ಉಡುಪಿ: ಸಂಪೂರ್ಣ ಲಾಕ್ಡೌನ್

Source: sonews | By Staff Correspondent | Published on 5th July 2020, 6:31 PM | Coastal News |

ಉಡುಪಿ: ಸಂಡೆ ಲಾಕ್ಡೌನ್ ಗೆ ಉಡುಪಿ ಜಿಲ್ಲೆ ಅಕ್ಷರಶಃ ಸ್ಥಬ್ಧಗೊಂಡಿದೆ. ಕೊರೋನ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ರವಿವಾರ ಉಡುಪಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿತ್ತು.

ಆಸ್ಪತ್ರೆ, ಕ್ಲಿನಿಕ್, ಕೆಲವೊಂದು ಮೆಡಿಕಲ್, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಹೊರತು ಪಡಿಸಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಬೆಳ್ಳಗೆಯಿಂದ ಬಂದ್ ಆಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆರಣಿಕೆಯ ಸರಕು ಸಾಗಾಟ ವಾಹನಗಳನ್ನು ಬಿಟ್ಟರೆ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ.

ಲಾಕ್‌ಡೌನ್‌ನಿಂದಾಗಿ ಜನ ಮನೆಯಿಂದ ಹೊರಗಡೆ ಬಂದಿಲ್ಲ. ಜಿಲ್ಲಾಡಳಿತ ಮುಂಚಿತವಾಗಿ ಅನುಮತಿ ನೀಡಿರುವ ವಿವಾಹ ಸಮಾರಂಭಗಳು ನಡೆದಿವೆ. ಸರಕಾರಿ, ಖಾಸಗಿ, ಸಿಟಿ ಬಸ್‌ಗಳು, ರಿಕ್ಷಾ, ಕಾರುಗಳು ರಸ್ತೆಗೆ ಇಳಿದಿಲ್ಲ. ತರಕಾರಿ, ಕೋಳಿ ಮಾಂಸದ ಅಂಗಡಿಗಳು ಕೂಡ ಬಂದ್ ಆಗಿರುವುದು ಕಂಡುಬಂತು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Read These Next