ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ ದುರುಪಯೋಗ- ರವೀಂದ್ರ ನಾಯ್ಕ

Source: sonews | By Staff Correspondent | Published on 9th July 2020, 6:35 PM | Coastal News |

ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ ದುರುಪಯೋಗ- ರವೀಂದ್ರ ನಾಯ್ಕ

ಶಿರಸಿ: ರಾಜ್ಯ ಬಿಜೆಪಿ ಸರ್ಕಾರವು ಕಾರ್ಮಿಕ ಕಲ್ಯಾಣಮಂಡಳಿ ನಿಧಿಯನ್ನು ದುರೂಪಯೋಗ ಪಡಿಸಿಕೊಂಡಿದೆ ಎಂದು ಶಿರಸಿಯ ಸಾಮಾಜಿ ಹೋರಾಟಗಾರ ನ್ಯಾಯಾವಾದಿ ರವೀಂದ್ರ ನಾಯ್ಕ ಆರೋಪಿಸಿದ್ದಾರೆ. 

ಈ ಕುರಿತಂತೆ ಪತ್ರಿಕಾ ಪ್ರಕರಟಣೆಯನ್ನು ನೀಡಿರುವ ಅವರು, ಕೋರೋನಾ ಸಂದರ್ಭದಲ್ಲಿ ಆರ್ಥಿಕ ಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಯಾವುದೇ ಆಹಾರ ಕಿಟ್ ವಿತರಣೆ ಮಾಡಿಲ್ಲ ಮತ್ತು ನೋಂದಾಯಿತ ಕಾರ್ಮಿಕರಿಗೇ ಆಹಾರ ಕಿಟ್ ವಿತರಣೆ ಮಾಡುವಂತೆ ಕೇಂದ್ರ ಕಾರ್ಮಿಕ ಕಛೇರಿ ಅಥವಾ ಕಾರ್ಮಿಕ ಮಂಡಳಿಯಿಂದ ಸ್ಥಳೀಯ ಕಾರ್ಮಿಕ ಇಲಾಖೇಗೆ ನಿರ್ದೇಶನವಾಗಲಿ, ಸೂಚನೆಯಾಗಲಿ ಬಂದಿಲ್ಲ ಎಂಬ ಮಾಹಿತಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಿಡಿದ್ದಾರೆಂದು ತಿಳಿಸಿದ್ದಾರೆ. 

ಕಾರ್ಮಿಕರ ಹಿತಾಸಕ್ತಿಯಿಂದ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಸಲ್ಲಿಸಿದ ಅರ್ಜಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಯು ನೀಡಿದ ಉತ್ತರದಲ್ಲಿ ಮೇಲಿನಂತೆ ಪ್ರಸ್ತಾಪಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಯ ಪತ್ರವನ್ನು ಪ್ರಕಟಿಸುತ್ತಾ ತಿಳಿಸಿದ್ದರು.

ಕಾರ್ಮಿಕ ಕಲ್ಯಾಣ ಮಂಡಳಿಯು, ಕಾರ್ಮಿಕ ಇಲಾಖೆಯ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಂಡಳಿಯ ಹಣವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದೇ ಆಹಾರ ಕಿಟ್ ವಿತರಣೆಯಾಗಿರುವುದು, ಕಾರ್ಮಿಕ ಇಲಾಖೆಗೂ ಮತ್ತು ಕಾರ್ಮಿಕರ ಆಹಾರ ಕಿಟ್ಟಿಗೂ ಸಂಬಂದವಿಲ್ಲದೇ ವಿತರಣೆಯಾಗಿರುವುದು  ಆಶ್ಚರ್ಯಕರವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  
ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸದೇ ಕಾರ್ಮಿಕರ ಮಂಡಳಿಯ ಕಾರ್ಮಿಕರ ನಿಧಿಯಿಂದ ಆಹಾರ ಕಿಟ್ ಸಾರಸಗಟವಾಗಿ ಸಾರ್ವಜನಿಕರಿಗೆ ವಿತರಣೆ ಮಾಡಿ ಕಾರ್ಮಿಕರ ವಿರೋದ ನೀತಿ ಪ್ರದರ್ಶಿಸಿದ್ದಲ್ಲದೇ, ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ರವೀಂದ್ರ ನಾಯ್ಕ ಆಪಾಧಿಸಿದ್ದಾರೆ.

ಗೊಂದಲದಲ್ಲಿನ ಕಾರ್ಮಿಕರ ಸಹಾಯಧನ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಾಖೆಯಲ್ಲಿ ನೋಂದಾಯಿತ 65,371 ಸದಸ್ಯರಿದ್ದು, ಜಿಲ್ಲಾ ಕಛೇರಿಯಿಂದ 18,528 ಹಾಗೂ ಮಂಡಳಿಯಿಂದ 9,355 ಒಟ್ಟು 27,883 ನೋಂದಾಯಿತ ಕಾರ್ಮಿಕರಿಗೆ ಹಣ ಸಂದಾಯಕ್ಕೆ ಬ್ಯಾಂಕಿಗೆ ಪಾವತಿ ಮಾಡಲು ಇಲಾಖೆಯಿಂದ ನೋಂದಾಯಿತ ಕಾರ್ಮಿಕರ ಪಟ್ಟಿಯನ್ನು ನೀಡಿದ್ದು ಇರುತ್ತದೆ. ಅಲ್ಲದೇ ಇದರ ಜೊತೆಯಲ್ಲಿ 26,389 ಕಾರ್ಮಿಕರಿಗೆ ಆಧಾರ ಸಂಖ್ಯೆ ಮೆರೆಗೆ ನೇರವಾಗಿ ಬೆಂಗಳೂರಿನ ಮಂಡಳಿಯಿಂದ ಸಹಾಯಧನ ಜಮೆ ಮಾಡಲಾಗಿದೆ ಎಂದು ಇಲಾಖೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ನೀಡಿದ ಮಾಹಿತಿ ಮತ್ತು ವಾಸ್ತವ್ಯಕತೆಗೆ ಸರಿಹೊಂದದೇ ಇಂದಿಗೂ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕಿಂತ ಮಿಗಿಲಾದ ನೋಂದಾಯಿತ ಕಾರ್ಮಿಕರ ಖಾತೆಗೆ ಸಹಾಯಧನ ಸಂದಾಯವಾಗದೇ ಇರುವುದು ವಿಷಾಧಕರ. ಕಷ್ಟಕಾಲದಲ್ಲಿ ಕಾರ್ಮಿಕರಿಗೆ ಸಹಾಯವಾಗಬೇಕಿದ್ದ ಸರಕಾರವು ಸಹಾಯಧನ ವಿತರಣೆಯಲ್ಲಿ ಗೋಂದಲದ ಗೂಡುಂಟುಮಾಡಿದೆ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...