ಮುಂಡಗೋಡ: ಮಹಿಳೆಯರಿಗಾಗಿ ಕಾನೂನು ಅರಿವು

Source: Nazir Tadapatri | By S O News | Published on 23rd January 2021, 9:13 PM | Coastal News |

ಮುಂಡಗೋಡ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ, ವಕೀಲರ ಸಂಘ ಮುಂಡಗೋಡ, ಪೆÇಲೀಸ್ ಇಲಾಖೆ ಮುಂಡಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಕಂದಾಯ ಇಲಾಖೆ ಮುಂಡಗೋಡ ಕೆನರಾ ದೇಶಪಾಂಡೆ ರುಡ್‍ಶೆಟ ಸಂಸ್ಥೆ ಕರಗಿನಕೊಪ್ಪ ಹಾಗೂ ಮುಂಡಗೋಡದ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಕಾನೂನು ಕಾರ್ಯಕ್ರಮವನ್ನು ಶನಿವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.

ಮುಖ್ಯೋಧ್ಯಾಪಕಿ ಆರ್. ಎ. ಪಿಳ್ಳೆ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇದ್ದಾಗ ಮಾತ್ರ ತಪ್ಪುಗಳು ಸಂಭವಿಸುವುದು ಕಡಿಮೆ. ಗ್ರಾಮೀಣ ಭಾಗದಲ್ಲಿ ನ್ಯಾಯಾಂಗ ಇಲಾಖೆ ಕಾನೂನಿನ ಅರಿವು ಮೂಡಿಸುತ್ತಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು. ಇಂತಹ ಕಾನೂನು ಅರಿವು ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದರು

ನ್ಯಾಯವಾದಿ ಆರ್. ಎಂ. ಮಳಗೀಕರ್ ಮಾತನಾಡಿ ಸಾರ್ವಜನಿಕರಲ್ಲಿ ಕಾನೂನಿನ ಕುರಿತು ಜಾಗೃತಿ ಮೂಡಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಕಾನೂನನ್ನು ಮೀರಿ ನಾವು ಬದುಕಲು ಆಗುವುದಿಲ್ಲ. ಅಂತಹ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರವು ಕಾನೂನು ಸೇವಾ ಪ್ರಾಧಿಕಾರದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಕಾನೂನುಗಳು, ಬಾಲ್ಯ ವಿವಾಹ ನಿಷೇಧ, ಗ್ರಾಹಕರ ರಕ್ಷಣಾ ಕಾಯ್ದೆ, ಪೆÇಸ್ಕೋ ಕಾಯ್ದೆ, ¨Às್ರೂಣ ಹತ್ಯೆ ನಿಷೇದ ಕಾಯ್ದೆ, ಹೀಗೆ ಹಲವಾರು ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.

ನ್ಯಾಯವಾದಿ ಆರ್. ಎಸ್. ಹಂಚಿನಮನಿ ಜನನ-ಮರಣ ನೊಂದಣಿ, ಹಾಗೂ ಕಾನೂನು ಸೇವಾ ಪ್ರಾಧಿಕಾರದ ಗುರಿ ಮತ್ತು ಉದ್ದೇಶಗಳ ಕುರಿತು ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಆರ್. ಸಿ. ಮಳೇಕರ್, ಪ್ರದೀಪ ಶಿವನಗೌಡ್ರ, ಶಿಕ್ಷಕ ಶಂಕರ ಮಡಿವಾಳ(ಪಾಳಾ), ಗ್ರಾ.ಪಂ ಸದಸ್ಯ ಪಾಲಾಕ್ಷಯ್ಯ ವೆಂಕಟಾಪುರಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದರಿ ಕಾರ್ಯಕ್ರಮದಲ್ಲಿ ಮಹಿಳೆಯರು, ವಿಧ್ಯಾರ್ಥಿಗಳು ಶಾಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ರುಡ್‍ಸೆಟ್ ನ ಸಂಯೋಜಕರಾದ ಶಿವಾನಂದ ಪೂಜಾರ ಮಾಡಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...