ಹರ್ಯಾಣ ಸಿಎಂ ಕ್ಷಮೆಯಾಚಿಸಲಿ; ಮೇಘಾಲಯ ರಾಜ್ಯಪಾಲ ಮಲಿಕ್ ಆಗ್ರಹ

Source: VB News | By I.G. Bhatkali | Published on 30th August 2021, 2:05 PM | National News |

ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರನ್ನು ಬೆಂಬಲಿಸಿರುವ ಮತ್ತು ಆಡಳಿತ ಬಿಜೆಪಿಯನ್ನು ಮನೋಹರಲಾಲ್‌ಬಿಟ್ಟರೆ ಟೀಕಿಸಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು, ಶನಿವಾರ ಕರ್ನಾಲ್‌ನಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಕ್ಕಾಗಿ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈರಲ್ ಆಗಿದ್ದ ವೀಡಿಯೊದಲ್ಲಿ ರೈತರ ತಲೆಗಳನ್ನು ಒಡೆಯಿರಿ' ಎಂದು ಪೊಲೀಸರಿಗೆ ಆದೇಶಿಸಿದ್ದ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರನ್ನು ಸೇವೆಯಿಂದ ವಜಾಗೊಳಿಸುವಂತೆಯೂ ಮಲಿಕ್ ಆಗ್ರಹಿಸಿದ್ದಾರೆ.

'ಖಟರ್ ರೈತರ ಕ್ಷಮೆ ಯಾಚಿಸಬೇಕು. ಅವರು ರೈತರ ವಿರುದ್ಧ ಲಾಠಿಗಳನ್ನು ಬಳಸುತ್ತಿದ್ದಾರೆ. ಕೇಂದ್ರ ಸರಕಾರವು ಬಲ ಪ್ರಯೋಗಿಸಿರಲಿಲ್ಲ. ಬಲ ಪ್ರಯೋಗಿ ಸದಂತೆ ತಾನು ಉನ್ನತ ನಾಯಕತ್ವಕ್ಕೆ ತಿಳಿಸಿದ್ದೆ' ಎಂದು ರವಿವಾರ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತ ಹೇಳಿದ ಮಲಿಕ್, ತಾನೂ ರೈತನ ಮಗನಾಗಿದ್ದೇನೆ ಎಂದು ತಿಳಿಸಿದರು.

ವಿವಾದಾತ್ಮಕ ವೀಡಿಯೊವನ್ನು ಪ್ರಸ್ತಾಪಿಸಿದ ಅವರು,ಸಿನ್ದಾರನ್ನು ತಕ್ಷಣ ವಜಾಗೊಳಿಸಬೇಕು. ಅವರು ಉಪವಿಭಾಗಾಧಿಕಾರಿ ಹುದ್ದೆಗೆ ಅರ್ಹರಲ್ಲ, ಸರಕಾರವು ಅವರನ್ನು ಬೆಂಬಲಿಸುತ್ತಿದೆ ಎಂದರು.

ಸಿನ್ಹಾ ವಿರುದ್ಧ ಯಾವುದೇ ಕ್ರಮವನ್ನು ಈವರೆಗೆ ಕೈಗೊಳ್ಳಲಾಗಿಲ್ಲ. ಪ್ರತಿಭಟನೆಗಳ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಸರಕಾರವು ಸಾಂತ್ವನ ಹೇಳಿಲ್ಲ ಎನ್ನುವ ಅಂಶ ತನ್ನನ್ನು ನಿರಾಶೆಗೊಳಿಸಿದೆ ಎಂದೂ ಮಲಿಕ್ ಹೇಳಿದರು.

ತನ್ನ ಹೇಳಿಕೆಗಳಿಗೆ ಸರಕಾರದ ಪ್ರತಿಕ್ರಿಯೆಯ ಬಗ್ಗೆ ತನಗೆ ಹೆದರಿಕೆಯಿಲ್ಲ ಎಂದು ಹೇಳಿದ ಅವರು, 'ನಾನು ರಾಜ್ಯ ಪಾಲರ ಹುದ್ದೆಗೆ ಅಂಟಿಕೊಂಡಿಲ್ಲ. ನಾನು ಏನನ್ನು ಹೇಳು ತ್ತೇನೋ ಅದನ್ನು ಹೃದಯದಿಂದ ಹೇಳುತ್ತೇನೆ. ನಾನು ರೈತರಲ್ಲಿಗೆ ಮರಳಬೇಕೆಂದು ಅನಿಸುತ್ತಿದೆ' ಎಂದರು.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...