ಪ್ರಧಾನಮಂತ್ರಿ ಕಿಸಾನ್–ಮಾನ್‌ಧನ್ ರೈತ ಪಿಂಚಣಿ ಯೋಜನೆ ಸದುಪಯೋಗ ಮಾಡಿಕೊಳ್ಳಿ : ಸಹಾಯಕ ಕೃಷಿ ನಿರ್ದೆಶಕ ಸಿ.ಜಿ. ಮೇತ್ರಿ

Source: so news | Published on 11th September 2019, 11:57 PM | State News | Don't Miss |

 

ಧಾರವಾಡ: ಕೇಂದ್ರ ಸರ್ಕಾರವು ಕೃಷಿ ಮತ್ತು ಕೃಷಿ ಅವಲಂಭಿಸಿರುವ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ಅತೀ ಸಣ್ಣ ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಇಳಿ ವಯಸ್ಸಿನಲ್ಲಿ ನಿಶ್ಚಿತ ಆದಾಯ ಬರುವಂತೆ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಎಲ್ಲ ರೈತ, ರೈತ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕೆಂದು ಧಾರವಾಡ ತಾಲೂಕಾ ಸಹಾಯಕ ಕೃಷಿ ನಿರ್ದೆಶಕ ಸಿ.ಜಿ. ಮೇತ್ರಿ ಹೇಳಿದರು.
ಅವರು ಇಂದು ಬೆಳಿಗ್ಗೆ ಮನಗುಂಡಿ ಗ್ರಾಮದ ಗ್ರಾಮಪಂಚಾಯತ್‌ದಲ್ಲಿ ರೈತರ ಸಭೆ ಜರುಗಿಸಿ ಮಾತನಾಡಿದರು. 
ಪಿಂಚಣಿಗೆ ನೊಂದಣಿ ಮಾಡಿಸಿದ ಕೃಷಿ ಕಾರ್ಮಿಕರ, ಸಣ್ಣ ರೈತ ಮತ್ತು ಅತೀ ಸಣ್ಣ ರೈತ ಹಾಗೂ ರೈತನ ಪತ್ನಿಯು ೬೦ ವರ್ಷಗಳ ನಂತರ ಕನಿಷ್ಠ ರೂ.೩,೦೦೦/- ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಗರಿಷ್ಠ ೨ ಹೆಕ್ಟೆÃರ್‌ವರೆಗೆ ಭೂ ಹಿಡುವಳಿ ಹೊಂದಿರುವ ೧೮ ರಿಂದ ೪೦ ವರ್ಷದೊಳಗಿನ ರೈತ ಅಥವಾ ರೈತನ ಪತ್ನಿ ಈ ಯೋಜನೆಗೆ ನೊಂದಾಯಿಸಲು ಅರ್ಹರಾಗಿದ್ದಾರೆ. 
ಪಿಂಚಣಿಗೆ ವಯಸ್ಸಿನ ಆಧಾರದ ಮೇಲೆ ಮಾಸಿಕ ರೂ.೫೫ ರಿಂದ ೨೦೦ ರ ವರೆಗೆ ರೈತರು ತಮ್ಮ ವಂತಿಗೆಯನ್ನು ತುಂಬಬೇಕಾಗುತ್ತದೆ. ಮತ್ತು ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸರ್ಕಾರದ ನೆರವಿನ ಮೊತ್ತ ಪಡೆಯಲು ಆರಂಭಿಸಿರುವ ಉಳಿತಾಯ ಖಾತೆಯಿಂದಲೂ ಈ ಪಿಂಚಣಿಗೆ ವಂತಿಗೆ ಪಾವತಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದಲೂ ಸಹ ವಂತಿಗೆಯನ್ನು ಕಟಾವನೆ ಮಾಡಬಹುದಾಗಿದೆ. 
ರೈತರು ಪಾವತಿಸುವ ವಂತಿಗೆಯ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರಸರ್ಕಾರವು ಪಿಂಚಣಿ ನಿಧಿಗೆ ಪಾವತಿಸುತ್ತದೆ. ಅರ್ಹ ಹಾಗೂ ಆಸಕ್ತಿ ಇರುವ ರೈತ ಅಥವಾ ರೈತ ಮಹಿಳೆ ತಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜನ್ಮ ದಿನಾಂಕ ಮತ್ತು ಪಿಂಚಣಿ ಯೋಜನೆಗೆ ನಾಮನಿರ್ದೆÃಶನ ನೀಡುವ ಮೂಲಕ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆರಂಭಿಸಿರುವ ನಾಗರಿಕ ಸೇವಾ ಕೇಂದ್ರದ ಪ್ರತಿನಿಧಿಗಳಲ್ಲಿ ಅಥವಾ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ ಸೆಂಟರ್) ಗಳಲ್ಲಿ ಪಿಂಚಣಿ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಧಾರವಾಡ ತಹಶೀಲ್ದಾರ ಕಚೇರಿ ಬಳಿ ಇರುವ ಸರ್ಕಾರದಿಂದ ಪರವಾನಿಗೆ ಪಡೆದಿರುವ ನಾಗರಿಕ ಸೇವಾ ಕೇಂದ್ರ (೯೦೬೬೬೬೪೮೮೨) ವನ್ನು ಸಂಪರ್ಕಿಸಬೇಕು ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ್ ಸದಸ್ಯ ಫಕ್ಕಿÃರಪ್ಪ ಬುಡ್ಡಿಕಾಯಿ, ಮನಗುಂಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಅನ್ನಪೂರ್ಣ ಶಿರಸಂಗಿಮಠ , ಕೃಷಿ ಅಧಿಕಾರಿ ಸುಷ್ಮಾ ಮಳಿಮಠ, ಸಹಾಯಕ ಕೃಷಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಟೀಲ, ಸೇರಿದಂತೆ ಗ್ರಾಮದ ಪ್ರಮುಖರು, ರೈತರು ಭಾಗವಹಿಸಿದ್ದರು. 
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಪಿಂಚಣಿ ಯೋಜನೆಯ ಕುರಿತು ನಾಗರಿಕ ಸೇವಾ ಕೇಂದ್ರದ ಮುಖ್ಯಸ್ಥ ಶಿವಕುಮಾರ್ ಹೂಲಿ ಅವರು ರೈತರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. 
ಸಹಾಯಕ ಕೃಷಿ ನಿರ್ದೆಶಕರ ಕಚೇರಿಯ ತಾಂತ್ರಿಕ ವ್ಯವಸ್ಥಾಪಕ ಶಿವಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. 

Read These Next

ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷ ಕಾಗೇರಿ

ಬೆಂಗಳೂರು: ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...