ಐಎಂಎ ಕಂಪನಿಯಲ್ಲಿ ಹಣ ಹೂಡಿ ಮೋಸ ಹೋದವರಿಗೆ ಎಪಿಸಿಆರ್ ನಿಂದ ಕಾನೂನು ನೆರವು

Source: so news | By Manju Naik | Published on 17th June 2019, 6:08 PM | Coastal News | Don't Miss |

ಭಟ್ಕಳ: ಬೆಂಗಳೂರಿನ ಐಎಂಎ ಕಂಪನಿಯಲ್ಲಿ ಬಂಡವಾಳ ಹೂಡಿ ಮೋಸ ಹೋದ ಗ್ರಾಹಕರಿಗೆ ನಾಗರೀಕ ಹಕ್ಕು ಸಂರಕ್ಷಣಾ ಸಂಸ್ಥೆ(ಎಪಿಸಿಆರ್) ಕಾನೂನು ನೆರವು ನೀಡುವುದಾಗಿ  ಎಪಿಸಿಆರ್ ರಾಜ್ಯಸಮಿತಿ ಸದಸ್ಯ ಇನಾತುಲ್ಲಾ ಗವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿರುವ ಸಂಸ್ಥೆಯ ನ್ಯಾಯಾವಾದಿಗಳ ತಂಡವು ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಈಗ ತಮ್ಮ ಹಣಕ್ಕಾಗಿ ಕಾನೂನು ಹೋರಾಟ ನಡೆಸಿರುವ ಸಂತೃಸ್ತರಿಗೆ ಅಗತ್ಯ ಕಾನೂನು ನೆರವು ನೀಡುವುದರ ಮೂಲಕ ಸಂತೃಸ್ತರ ಸೇವೆಗೆ ನಮ್ಮ ಸಂಸ್ಥೆ ಸದಾ ಸಿದ್ದವಿದೆ ಎಂದ ಅವರು ಈ ಕುರಿಂತೆ ಸಂಸ್ಥೆಯ ರಾಜ್ಯಕಾರ್ಯದರ್ಶಿ ನ್ಯಾಯವಾದಿ ಮುಹಮ್ಮದ್ ನಿಯಾಝ್ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಯಾರೆಲ್ಲಾ ಹಣ ಹೂಡಿಕೆ ಮಾಡಿ ಮೋಸಹೋಗಿದ್ದಾರೋ ಅಂತಹ ವ್ಯಕ್ತಿಗಳ ರಕ್ಷಣೆಗಾಗಿ ಮುಂದೆ ಬಂದಿದ್ದಾರೆ ಈ ನಿಟ್ಟಿನಲ್ಲಿ ಅವರು ಎಲ್ಲಾ ಜಿಲ್ಲೆಯ ಸಂಚಾಲಕರು ಸಂತೃಸ್ತರ ಕುರಿತಂತೆ ಮಾಹಿತಿ ಪಡೆದು ಅವರಿಗೆ ಸೂಕ್ತ ಕಾನೂನು ನೆರವು ನೀಡಲು ಪ್ರಯತ್ನಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ. 

ರಾಜ್ಯದಲ್ಲಿ ಐಎಂಎ ಹಗರಣ ಬೆಳಕಿಗೆ ಬಂದ ನಂತರ ಸಾವಿರಾರು ಮಂದಿ ಈ ಮೋಸದ ಕಂಪನಿಯಲ್ಲಿ ಹಣಹೂಡಿಕೆ ಮಾಡುವುದರ ಮೂಲಕ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಧ್ಯಮ ವರ್ಗದ ಜನರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಣಹೂಡಿಕೆ ಮಾಡಿರುವುದು ಕಂಡು ಬಂದಿದ್ದು ಎಪಿಸಿಆರ್ ಸಂಸ್ಥೆಗೆ ಸಂಪರ್ಕಿಸಿದ್ದಲ್ಲಿ  ಆ ಎಲ್ಲ ಸಂತೃಸ್ತರಿಗೆ ಕಾನೂನು ನೆರವು ನೀಡುವ ಪಣ ತೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಉತ್ತರಕನ್ನಡ ಜಿಲ್ಲೆಯ ಜನತೆ ಎಪಿಸಿಆರ್ ಜಿಲ್ಲಾ ಸಂಚಾಲಕ ಖಮರುದ್ದೀನ್ ಮಷಾಯಿಖ್ (9148529567) ಹಾಗೂ  ಎಪಿಸಿಆರ್ ಕರ್ನಾಟಕ ಘಟಕ 080-23435669 ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.  

Read These Next