ಭಗವಾನ ಮಹಾವೀರ ಜಯಂತಿ ಆಚರಣೆ

Source: so news | By MV Bhatkal | Published on 18th April 2019, 12:02 AM | Coastal News | Don't Miss |

ಕಾರವಾರ: ಸತ್ಯ ಅಹಿಂಸಾ ತತ್ವಾದರ್ಶಗಳನ್ನು ಭೋದಿಸಿದ ಭಗವಾನ ಮಹಾವೀರ ಅವರನ್ನು ಇಂದು ದೇಶದ ಎಲ್ಲ ಸಮುದಾಯದವರು ನೆನೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.
ಭಗವಾನ ಮಹಾವೀರ ಜಯಂತಿ ಅಂಗವಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಗವಾನ ಮಹಾವೀರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
 ಭಗವಾನ ಮಹಾವೀರ ಮತ್ತು ಗೌತಮ ಬುದ್ದ ಸಮಕಾಲಿನರು. ಇಬ್ಬರೂ ಕೂಡಾ ಸತ್ಯ, ಅಹಿಂಸಾ ತತ್ವಸಿದ್ದಾಂತಗಳನ್ನು ಪ್ರಮುಖವಾಗಿ ಭೋದಿಸಿದವರು. ಅವರ ಅಹಿಂಸಾ ಮಾರ್ಗವನ್ನು ಮಹಾತ್ಮಾ ಗಾಂಧಿಜಿಯವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಮೂಲಕ ಯಶಸ್ಸು ಕಂಡವರು. ರಾಜನಾದವನು ಸಾಮಾನ್ಯ ಸನ್ಯಾಸಿಯಾಗುವುದು, ಆಸೆಗಳನ್ನೆಲ್ಲ ಬಿಟ್ಟು,  ಸತ್ಯ ಹೇಳುವುದು ಅವುಗಳನ್ನು  ಅನುಸರಿಸುವುದು ಹೇಳಿದಷ್ಟು ಸರಳವಾಗಿರುವುದಿಲ್ಲ. ಅದನ್ನು ಸರಳವಾಗಿ ಮಾಡಿ ತೋರಿಸಿದವರು ಭಗವಾನ ಮಹಾವೀರರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. . 
ಅಪರ ಜಿಲ್ಲಾಧಿಕಾರಿ ನಾಗರಾರ ಸಿಂಗ್ರೇರ್ ಅವರು ಮಾತನಾಡಿ ಇಂದು ನಾವೆಲ್ಲರೂ ಆಸ್ತಿ, ಅಂತಸ್ತು, ಸೈಟು, ಕಾರು ಸಂಪಾಧಿಸುವದರಲ್ಲೇ ಕಳೆದು ಹೊಗಿದ್ದೆವೆ. ಮಾನವ ಸಂಬಂಧಗಳು ಸಡಿಲಗೊಂಡಿವೆ.  ಆಸೆಯೇ ದುಂಖಕ್ಕೆ ಕಾರಣ ಎಂದು ಭಗವಾನ ಮಹಾವೀರರು ಹೇಳಿದಂತಹ ಮಾತನ್ನು ಒಮ್ಮೆ ನಾವು ಅವಲೋಕಿಸಬೇಕಾಗಿದೆ. ದಯೆ, ಧರ್ಮ, ಸತ್ಯ, ಅಹಿಂಸೆ, ಭಕ್ತಿ ಮಾರ್ಗದಲ್ಲಿ ಮೋಕ್ಷವನ್ನು ಹೊಂದಬೇಕೆಂದು ಅವರು ಅಭಿಪ್ರಾಯ ಪಟ್ಟರು. 
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾದ ಹಿಂತರಾಜು. ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋಬೇಸನರಿ ಐ.ಎ.ಎಸ್. ಅಧಿಕಾರಿ ದೀಲಿರ ಸಸಿ, ಸಹಾಯಕ ಕಮೀಶನರ್ ಅಭಿಜಿನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ. ಪುರುಸೋತ್ತಮ ಇತರರು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...