ಹೊಸದಿಲ್ಲಿ: ದಿಲ್ಲಿಗೆ ಲೆಫ್ಟಿನೆಂಟ್ ಗವರ್ನರ್ ಸಾರ್ವಭೌಮ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

Source: VB | By S O News | Published on 24th March 2021, 6:34 PM | National News |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಆಪ್ ಸೇರಿದಂತೆ ಪ್ರತಿಪಕ್ಷಗಳ ಪ್ರಬಲ ವಿರೋಧದ ನಡುವೆ, ದಿಲ್ಲಿಯ ಗವರ್ನ‌್ರ ಗೆ ಹೆಚ್ಚಿನ ಅಧಿಕಾರವನ್ನು ನೀಡುವ 'ರಾಷ್ಟ್ರೀಯ ರಾಜಧಾನಿ ದಿಲ್ಲಿ (ತಿದ್ದುಪಡಿ) ವಿಧೇಯಕ 2021'ನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.

'ದಿಲ್ಲಿ ಸರಕಾರ ಎಂದರೆ, ಲೆಫ್ಟಿನೆಂಟ್ ಗವರ್ನರ್' ಎಂಬುದನ್ನು ನೂತನ ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ವಿಧೇಯಕವು ದಿಲ್ಲಿ ಮುಖ್ಯಮಂತ್ರಿಯವರ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ದಿಲ್ಲಿಯ ಆಡಳಿತಾರೂಢ ಪಕ್ಷವಾದ ಆಮ್ #ಆದ್ಮಿ ಪಾರ್ಟಿ (ಎಎಪಿ) ಆಪಾದಿಸಿದೆ. ಕಾಂಗ್ರೆಸ್ ಕೂಡಾ ಈ ವಿಧೇಯಕವನ್ನು ವಿರೋಧಿಸಿದ್ದು, ಅಸಾಂವಿಧಾನಿಕವಾದುದೆಂದು ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸಹಾಯಕ ಗೃಹ ಸಚಿವ ಜಿ.ಕಿಶನ್ ರೆಡ್ಡಿ ಅವರು ವಿಧೇಯಕದ ಕುರಿತ ಚರ್ಚೆಯಲ್ಲಿ 

ದಿಲ್ಲಿ ಸರಕಾರ ಎಂದರೆ ಲೆಫ್ಟಿನೆಂಟ್ ಗವರ್ನರ್: ವಿಧೇಯಕದ ವ್ಯಾಖ್ಯಾನ

ದಿಲ್ಲಿ ಸರಕಾರವು ತನ್ನ ಎಲ್ಲಾ ಆಡಳಿತಾತ್ಮಕ ಕಾರ್ಯನಿರ್ವಹಣೆ ಬಗ್ಗೆ ಗವರ್ನ‌್ರಗೆ ಮಾಹಿತಿಯನ್ನು ನೀಡುವುದು ಕಡ್ಡಾಯ

ವಿಧೇಯಕ ಅಸಾಂವಿಧಾನಿಕ: ಆಪ್, ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳ ಆಕ್ರೋಶ

ದಿಲ್ಲಿ ಸರಕಾರವೆಂದರೆ ಗವರ್ನರ್ ಎಂದು ಸ್ಪಷ್ಟ ಪಡಿಸುವ ಈ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರ ಗೊಂಡಿರುವುದು ರಾಷ್ಟ್ರದ ರಾಜಧಾನಿಯ ಜನತೆಗೆ ಮಾಡಿದ ಅಪಮಾನ. 9

|ಅರವಿಂದ ಕೇಜ್ರವಾಲ್, ದಿಲ್ಲಿ ಮುಖ್ಯಮಂತ್ರಿ

ದಿಲ್ಲಿ ಸರಕಾರದ ಕಾರ್ಯನಿರ್ವಹಣೆಗೆ ಸಂಬಂಧಿಸಿ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಅಸ್ಪಷ್ಟತೆ ಇದೆ ಹಾಗೂ ಈ ಬಗ್ಗೆ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಈ ವಿಧೇಯಕವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.

ಜಿ.ಕಿಶನ್ ರೆಡ್ಡಿ, ಸಹಾಯಕ ಗೃಹ ಸಚಿವ

ಪಾಲ್ಗೊಂಡು ಮಾತನಾಡುತ್ತಾ ಇದೊಂದು ರಾಜಕೀಯ ಪ್ರೇರಿತ ವಿಧೇಯಕವೆಂದು ಹೇಳಬಾರದೆಂದು  ಪ್ರತಿಪಕ್ಷಗಳಿಗೆ ಮನವಿ ಮಾಡಿದರು. “ಕೇಂದ್ರಾಡಳಿತ ಪ್ರದೇಶ ದಿಲ್ಲಿಯ ಆಡಳಿತಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಇರುವ ಈ ಅಸ್ಪಷ್ಟತೆಯನ್ನು ಈ ವಿಧೇಯಕ ಕೊನೆಗೊಳಿಸಲಿದೆ. ವಿಧೇಯಕವು ದಿಲ್ಲಿ ಆಡಳಿತದ ಕೆಲವು ನಿರ್ದಿಷ್ಟ ಗೊಂದಲಗಳು,ತಾಂತ್ರಿಕ ತೊಂದರೆಗಳಿಗೆ ಅಂತ್ಯ ಹಾಡಲಿದೆಹಾಗೂ ಆಡಳಿತದಲ್ಲಿ ದಕ್ಷತೆಯನ್ನು ವೃದ್ಧಿಸಲಿದೆ ಎಂದು ಅವರು ಹೇಳಿದರು.

ಆಡಳಿತಕ್ಕೆ ಸಂಬಂಧಿಸಿ ದಿಲ್ಲಿ ಸರಕಾರವು ಯಾವುದೇ ಕಾರ್ಯನಿರ್ವಹಣಾ ಕ್ರಮವನ್ನು ಕೈಗೊಳ್ಳುವ ಮುನ್ನ ಅದು ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯವನ್ನು ಪಡೆಯುವುದನ್ನು ಈ ವಿಧೇಯಕವು ಕಡ್ಡಾಯಗೊಳಿಸುತ್ತದೆ.

1996ರವರೆಗೆ ಕೇಂದ್ರ ಹಾಗೂ ದಿಲ್ಲಿ ಸರಕಾರದ ನಡುವೆ ಸೌಹಾರ್ದಯುತ ಬಾಂಧವ್ಯಗಳಿದವು ಹಾಗೂ ತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಅವು
ಮಾತುಕತೆಗಳ ಮೂಲಕ ಬಗೆಹರಿಸಿದ್ದವು. 2015ರಿಂದೀಚೆಗೆ ಕೆಲವು ವಿವಾದಗಳು ಉದ್ಭವಿಸಿದವು ಹಾಗೂ ದಿಲ್ಲಿ ಹೈಕೋಟ್ ೯ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಕೆಲವೊಂದು ತೀರ್ಪುಗಳು ಬಂದಿದ್ದವು ಎಂದು ರೆಡ್ಡಿ ತಿಳಿಸಿದರು. ಸರಕಾರದ ಕಾರ್ಯನಿರ್ವಹಣೆಗೆ ಸ೦ಬ೦ಧಿಸಿದ ವಿಷಯಗಳ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿತ್ತು ಎಂದು ಅವರು ತಿಳಿಸಿದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...