ರಾಜಕೀಯ ಜಂಜಾಟ ಬಿಟ್ಟು ಕೋವಿಡ್ ಬಗ್ಗೆ ಯೋಚಿಸಲಿ: ಮಾಜಿ ಸಚಿವ ಯು ಟಿ ಖಾದರ್

Source: SO News | By Laxmi Tanaya | Published on 18th June 2021, 10:45 AM | Coastal News |

ಮಂಗಳೂರು: ರಾಜ್ಯದಲ್ಲಿ‌ ನಾಯಕತ್ವ ಬದಲಾವಣೆ ವಿಚಾರ
ರಾಜಕೀಯ ಕಿತ್ತಾಟಕ್ಕಾಗಿ ಮಾಡುತ್ತಿರುವ ಕಚ್ಚಾಟ ಜನರಿಗೆ ಮಾಡುವ ದ್ರೋಹವಾಗಿದೆ ಎಂದು ಮಾಜಿ ಸಚಿವ, ಶಾಸಕ ಯು ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕರುಣೆ ಇಲ್ಲದ ರಾಜ್ಯ ಸರ್ಕಾರ . ಕೋವಿಡ್ ಸಂದರ್ಭದಲ್ಲಿ ರಾತ್ರಿ‌‌ ಸಭೆಗಾಗಿ ಕ್ಯೂ ನಿಂತಿದ್ದರಾ..? ಅಧಿಕಾರದ ಕಚ್ಚಾಟಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ. ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಜಕೀಯ ಜಂಜಾಟ ಬಿಟ್ಟು ಕೋವಿಡ್ ಬಗ್ಗೆ ಯೋಚಿಸಲಿ. ಸರ್ಕಾರ ಜನರಿಗೆ ಧೈರ್ಯ ನೀಡುವ ಬಗ್ಗೆ ಆಲೋಚನೆ ಮಾಡಬೇಕಾಗಿದೆ ಎಂದು ಯು ಟಿ ಖಾದರ್ ಹೇಳಿಕೆ ನೀಡಿದರು.

ಇನ್ನೂ  ಉಳ್ಳಾಲದಲ್ಲಿ ಕಡಲ್ಕೊರೆತ ವಿಚಾರ ಈ ಸಲದ ಭಾರೀ ಮಳೆಗೆ ಅನೇಕ ಹಾನಿಯಾಗಿದೆ. ಮುಂಚೆನೇ ನಾನು ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ್ದೆ.
ತಜ್ಞರ ತಂಡವನ್ನು ಕಳುಹಿಸಲು ನಾನು ಡಿಸಿ‌ ನಡೆಸಿದ ಸಭೆಯಲ್ಲಿ ಹೇಳಿದ್ದೆ. ಇದೀಗ ಮತ್ತೆ ನಾನು ಉನ್ನತ ನಾಯಕರ ಸಭೆಯನ್ನು ಕರೆಯಲು ಆಗ್ರಹಿಸುತ್ತೇನೆ ಎಂದರು.

Read These Next