7:33 PM | Coastal News |

ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೀಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಗುರುವಾರ ಪತ್ತೆಯಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ತಾಲೂಕಿನ ಯಲಡಿಕವೂರು ಗ್ರಾ.ಪಂ. ಬಿಟ್ಟಿಬೀಳೂರು ನಿವಾಸಿ ಸೋಮಯ್ಯ ನಾರಾಯಣ ನಾಯ್ಕ (63) ಕೊಲ್ಲೂರಿಮನೆ ಎಂದು ಗುರುತಿಸಲಾಗಿದ್ದು, ಮೃತರು ಧರಿಸಿದ್ದ ಲುಂಗಿಯನ್ನೇ ನೇಣನ್ನಾಗಿ ಮಾಡಿಕೊ೦ಡಿರುವುದು ಕಂಡು ಬಂದಿದೆ.

ಹೊಳೆಗೆ ಸೋಮಯ್ಯ ವಾಪಸ್ಸು ಬಾರದೇ ಇದ್ದಾಗ ಹುಡುಕಲು ಹೋದ ಅವರ ಕುಟುಂಬ ಸದಸ್ಯರೋರ್ವರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವವನ್ನು ಕಂಡು ಉಳಿದವರಿಗೆ ಮಾಹಿತಿ ನೀಡಿದ್ದಾರೆ. ಮೃತರು ಹೆಂಡತಿ ಹಾಗೂ ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಭರತ್ ತನಿಖೆ ಕೈಗೊಂಡಿದ್ದಾರೆ.

Read These Next

ಕಾರವಾರದ ದೇವದತ್ ಕಾಮತ್ ಉ.ಪ್ರ. ಚುನಾವಣೆಗೆ ಕಾಂಗ್ರೆಸ್ ಕಾನೂನು ಸಮನ್ವಯ ಸಮಿತಿ ಚೇರ್ಮನ್

ಕಾರವಾರದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ, ಬೆಳಗಾವಿ ಸೇರಿದಂತೆ ಕಾರವಾರ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಸಫಲರಾದ ಮುಂಬೈ ...

ತಿಂಗಳಾಂತ್ಯದಲ್ಲಿ ಕೋವಿಡ್ ಮೊದಲ ಡೋಸ್ ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ

ಮಂಗಳೂರು: ತಾಲೂಕಿನ ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇದೂವರೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯದೇ ...

ನಾರಾಯಣಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಕೋರಿ ದಕ ಜಿಲ್ಲಾ ಯುವ ಜೆಡಿಎಸ್‌ ವತಿಯಿಂದ ಪ್ರಧಾನಿಗೆ ಮನವಿ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ದ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ...

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಯುವ ಕಾಂಗ್ರೆಸ್ ಕಾಲ್ನಡಿಗೆ ಜಾಥಾ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇಂದ್ರ ಸರಕಾರ ಅವಕಾಶ ...