ಲಡಾಖ್ ಬಿಕ್ಕಟ್ಟು: ಎರಡು ಸ್ಥಳಗಳಿಂದ ಸೇನೆ ಹಿಂದೆಗೆತಕ್ಕೆ ಚೀನಾ ನಕಾರ

Source: VB | By S O News | Published on 19th April 2021, 5:04 PM | National News |

ಹೊಸದಿಲ್ಲಿ: ಪೂರ್ವ ಲಡಾಖ್‌ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಎರಡು ಸಂಘರ್ಷ ತಾಣಗಳಾದ ಹಾಟ್ ಸ್ಟ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್‌ನಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ರವಿವಾರ ವರದಿ ಮಾಡಿದೆ.

ಎಪ್ರಿಲ್ ಆರಂಭದಲ್ಲಿ ನಡೆದಿದ್ದ 11ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ತಮ್ಮ ನಡುವಿನ ಬಾಕಿಯುಳಿದಿರುವ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿದ್ದವು. ಉಭಯ ದೇಶಗಳು ಲಡಾಖ್‌ನ ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಸೈನಿಕರ ವಾಪಸಾತಿಯನ್ನು ಪೂರ್ಣಗೊಳಿಸಿವೆ. ಮಾತುಕತೆಗಳ ಸಂದರ್ಭದಲ್ಲಿ ಪೂರ್ವ ಲಡಾಖ್‌ನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಯಾವುದೇ ಹೊಸ ಘಟನೆಗಳಿಗೆ ಅವಕಾಶ ನೀಡದಿರಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಹೀಗಿದ್ದರೂ ಹಾಟ್ ಸ್ಟ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್‌ನಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿದೆ.

ಇವೆರಡು ಸ್ಥಳಗಳಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಮೊದಲು ಒಪ್ಪಿಕೊಂಡಿತ್ತಾದರೂ ನಂತರ ಅದಕ್ಕೆ ನಿರಾಕರಿಸಿದೆ. ಭಾರತವು ಈಗ ತಾನೇನನ್ನು ಸಾಧಿಸಿದ್ದೇನೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು ಎಂದೂ ಚೀನಾ ಹೇಳಿದೆ ಎನ್ನಲಾಗಿದೆ. 15 ಮತ್ತು 17ಎ ಗಸ್ತುಕೇಂದ್ರಗಳಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಚೀನಾ ಕಡಿಮೆಗೊಳಿಸಿದೆ ಎಂದು ಮಾತುಕತೆಗಳಲ್ಲಿ ಭಾಗಿಯಾಗಿದ್ದ ಮೂಲವೊಂದನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವು ವರದಿ ಮಾಡಿದೆ.

ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದಿರುವ ಪೂರ್ವ ನಿರ್ಧಾರದೊಂದಿಗೆ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಗೆ ಆಗಮಿಸಿತ್ತು ಎಂದು ಅನಾಮಿಕ ಅಧಿಕಾರಿಗಳು ಕಳೆದ ವಾರ ತಿಳಿಸಿದ್ದರು.

ಗೋಗ್ರಾ,ಹಾಟ್ ಸ್ಟ್ರಿಂಗ್ಸ್ ಮತ್ತು ಕೊಂಗ್ಕಾಗಳಲ್ಲಿ ತನ್ನ ಸೈನಿಕರ ಬೆಂಬಲಕ್ಕಾಗಿ ಲಾಜಿಸ್ಟಿಕ್ ಸೌಲಭ್ಯಗಳನ್ನು ಚೀನಾ ಹೊಂದಿದೆ. ಈ ಪ್ರದೇಶಗಳಲ್ಲಿ ವಾಯು ರಕ್ಷಣಾ ಘಟಕ ಮತ್ತು ಫಿರಂಗಿ ಬ್ರಿಗೇಡ್ ಕೂಡ ನೆಲೆಗೊಂಡಿವೆ ಎಂದು ವರದಿಯು ತಿಳಿಸಿದೆ. ಈ ಮಧ್ಯೆ, ಡೆಸ್ಪಾಂಗ್ ಬಯಲಿನಲ್ಲಿಯ ಬಿಕ್ಕಟ್ಟಿನ ಕುರಿತು ನಿರ್ಧಾರಗಳು ಈಗಲೂ ಬಾಕಿಯಿವೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...