ಕಾರವಾರ: ಮೇಜರ್ ರಾಘೋಬಾ ರಾಣೆ ಅವರ ಧೈರ್ಯ, ಸಾಹಸ ಕೊಡುಗೆ ಕೊಂಡಾಡಿದ ಮಹೇಶ ಸಿಂಗ್.

Source: SO News | By Laxmi Tanaya | Published on 22nd September 2021, 10:17 PM | Coastal News |

ಕಾರವಾರ : ಕಾರವಾರದ ಮಣ್ಣಿನ ಮಗ ಹಾಗೂ ಪರಮವೀರ್ ಚಕ್ರ ಪ್ರಶಸ್ತಿ ಪುರಸ್ಕೃತರಾದ ರಾಮಾ ರಾಘೋಬಾ ರಾಣೆ ಇವರು 1948 ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಅವರ ಧ್ಯರ್ಯ ಹಾಗೂ ಕೊಡುಗೆಯು ಅಪಾರ, ಮೂಲತಹ ಕಾರವಾರದವರಾಗಿದ್ದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅಭಿಪ್ರಾಯಪಟ್ಟರು. 

1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳ ವಿಜಯಕ್ಕೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ  ದೇಶದಾದ್ಯಂತ ಸಂಚರಿಸುತ್ತಿರುವ 'ಸ್ವಣಿಮ್ ವಿಜಯ್ ವರ್ಷ (ವಿಜಯದ ಸುವರ್ಣ ವರ್ಷ) ಜ್ಯೋತಿಯನ್ನು ಬುಧವಾರ ಕಾರವಾರದ ಚಾಪೆಲ್ ಯುದ್ಧ ನೌಕಾ ಮ್ಯೂಸಿಯಂ ಆವರಣದಲ್ಲಿರುವ ಮೆಜರ್ ರಾಮಾ ರಾಘೋಬಾ ರಾಣೆ ಅವರ ಸ್ಮಾರಕಕ್ಕೆ ಗೌರವ ಅರ್ಪಿಸಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ದಿ. ರಾಘೋಬಾ ರಾಣೆ ಅವರ ಧರ್ಮಪತ್ನಿ ರಾಜೇಶ್ವರಿ ರಾಣೆ ಅವರಿಗೆ ವಿಕ್ರಮಾದಿತ್ಯ ಹಡಗು ಇರುವ ಕಲಾಕೃತಿ ನೀಡಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಿಇಒ ಪ್ರಿಯಾಂಗಾ. ಎಮ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಉಪ ವಿಭಾಗೀಯ ಅಧಿಕಾರಿ ವಿದ್ಯಾಶ್ರೀ ಚಂದರಗಿ ಹಾಗೂ ಮತ್ತಿತರರು ಉಪಸ್ಠಿತರಿದ್ದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...