ಸುಗಂಧಭರಿತ ಆಯುರ್ವೇದ ಗಿಡಮೂಲಿಕೆ ಯ ಲಾವಂಚ ಬೇರಿನ ಮುಖಗವಸು ಬಿಡುಗಡೆ

Source: sonews | By Staff Correspondent | Published on 29th May 2020, 6:02 PM | Coastal News | Don't Miss |

ಭಟ್ಕಳ: ತಾಲೂಕಿನ ಬೆಂಗ್ರೆ ಉಸಿರ ಕೈಗಾರಿಕಾ ಘಟಕದ ವತಿಯಿಂದ ವಿಶೇಷವಾಗಿ ತಯಾರಿಸಲಾದ ಸುಗಂಧಭರಿತ ಆಯುರ್ವೇದ ಗಿಡಮೂಲಿಕೆ ಯ ಲಾವಂಚ ಬೇರಿನ ಮುಖಗವಸು ಗಳನ್ನು ಭಟ್ಕಳ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ  ಯಲ್ಲಮ್ಮ ಶುಕ್ರವಾರ ಬೇಂಗ್ರೆಯಲ್ಲಿ ಬಿಡುಗಡೆಗೊಳಿಸಿದರು.

ವಿವಿಧ ವಿನ್ಯಾಸದ ಮುಖಗವಸು ಗಳನ್ನು ಸಮಾಜಿಕ ಅಂತರ ಕಾಯ್ದುಕೊಂಡು ಮಾಧ್ಯಮಕ್ಕೆ ಬಿಡುಗಡೆಗೊಳಿಸಿ ಮಾತನಾಡುತ್ತಾ ಇಂದು ಕೊರೋನಾ ಮಾರಕ ಸೋಂಕಿಗೆ ಒಳಗಾಗದಂತೆ ಪ್ರತಿಯೊಬ್ಬರೂ ಸಮಾಜದ ಸುರಕ್ಷತೆಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರದ ಜೊತೆಗೆ ಲಾವಂಚದಂತ   ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಿ ಕೊರೋನಾ ವೈರಸ್ ಹರಡದಂತೆ ತಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುರುಡೇಶ್ವರ ಆರ್.ಎನ್.ಎಸ್. ಪಾಲಿಟೆಕ್ನಿಕ್ ನ ಉಪಪ್ರಾಚಾರ್ಯರಾದ ಮರಿಸ್ವಾಮಿ ಕೊಪ್ಪಳ, ಲಾವಂಚ ವಸ್ತುಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕೋವಿಡ್_19, ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲದಾಗಿರುವುದರಿಂದ ಸೋಂಕಿತರು ಮಾತನಾಡುವಾಗ, ಕೆಮ್ಮುವಾಗ ,ಸೀನುವಾಗ, ಸಿಡಿಯುವ ಅತಿ ಸಣ್ಣ ಕಣಗಳು ಸಮೀಪ ಇರುವ ವ್ಯಕ್ತಿಗಳಿಗೆ ಸುಲಭವಾಗಿ ಹರಡದಂತೆ ಲಾವಂಚ ವಸ್ತುಗಳನ್ನು ಧರಿಸಿ, ಕೊರೋನಾ ವೈರಸ್ ಓಡಿಸಿ, ಸ್ವಾವಲಂಬಿ ಭಾರತದ ಕನಸು ಸಾಕಾರಗೊಳಿಸಿ ಎಂದ ಅವರು, ಈ ಲಾವಂಚ ಬೇರಿಗೆ ಉಸಿರಾಟದ ತೊಂದರೆ ನಿವಾರಿಸುವ, ಜ್ವರ ಕಡಿಮೆಗೊಳಿಸುವ ಗುಣವಿದೆ ಹಾಗೂ ಸುಗಂಧಭರಿತ ಪರಿಮಳ ಬೀರುವುದರಿಂದ ಮನಸ್ಸು ದಿನವಿಡಿ ಉಲ್ಲಾಸಭರಿತವಾಗಿರುತ್ತದೆ ಎಂದು ಅದರ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗ್ರೆ ಉಸಿರ ಇಂಡಸ್ಟ್ರೀಸ್ ನ  ಉದ್ಯಮಿ ಎಂ .ಡಿ .ಮ್ಯಾಥ್ಯು ಹಾಗೂ ಅವರ ಮಗಳಾದ ರಾಣಿ ಮ್ಯಾಥ್ಯೂ ಉಪಸ್ಥಿತರಿದ್ದರು. 
 

Read These Next