ಪ್ರಧಾನಿಯ ಪಂಜಾಬ್ ಭೇಟಿ ಮೊಟಕು; ಭದ್ರತಾ ಲೋಪ ಕಾರಣ: ಗೃಹ ಸಚಿವಾಲಯ; ಫೈಓವರ್‌ನಲ್ಲಿ 20 ನಿಮಿಷ ಸಿಲುಕಿದ ಪ್ರಧಾನಿ; ಪ್ರತಿಭಟನಾಕಾರರಿಂದ ರಸ್ತೆ ತಡೆ; ಫಿರೋಝ್ಪುರ ರಾಲಿ ರದ್ದು

Source: VB | By I.G. Bhatkali | Published on 6th January 2022, 8:42 AM | National News |

ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿಯವರು ಪ್ರಯಾಣಿಸುತ್ತಿದ್ದಾಗ ಕೆಲವು ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಅವರು ಸುಮಾರು 20 ನಿಮಿಷಗಳ ಕಾಲ ಫೈಓವರ್‌ನಲ್ಲಿ ಸಿಲುಕಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಘಟನೆಯ ಬಳಿಕ ಫಿರೋಝ್ ಪುರದ ಬಿಜೆಪಿ ಡ್ಯಾಲಿ ಸೇರಿದಂತೆ ಪಂಜಾಬ್‌ನಲ್ಲಿ ಬುಧವಾರ ನಡೆಯಲಿದ್ದ ಪ್ರಧಾನಿಯವರ ನಿಗದಿತ ಕಾರ್ಯಕ್ರಮಗಳು ರದ್ದಾಗಿರುವುದಾಗಿ ಮೂಲಗಳು ತಿಳಿಸಿವೆ.

ಪಂಜಾಬ್‌ನ ಭಟಿಂಡಾದಲ್ಲಿರುವ ಬೈಸಿಯಾನಾ ವಾಯುನೆಲೆಯಲ್ಲಿ ಬುಧವಾರ ಬಂದಿಳಿದ ಪ್ರಧಾನಿಯವರು ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಹೆಲಿಕಾಪ್ಟರ್ ನಲ್ಲಿ ತೆರಳುವವರಿದ್ದರು. ಆದರೆ ಮಳೆ ಹಾಗೂ ಗೋಚರತೆ ತೀರಾ ಕಡಿಮೆ ಇದ್ದುದರಿಂದ ಪ್ರಧಾನಿಯವರು ವಾತಾವರಣ ಶುಭ್ರವಾಗಲು 20 ನಿಮಿಷಗಳವರೆಗೆ ಕಾದರು.

ಹವಾಮಾನದಲ್ಲಿ ಸುಧಾರಣೆಯಾಗದೆ ಇದ್ದಾಗ, ಅವರು ರಸ್ತೆ ಮಾರ್ಗವಾಗಿ ತೆರಳಿ, ಹುಸೈನಿವಾಲಾದಲ್ಲಿರುವದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು.

ಇದರಿಂದಾಗಿ ಪ್ರಧಾನಿ ಪ್ರಯಾಣಕ್ಕೆ 2 ತಾಸು ಅಧಿಕ ಸಮಯಬೇಕಾಯಿತು ಅವರ ಪ್ರಯಾಣಕ್ಕೆ ಬೇಕಾದ ಭದ್ರತಾ ಏರ್ಪಾಡುಗಳನ್ನು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ದೃಢಪಡಿಸಿದ ಬಳಿಕ ಪ್ರಧಾನಿ ರಸ್ತೆಮಾರ್ಗವಾಗಿ ಹುಸೈನಿವಾಲಾಕ್ಕೆ ತೆರಳಿದರು.

ಹುಸೈನಿವಾಲಾದ ರಾಷ್ಟ್ರೀಯ ಹುತಾತ್ಮ ಸಾರಕವು 30 ಕಿ.ಮೀ. ದೂರದಲ್ಲಿದ್ದಾಗ ರಸ್ತೆ ಮಧ್ಯೆ ಪ್ರಧಾನಿಯವರ ವಾಹನದ ಸಾಲು ಫೈಓವರ್ ಒಂದನ್ನು ತಲುಪಿದಾಗ ಪ್ರತಿಭಟನಾಕಾರರ ಗುಂಪೊಂದು ರಸ್ತೆ ತಡೆ ನಡೆಸಿದ್ದರು. ಹೀಗಾಗಿ ಪ್ರಧಾನಿಯವರು ಸುಮಾರು 15-20 ನಿಮಿಷಗಳ ಕಾಲ ಫೈಓವರ್‌ನಲ್ಲಿ ಸಿಲುಕಿಕೊಂಡಿದ್ದರು.

ಭದ್ರತಾಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಫಿರೋಝ್ಪುರ ಪಟ್ಟಣಕ್ಕೆ ಬುಧವಾರ ನೀಡಲಿದ್ದ ಭೇಟಿಯನ್ನು ಕೊನೆಕ್ಷಣದಲ್ಲಿ ರದ್ದುಪಡಿಸಿದ್ದಾರೆ. ಪ್ರಧಾನಿಯವರು ಫಿರೋಝ್ಪುರದಲ್ಲಿ 42,750 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದರು ಹಾಗೂ ಬಿಜೆಪಿಯ ಬೃಹತ್ ಬ್ಯಾಲಿಯಲ್ಲಿ ಪಾಲ್ಗೊಳ್ಳುವವರಿದ್ದರು. ಪ್ರಧಾನಿಯವರ

ಪಂಜಾಬ್ ಭೇಟಿಯ ನಿಗದಿತ ವೇಳಾಪಟ್ಟಿ ಹಾಗೂ ಅವರ ಪ್ರವಾಸದ ಯೋಜನೆಯನ್ನು ಮುಂಚಿತವಾಗಿಯೇ
ಪಂಜಾಬ್ ಸರಕಾರಕ್ಕೆ ತಿಳಿಸಲಾಗಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ನಿಯಮಾವಳಿಗಳ ಪ್ರಕಾರ ಭದ್ರತೆ ಸೇರಿದಂತೆ ಪ್ರಧಾನಿಯವರ ಭೇಟಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಪಂಜಾಬ್ ಸರಕಾರ ಏರ್ಪಾಡು ಮಾಡಬೇಕಿತ್ತು. ರಸ್ತೆಯಲ್ಲಿ ಪ್ರಧಾನಿಯವರ ಸುರಕ್ಷಿತ ಪ್ರಯಾಣಕ್ಕಾಗಿ ಪಂಜಾಬ್ ಸರಕಾರವು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಬೇಕಿತ್ತು. ಆದರೆ ಅದು ಯಾವುದೇ ಭದ್ರತಾಪಡೆಗಳನ್ನು ನಿಯೋಜಿಸಿರಲಿಲ್ಲ. ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿಯವರು ಭಟಿಂಡಾ ವಾಯುನೆಲೆಗೆ ವಾಪಸಾಗಲು ನಿರ್ಧರಿಸಿದರು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಪಂಜಾಬ್ ಭೇಟಿ ಮೊಟಕು

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಈ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಅದು ಪಂಜಾಬ್ ಸರಕಾರದಿಂದ ಸ್ಪಷ್ಟಿಕರಣವನ್ನು ಕೇಳಿದೆ.

ಪ್ರಧಾನಿಯವರ ನಿಕಟವಾದ ಭದ್ರತಾ ವ್ಯವಸ್ಥೆ ಹೊಣೆಗಾರಿಕೆ ವಿಶೇಷ ರಕ್ಷಣಾ ತಂಡದ್ದಾಗಿದೆಯಾದರೂ, ಸಮಗ್ರ ಭದ್ರತೆಯನ್ನು ರಾಜ್ಯ ಪೊಲೀಸರೇ ಖಾತರಿಪಡಿಸಬೇಕಾಗುತ್ತದೆ. ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಉದ್ದೇಶವನ್ನು ರೈತರು ಹೊಂದಿರುವುದು ಕೆಲವು ದಿನಗಳ ಹಿಂದೆಯೇ ಸ್ಪಷ್ಟವಾಗಿತ್ತು. ಆದಾಗ್ಯೂ ಪ್ರಧಾನಿಯವರ ಪ್ರಯಾಣದ ದಾರಿಯಲ್ಲಿ ಭದ್ರತಾ ತಪಾಸಣೆ ನಡೆಸಲು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಯ ಬಳಿಕ ಮೋದಿಯವರು ಪಂಜಾಬ್‌ಗೆ ಭೇಟಿ ನೀಡುತ್ತಿರುವುದು ಇದು ಮೊದಲ ಸಲವಾಗಿದೆ.

ಇಂದು ಬೆಳಗ್ಗೆ ಭಟಿಂಡಾದ ಬೈಸಿಯಾನಾ ವಾಯುಪಡೆಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ರಾಜ್ಯದ ವಿತ್ತ ಸಚಿವ ಮನ್‌ಪ್ರೀತ್ ಬಾದಲ್ ಸ್ವಾಗತಿಸಿದ್ದರು. ತನ್ನ ಪಂಜಾಬ್ ಭೇಟಿಗೆ ಕೆಲವೇ ತಾಸುಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮಾಡಿ 66 ಪಂಜಾಬ್‌ನ ಸೋದರಿಯರು ಹಾಗೂ ಸೋದರರನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ. ಫಿರೋಝ್ ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 42,750 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸಗೈಯಲಾಗುವುದು. ಈ ಯೋಜನೆಗಳಿಂದ ಪಂಜಾಬ್ ಜನತೆಯ ಜೀವನಮಟ್ಟ ಸುಧಾರಣೆಯಾಗಲಿದೆ' ಎಂದು ಹೇಳಿದ್ದರು. ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲು ಎರಡು ಬೃಹತ್‌ಸ್ತೆ ಕಾರಿಡಾರ್

ಯೋಜನೆಗಳಿಗೂ ಅವರು ಶಿಲಾನ್ಯಾಸಗೈಯಲಿದ್ದರು. ಮೋದಿಯವರು 2015ರಲ್ಲಿ ಕೊನೆಯ ಬಾರಿಗೆ ಹುಸೈನಿವಾಲಾಗೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟ ಗಾರರಾದ ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್ ಅವರನ್ನು ಲಾಹೋರ್‌ನಲ್ಲಿ 1931ರ ಮಾರ್ಚ್‌ನಲ್ಲಿ ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ಬಳಿಕ ಈ ಮೂವರ ಅಂತ್ಯಕ್ರಿಯೆಗಳನ್ನು ಹುಸೈನಿವಾಲಾದಲ್ಲಿ ನಡೆಸಲಾಗಿತ್ತು.

ಪ್ರಧಾನಿಯ ಫಿರೋಝ್ಪುರ ರ‍್ಯಾಲಿ ಮುಂದೂಡಿಕೆ

ಪಂಜಾಬ್‌ನ ಫಿರೋಝ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ ಬಿಜೆಪಿ ರ‍್ಯಾಲಿಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ತಿಳಿಸಿದ್ದಾರೆ.

ಫಿರೋಜ್‌ಪುರದಲ್ಲಿ ರ‍್ಯಾಲಿ ನಡೆಯಲಿದ್ದ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಅವರು, ಕೆಲವೊಂದು ಕಾರಣಗಳಿಗಾಗಿ ನರೇಂದ್ರ ಮೋದಿಯವರಿಗೆ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ತಿಳಿಸಿದರು.

ಪ್ರಧಾನಿಯವರು 100 ಹಾಸಿಗೆಗಳ ಪಿಜಿಐ ಸ್ಯಾಟಲೈಟ್ ಸೆಂಟರ್‌ ಆಸ್ಪತ್ರೆ ಸೇರಿದಂತೆ 490 ಕೋಟಿ ರೂ. ಗೂ ಅಧಿಕ ವೆಚ್ಚದ ಮೂರು ವೈದ್ಯಕೀಯ ಸಂಸ್ಥಾಪನೆಗಳಿಗೆ ಶಿಲಾನ್ಯಾಸ ಮಾಡುವವರಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...