ಅಪ್ರಾಪ್ತ ದಲಿತ ವಿದ್ಯಾರ್ಥಿನಿಗೆ ಅತ್ಯಾಚಾರ: ಆರೋಪಿಯ ಬಂಧನ

Source: so news | Published on 20th November 2019, 12:23 AM | Coastal News | Don't Miss |

 

ಕುಂದಾಪುರ: ಹತ್ತನೇ ತರಗತಿ ಓದುತ್ತಿರುವ ದಲಿತ ವಿದ್ಯಾರ್ಥಿನಿಗೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಸೋಮವಾರ ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯ ಹಂಗಾರಕಟ್ಟೆ ಎಂಬಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಯನ್ನು ಹಂಗಾರ ಕಟ್ಟೆ ನಿವಾಸಿ ಅಶೋಕ ಪೂಜಾರಿ(33) ಎಂದು ಗುರುತಿಸಲಾಗಿದೆ.

ಆರೋಪಿ ಅಶೋಕ ವಿವಾಹಿತನಾಗಿದ್ದು ಅಂತರ್ಜಾತಿ ಪತ್ನಿಗೆ ಇಬ್ಬರು ಮಕ್ಕಳನ್ನು ಪಡೆದಿದ್ದಾನೆ. ಆದರೆ ಪತ್ನಿಯ ಬಗ್ಗೆ ಅನುಮಾನಿತನಾಗಿ ಅವಳನ್ನು ತ್ಯಜಿಸಿ ಮತ್ತೊಬ್ಬಳ ಜೊತೆ ಬ್ರಹ್ಮಾವರದ ಪ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದಾನೆ ಎಂದು ಸಮೀಪವರ್ತಿಗಳು ತಿಳಿಸಿದ್ದಾರೆ.
ಭಾನುವಾರ ಹತ್ತನೇ ತರಗತಿ ಓದುತ್ತಿರುವ ದಲಿತ ಬಾಲಕಿಯನ್ನು ಪುಸಲಾಯಿಸಿ ತನ್ನ ಐ20 ಕಾರಿನಲ್ಲಿ ಸಾಸ್ತಾನದಿಂದ ಎರಡು ಕಿ.ಮೀ ದೂರದ ಮೂಡಾಡು ಎಂಬಲ್ಲಿಯ ಮನೆಯೊಂದಕ್ಕೆ  ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥ ಬಾಲಕಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ. ಅಲ್ಲದೇ ಆರೋಪಿ ಅಶೋಕನ ಜೊತೆಗೆ ಮತ್ತಿಬ್ಬರು ಇದ್ದರು ಎನ್ನಲಾಗಿದ್ದು ಆ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಕರಣದ ಆರೋಪಿ ಅಶೋಕ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಹಿಂದೆ ಹಲವು ಅಪರಾಧ ಪ್ರಕರಣದ ಆರೋಪಿಯಾಗಿದ್ದಾನೆ. ಅಕ್ರಮ ಮರಗಳ್ಳತನ, ಮರಳು ಸಾಗಾಟ ಸೇರಿದಂತೆ ಹಲವಾರು ಕೇಸುಗಳು ಈತನ ಮೇಲಿವೆ ಎಂದು ತಿಳಿದು ಬಂದಿದೆ. ಈ ಹಿಂದೆ ಅಕ್ರಮ ಮರಳು ಸಾಗಾಟದ ಪ್ರಕರಣವೊಂದರಲ್ಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ರನ್ನೇ ತಳ್ಳಿ ಹಾಕಿದ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಅಶೋಕ ಪೂಜಾರಿಯನ್ನು ಬಂಧಿಸಿದ ಕೋಟ ಪೊಲೀಸರು ಫೋಕ್ಸೋ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Read These Next

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು