ಲಾಕ್‍ಡೌನ್ ಮರೆತ ಭಟ್ಕಳ; ಮರಳಿ ಹಳಿಗೆ ಜನ ಸಂಚಾರ ಬಾಗಿಲು ತೆರೆದುಕೊಂಡ ಅಂಗಡಿಗಳು;

Source: S O News service | By I.G. Bhatkali | Published on 15th June 2021, 1:07 AM | Coastal News |

ಭಟ್ಕಳ: ತಾಲೂಕಿನಾದ್ಯಂತ ಕೊರೊನಾ ತಡೆ ಲಾಕ್‍ಡೌನ್ ಸಡಿಲಿಕೆಯ ನಂತರ ಆತಂಕ ಮರೆತ ಜನರು ಪೇಟೆಯತ್ತ ಮುಖ ಮಾಡಿದರು. 

ಭಟ್ಕಳ ಪಟ್ಟಣ ಈ ಹಿಂದಿನಂತೆ ಜನರು ಹಾಗೂ ವಾಹನಗಳಿಂದ ತುಂಬಿ ಹೋಯಿತು. ಮೋಟಾರ್ ಬೈಕ್‍ಗಳೊಂದಿಗೆ ಕಾರುಗಳ ಓಡಾಟವೂ ಜೋರಾಗಿತ್ತು. 2 ತಿಂಗಳ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಟೋ ರಿಕ್ಷಾಗಳೂ ರಸ್ತೆಗೆ ಇಳಿದಿದ್ದವು. ಪರಿಣಾಮವಾಗಿ ಕಿರಿದಾದ ಭಟ್ಕಳ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಗಾಗ್ಗೆ ವಾಹನ ದಟ್ಟಣೆ ನಿರ್ಮಾಣವಾಗುತ್ತಲೇ ಇತ್ತು.

ರಾಷ್ಟ್ರೀಯ ಹೆದ್ದಾರಿಯೂ ಲಾಕ್‍ಡೌನ್ ಮುಕ್ತ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ದಿನಸಿ, ತರಕಾರಿ, ಕೊಡೆ, ರೇನ್‍ಕೋಟ್, ಚಪ್ಪಲಿ, ಮನೆ ಬಳಕೆಯ ಸಾಮಾನು ಅಂಗಡಿಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡು ಬಂದರು. ಅಲ್ಲಲ್ಲಿ ಬಟ್ಟೆ, ಆಟೋಮೊಬೈಲ್ ಇತ್ಯಾದಿ ಅಂಗಡಿಗಳು ಅರ್ಧ ಬಾಗಿಲು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದವು.

ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನರು ತಮ್ಮ ಪಾಡಿಗೆ ತಾವು ಓಡಾಡಿಕೊಂಡೇ ಇದ್ದರು. ಪೊಲೀಸರೂ ಜನ ದಟ್ಟಣೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. 2 ಗಂಟೆಯ ನಂತರವೂ ಪೇಟೆಯಲ್ಲಿ ಚಟುವಟಿಕೆ ನಿರಂತರವಾಗಿಯೇ ನಡೆದಿರುವುದು ಕಂಡು ಬಂತು. ಕೆಲ ಹೊತ್ತಿನ ನಂತರ ಮೊಳಗಿದ ಪೊಲೀಸ್ ಸೈರನ್ ವಾಹನ ಓಡಾಟಗಳಿಗೆ ಮಿತಿ ಹೇರಲು ಸಫಲವಾಯಿತು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...