ಕಾರವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶ

Source: S O News | Published on 7th October 2021, 8:00 PM | Coastal News |

ಕಾರವಾರ:  2009 ರಿಂದ 2012 ನೇ ಸಾಲಿನವರೆಗೆ ಪ್ರಥಮ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಪಡೆದು,  ಬಾಕಿ ಉಳಿಸಿಕೊಂಡಿರುವ  ವಿಷಯಗಳಿಗೆ ಪರೀಕ್ಷೆ ಕಟ್ಟಲು  2021 ರ ಅಕ್ಟೋಬರ್/ನವೆಂಬರ್ ಪರೀಕ್ಷೆಗೆ ಕೊನೆಯ ಅವಕಾಶ  ಹಾಗೂ  2011 ರಿಂದ 2015 ನೇ ಸಾಲಿನ  ಕೋರ್ಸುಗಳಿಗೆ ಲ್ಯಾಟ್‍ರಲ್ ಎಂಟ್ರಿ ಮುಖಾಂತರ 2ನೇ ಡಿಪ್ಲೋಮಾ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2021 ರ ಅಕ್ಟೋಬರ್/ನವೆಂಬರ್ ಪರೀಕ್ಷೆಗೆ ಕೊನೆಯ ಅವಕಾಶವಾಗಿರುತ್ತದೆ. 

ಅ-03 ಪಠ್ಯಕ್ರಮದ 1-6 ಸೆಮಿಸ್ಟರ್ ಅ-19 ಪಠ್ಯಕ್ರಮದಲ್ಲಿ ಸಮಾನತೆ ಇಲ್ಲದ ಪಠ್ಯ ವಿಷಯಗಳಿಗೆ 2021 ರ ಅಕ್ಟೋಬರ್/ನವೆಂಬರ್ ಪರೀಕ್ಷೆಗೆ ಕಟ್ಟ ಕಡೆಯ  ಅವಕಾಶವಾಗಿರುತ್ತದೆ. ಕಾರಣ ಅಂತಹ ಅಕ್ಟೋಬರ 13 ರೊಳಗಾಗಿ ಪರಿಕ್ಷಾ ಅರ್ಜಿ ಶುಲ್ಕ ತುಂಬಬೇಕು.

ನೀಡಲಾಗಿರುವ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು  ಕಾರವಾರದ  ಸರ್ಕಾರಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ ಕಾಜುಭಾಗ: ಅ.31 ರಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತನಲ್ಲಿ 144 ರನ್ವಯ ನಿಷೇಧಾಜ್ಞೆ ಜಾರಿ

ನಗರದ  ಕಾಜುಭಾಗದ ಸರ್ಕಾರಿ  ಪಿಯುಸಿ ಕಾಲೇಜಿನಲ್ಲಿ ಅ.31 ರಂದುUPSC/KAS/GROUPC/SSC/BANKING/RRB 2021ರ ನೇಮಕಾತಿಯ ಪ್ರವೇಶಾತಿಗಾಗಿ ಪರೀಕ್ಷೆ ಜರುಗಲಿದ್ದು, ...