ಮುರುಡೇಶ್ವರ ಪಾಲಿಟೆಕ್ನಿಕ್‍ನಲ್ಲಿ ನವೀಕರಿಸಬಹುದಾದ ಇಂಧನ ಕುರಿತು ಉಪನ್ಯಾಸ

Source: sonews | By Staff Correspondent | Published on 14th August 2019, 6:24 PM | Coastal News |

ಭಟ್ಕಳ: ಮುರುಡೇಶ್ವರ ಆರ್.ಎನ್.ಎಸ್. ಪಾಲಿಟೆಕ್ನಿಕ್ ನಲ್ಲಿ ನೀರು ನೈರ್ಮಲ್ಯ ಆರೋಗ್ಯ ಮತ್ತು ನವೀಕರಿಸಬಹುದಾದ ಇಂಧನ ಕುರಿತು ಉಪನ್ಯಾಸ ಶಿಬಿರ ಯಶಸ್ವಿಯಾಗಿ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಬಾರ್ಕೂರಿನ ನ್ಯಾಷನಲ್ ಪಿಯು ಕಾಲೇಜ್ ನಿವೃತ್ತ ಪ್ರಾಚಾರ್ಯ ಬಿ. ಸೀತಾರಾಮ್ ಶೆಟ್ಟಿ ಮಾತನಾಡುತ್ತಾ ಕಪ್ಪೆ ಮದುವೆ ಮಾಡಿದರೆ ಮಳೆ ಬರಲ್ಲ ಹಾಗೂ ಕಪ್ಪೆಗೆ ಡೈವರ್ಸ್ ಕೊಡುವುದರಿಂದ ಅತಿರುಷ್ಟಿ ಆಗುವುದು ನಿಲ್ಲುವುದಿಲ್ಲ ಜಲ, ಜಮೀನು, ಜಂಗಲ್ ಸಮನ್ವಯ ಗೊಳಿಸುವುದರಿಂದ ಅತಿವೃಷ್ಟಿ-ಅನಾವೃಷ್ಟಿ ತಡೆಯಬಹುದೆಂದು ತಿಳಿಸಿದರು.
ಉಡುಪಿಯ ಆರೂರು ಮಂಜುನಾಥ್ ರಾವ್ ರವರು ಮಾತನಾಡುತ್ತಾ ವಿವಿಧ ಔಷಧ ಸಸ್ಯಗಳನ್ನು ನಮ್ಮ ನಿತ್ಯ ಆಹಾರದಲ್ಲಿ ಬಳಸಿ ನಮ್ಮ ಆರೋಗ್ಯವನ್ನು ಸಮರ್ಥವಾಗಿ ನಿಬಾಯಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್  ವ್ಯವಸ್ಥಾಪಕ ವರುಣ್ ಪಟವರ್ಧನ್ ಸೌರ ಶಕ್ತಿ ಬಳಕೆಯ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಹೊನ್ನಾವರದ ಸಂಗಮ್ ಸೇವಾ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಆರ್.ಎನ್.ಎಸ್ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಸಂತೋಷ್ ಆರ್.ಎ., ಉಪ ಪ್ರಾಚಾರ್ಯ  ಕೆ.ಮರಿಸ್ವಾಮಿ ಉಪಸ್ಥಿತರಿದ್ದರು.

ಕುಮಾರಿ ನಾಗಶ್ರೀ ರಾಯ್ಕರ್ ಪ್ರಾರ್ಥಿಸಿದರು. ಎಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥ ಸಾಯಿದತ್ತ ಸ್ವಾಗತಿಸಿದರು. ಉಪನ್ಯಾಸಕ ಕೃಷ್ಣ ಬಿ ಹೆಗಡೆ ವಂದಿಸಿದರು.

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...