ಲಕ್ನೋ: ಬಕ್ರೀದ್ ಹಬ್ಬವನ್ನು ಕುರಿಯ ಆಕೃತಿಯ ಕೇಕ್ ಕತ್ತರಿಸುವ ಮೂಲಕ ಆಚರಿಸಲು ಬಿಜೆಪಿ ಕರೆ-ದ್ವಂದ್ವಾರ್ಥಕ್ಕೆ ಒವೈಸಿ ವಿರೋಧ

Source: so english | By Arshad Koppa | Published on 13th September 2016, 11:02 AM | National News | Incidents |

ಲಕ್ನೋ, ಸೆ ೧೩: ಜೀವಂತ ಕುರಿಯ ಬದಲು ಬಕ್ರೀದ್ ನ ಸಂದರ್ಭದಲ್ಲಿ ಕುರಿಯ ಆಕೃತಿಯ ಕೇಕ್ ಕತ್ತರಿಸಿ ಪರಿಸರ ಸ್ನೇಹಿ ರೀತಿಯಲ್ಲಿ ಹಬ್ಬ ಆಚರಿಸಲು ಬಿಜೆಪಿ ಪಕ್ಷದ ಉತ್ತರ ಪ್ರದೇಶದ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಕರೆ ನೀಡಿದ್ದಾರೆ. ಈ ಕರೆಯ ಬಗ್ಗೆ ಪ್ರತಿಕ್ರಿಯಿಸಿದ AIMIM ನೇತಾರ ಅಸದುದ್ದೀನ್ ಒವೈಸಿಯವರು ಈ ಕರೆಯಲ್ಲಿ ದ್ವಂದ್ವಾರ್ಥವಿದ್ದು ಈ ಮೂಲಕ ಹಿಂದುತ್ವವನ್ನು ಬಲವಂತವಾಗಿ ಹೇರುವ ಹುನ್ನಾರವಾಗಿದೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ಭಾರತದಲ್ಲಿ ಪ್ರಾಣಿಯನ್ನು ಬಲಿ ಕೊಡುವವರು ಕೇವಲ ಮುಸ್ಲಿಮರು ಮಾತ್ರವಲ್ಲ, ಹಾಗೂ ಕೇವಲ ಬಕ್ರೀದ್ ಸಮಯದಲ್ಲಿ ಮಾತ್ರವೂ ಅಲ್ಲ. ಭಾರತದಲ್ಲಿರುವ ಬಹುಸಂಖ್ಯಾತರಲ್ಲಿಯೇ ಮಾಂಸಾಹಾರಿಗಳಿದ್ದು ಇವರೆಲ್ಲಾ ನೀಡುವ ಬಲಿಗಳನ್ನೂ ಕೇಕ್ ಮೂಲಕ ಬದಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದು ಹಿಂದುತ್ವವನ್ನು ಹೇರುವ ಪ್ರಯತ್ನವಾಗಿದ್ದು ಇದನ್ನು ನೇರವಾಗಿ ಹೇರುವ ಬದಲು ದ್ವಂದ್ವಾರ್ಥದ ಮೂಲಕ ಹೇರಲಾಗುತ್ತಿದೆ ಎಂದರು.

ಜಮೀಯತುಲ್ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿಯವರು ಈ ಬಗ್ಗೆ ಪ್ರತಿಕ್ರಿಯಿಸಿ ಬಕ್ರೀದ್ ಹಬ್ಬವನ್ನು ಹೇಗೆ ಆಚರಿಸಬೇಕೆಂಬುದು ಪ್ರಶ್ನಾತೀತವಾಗಿದ್ದು ಈ ಬಗ್ಗೆ ಯಾವುದೇ ಮಾನವರ ಹಸ್ತಕ್ಷೇಪ ಸಾಧ್ಯವೇ ಇಲ್ಲ. ಜಾತೀಯತೆ ಇಂದು ಎಲ್ಲೆಲ್ಲೂ ತಾಂಡವವಾಡುತ್ತಿದ್ದು ಇದಕ್ಕೆ ಪ್ರತಿ ಧರ್ಮದ ತಳಹದಿಯ ಬಗ್ಗೆ ಆ ಧರ್ಮೀಯರ ಅಸಡ್ಡೆ ಮತ್ತು ನಿರಾಸಕ್ತಿಯೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 

ಆದರೆ ಆರೆಸ್ಸೆಸ್ ಬೆಂಬಲಿತ ಅವಧ್ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಸಂಘಟನೆ ಕೇಕ್ ಕತ್ತರಿಸುವ ಕ್ರಮವನ್ನು ಬೆಂಬಲಿಸಿ ಇಂದಿನ ದಿನ ಕುರಿಯಾಗಲೀ ಇತರ ಯಾವುದೇ ಪ್ರಾಣಿಯನ್ನಾಗಲೀ ಬಲಿ ಕೊಡದಿರಲು ನಿರ್ಧರಿಸಿದೆ. ಬದಲಿಗೆ ಕೇಕ್ ಕತ್ತರಿಸಿ ಆಚರಿಸಲು ನಿರ್ಧರಿಸಲಾಗಿದೆ.  ಮಂಚ್ ನ ಸದಸ್ಯರು ಬಿರಿಯಾನಿ ತಯಾರಿಸದೇ ಕೇವಲ ಶ್ಯಾವಿಗೆ ಪಾಯಸ ದಹಿವಡಾ ಮಾತ್ರ ತಯಾರಿಸಲಾಗಿದೆ. 

ಬಕ್ರೀದ್ ಅನ್ನು ಯಾವುದೇ ಹುಟ್ಟುಹಬ್ಬದ ಪಾರ್ಟಿಯ ರೂಪದಲ್ಲಿ ಕೇಕ್ ಕತ್ತರಿಸುವ ಮೂಲಕವೂ ಆಚರಿಸಿಕೊಳ್ಳಬಹುದು ಎಂದು ಅವಧ್ ಪ್ರಾಂತ ಸಮಾವೇಶಕರಾದ ರಯೀಸ್ ಖಾನ್ ರವರು ತಿಳಿಸಿದ್ದಾರೆ. ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಇತರ ಪ್ರಾಂತಗಳಲ್ಲಿಯೂ ಅನುಸರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ. 
 

Read These Next

ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ 123000 ಕ್ಯುಸೆಕ್ ನೀರು ಬಿಡುಗಡೆ

ಕಲಬುರಗಿ : ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 108000 ಕ್ಯುಸೆಕ್ ...

ಈತ ಭಯಂಕರ ಕಳ್ಳ. ಜೈಲುಗೋಡೆಯ ರಂದ್ರದಲ್ಲಿ ಎಸ್ಕೇಪ್ಗೆ ಯತ್ನಿಸಿದ. ಪ್ರಾಣ ಉಳಿಸಿ ಎಂದು ಗೋಗರೆದ‌

ಬ್ರಿಜಿಲ್ : ಕಳ್ಳತನ ಮಾಡಿ ಜೈಲು ಸೇರಿದ ಕಳ್ಳನೋರ್ವ ಜೈಲಿನಿಂದ ಪರಾರಿಯಾಗಲು ಯತ್ನಿಸಿ ಜೈಲಿನ ಗೋಡೆಯಲ್ಲಿ ಸಿಲುಕಿ ಒದ್ದಾಡಿದ ಘಟನೆ ...

ಟಿಆರ್‌ಪಿ ತಿರುಚಿದ ಪ್ರಕರಣ; ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ ಗೆ ಸಮನ್ಸ್

ಹೊಸದಿಲ್ಲಿ: ಈಗ ನಡೆಯುತ್ತಿರುವ ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶುಕ್ರವಾರ ರಿಪಬ್ಲಿಕ್ ಟಿವಿಯ ಮುಖ್ಯ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...