ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದಲ್ಲಿ ಶಾಂತಿಯುತ ಮತದಾನ; ಶೇ. 74.07% ಮತದಾನ

Source: S O News Service | By I.G. Bhatkali | Published on 23rd April 2019, 9:58 PM | Coastal News | State News |

ಕಾರವಾರ : ಲೋಕಸಭಾ ಸಾರ್ವತ್ರಿಕಚುನಾವಣೆಗೆ ಉತ್ತರಕನ್ನಡ ಲೋಕಸಭಾ ಮತಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು. 

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರೀಯೆ ಪ್ರಾರಂಬಗೊಂಡಿದ್ದು,, ಮತದಾರರು ಬೆಳಗ್ಗಿನಿಂದಲೇ ಮತದಾನ ಕೇಂದ್ರಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು. 
  ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಮತದಾರರು ಶಾಂತಿಯುತವಾಗಿ ಮತ್ತು ಉತ್ಸಾಹದಿಂದ ತಮ್ಮ ಮತ ಚಲಾಯಿಸಿದರು. ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಬಂದೋಬಸ್ತ ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. 

ಮೊದಲ ಬಾರಿ ಮತಚಲಾಯಿಸಿದ ಮತದಾರರು. : ಸುಚಿತ್ರಾ ದಿಗಂಬರ ನಾಯ್ಕ, ಸೋನಾಲಿ ಕೋಠಾರಕರ್, ಮನಾಲಿ ಗೋವೆಕರ್ ಅವರು ಮೊದಲ ಬಾರಿ ಮತಚಲಾಯಿಸಿದವರಾಗಿದ್ದು, ತಾವು ಲೋಕಸಭಾ ಚುನಾವಣೆಗೆ ಮತಚಲಾಯಿಸಿದ್ದು ತುಂಬಾ ಖುಷಿಯಾಯಿತೆನ್ನುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು.

ಯುವ ಮತದಾರರಲ್ಲಿ ಉತ್ಸಾಹ : ಉರಿ ಬಿಸಲನ್ನು ಲೆಕ್ಕಿಸದಯುವ ಮತದಾರರು ವಿವಿಧ ಮತಗಟ್ಟೆಗಳಿಗೆ ತೆರಳಿ ವೋಟು ಹಾಕಿ ಮತದಾನ ಪ್ರಕ್ರೀಯೆಯಲ್ಲಿ ಉತ್ಸಾಹ ತೋರಿದರು. ಮತಗಟ್ಟೆ ಸಂಖ್ಯೆ 173 ರಲ್ಲಿ ಹೆಚ್ಚಿನ ಯುವ ಮತದಾರರು ಮತ ಚಲಾಯಿಸಿದ ದೃಶ್ಯ ಕಂಡು ಬಂದಿತು. 

ದಿವ್ಯಾಂಗರಲ್ಲೂ ಮತದಾನ ಉತ್ಸಾಹ : ದಿವ್ಯಾಂಗರು ಕೂಡಾ ತಮ್ಮ ಪಾಲಕರು, ಪೋಷಕರೊಂದಿಗೆ ಮತಗಟ್ಟೆಗಳಿಗೆ ತೆರಳಿ ತಮ್ಮ ಅಮೂಲ್ಯವಾದ ಮತ ನೀಡಿದರು. ಮತಗಟ್ಟೆ ಸಂಖ್ಯೆ 15 ರಲ್ಲಿ ಗುರುಪ್ರಸಾದ ಸುರೇಶ ನಾಯ್ಕ ಅವರು ತಮ್ಮ ಅಂಗವೈಕಲ್ಯವನ್ನು ಮರೆತು ಗಾಲಿಕುರ್ಚಿಯಲ್ಲಿ ಕುಳಿತು ಮತಗಟ್ಟೆಯಲ್ಲಿ ಮತಚಾಯಿಸಿದ್ದು ಇತರೇ ವಿಕಲಚೇತನ ಮತದಾರರಿಗೆ ಮಾದರಿಯಾಯಿತು.

ಅಧಿಕಾರಿ ದಂಪತಿಗಳಿಂದ ಮತದಾನ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಮ್. ರೋಶನ್ ಹಾಗೂ ಅವರ ಪತ್ನಿ ಶ್ರೀಮತಿ ಅಂಕಿತಾ ಅವರು ನಗರದ ಸೆಂಟ್ ಮೈಕಲ್ ಶಾಲೆ ಮತಗಟ್ಟೆ ಸಂಖ್ಯೆ 100 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

 ಹಿರಿಯರಲ್ಲಿ ಕುಗ್ಗದ ಮತದಾನ ಉತ್ಸಾಹ :ಅಂಕೋಲಾ ತಾಲೂಕಿನ ಬಡಗೇರಿಯಲ್ಲಿ ಹಾಲಕ್ಕಿ ಸಮುದಾಯದ 57 ವರ್ಷದ ಯಮುನಾ ಸುಬ್ರಮಣಿ ಗೌಡ, 60 ವರ್ಷ ವಯೋಮಾನದ ಮಂಕಾಳಿ ಸುಕ್ರಗೌಡ, 65 ವಯಸ್ಸಿನ ಕಡಬಿ ಗೌಡ ಮತದಾನ ಮಾಡಲು ಇತರ ಹಾಲಕ್ಕಿ ಸಮುದಾಯ ಮಹಿಳೆಯರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತ ಚಲಾಯಿಸಿ ತಾವು ಮತ ಚಲಾಯಿಸುವ ಉತ್ಸಾಹ ಕಳೆದುಕೊಂಡಿಲ್ಲ ಎಂಬುದನ್ನು ತೋರಿಸಿದರು. 

ಸಖಿ ಮತಗಟ್ಟೆ : ಜಿಲ್ಲೆಯಲ್ಲಿ 11 ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳನ್ನಾಗಿ ಮಾರ್ಪಡಿಸಲಾಗಿತ್ತು.  ಸಖಿ ಮತಗಟ್ಟೆಯುನ್ನು ನೀಲಿ ಬಣ್ಣ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಈ ಮತಗಟ್ಟೆಯ ಸಿಬ್ಬಂದಿಗಳೆಲ್ಲ ಮಹಿಳೆಯರಾಗಿದ್ದರು. ಇಲ್ಲಿ ಬರುವ ಮಹಿಳಾ ಮತದಾರರ ಮಕ್ಕಳಿಗೆ ಆಟ ಆಡಲುಆಟಿಕೆ ಸಾಮಾನುಗಳ ವ್ಯವಸ್ಥೆ ಮಾಡಲಾಗಿತ್ತು.

 ಮಾಜಿ ಶಾಸಕ, ಸಚಿವರಿಂದ ಮತದಾನ : ಮಾಜಿ ಶಾಸಕರಾದ ಸತೀಶ ಸೈಲ್‍ಅವರು ಮಾಜಾಳಿಯ ಸೈಲ್‍ವಾಡಾದ ಮತಗಟ್ಟೆ ಸಂಖ್ಯೆ 12 ರಲ್ಲಿತಮ್ಮ ಮತ ಚಲಾಯಿಸಿದರೆ, ಮಾಜಿ ಸಚಿವ ಹಾಗೂ ಲೋಕಸಭಾ ಚುನಾವಣೆ 2019ರ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರು ಮತಗಟ್ಟೆ ಸಂಖ್ಯೆ 109 ರಲ್ಲಿ ತಮ್ಮ ತಾಯಿಯೊಂದಿಗೆ ಮತ ಚಲಾಯಿಸಿದರು. 

ಶೇಕಡಾವಾರು ಮತದಾನ :    ಬೆಳಗಾವಿಂ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ  ಉತ್ತರ ಕನ್ನಡ  ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ  ಶೇ. 74.07 % ಮತದಾನವಾಗಿದೆ. 

Read These Next

ಉಪವಿಭಾಗಾಧಿಕಾರಿ ಕಚೇರಿ ಎದುರು ನಾರಾಯಣಗುರುನಗರದ ನಿವಾಸಿಗಳ ಪ್ರತಿಭಟನೆ ಕಂದಾಯ ಇಲಾಖೆ ಆದೇಶ ಹಿಂಪಡೆಯಲು ಒತ್ತಾಯ

ತಾಲೂಕಿನ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಫಾರೆಸ್ಟ್ ಆಗಿಲ್ಲ ಎಂಬ ನೆಪವೊಡ್ಡಿ, ಯಾವುದೇ ವ್ಯವಹಾರ ನಡೆಸದಂತೆ ...