ಲಾ ಲೀಗಾ ಫುಟ್ಬಾಲ್: ರಿಯಲ್ ಮ್ಯಾಡ್ರಿಡ್ ಚಾಂಪಿಯನ್

Source: uni | Published on 18th July 2020, 11:35 PM | Sports News | Don't Miss |


ಮ್ಯಾಡ್ರಿಡ್: ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಿಯಲ್ ಮ್ಯಾಡ್ರಿಡ್ ತಂಡ, ಮೂರು ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಏರಿತು. 
ರಿಯಲ್ ಮ್ಯಾಡ್ರಿಡ್ 2–1 ಗೋಲುಗಳಿಂದ ವಿಲ್ಲಾರ್ರಿಯಲ್ ತಂಡವನ್ನು ಸೋಲಿಸಿ 34 ನೇ ಬಾರಿಗೆ ಲಾ ಲಿಗಾವನ್ನು ಗೆದ್ದುಕೊಂಡಿತು. ಫ್ರೆಂಚ್ ಸ್ಟ್ರೈಕರ್ ಕರೀಮ್ ಬೆಂಜಮಾ ಅವರ ಎರಡು ಗೋಲುಗಳನ್ನು ಬಾರಿಸಿ ಜಯದಲ್ಲಿ ಮಿಂಚಿದರು. ರಿಯಲ್ ಮ್ಯಾಡ್ರಿಡ್ ಇನ್ನು ಒಂದು ಪಂದ್ಯ ಉಳಿದಿರುವಾಗ ಲಾ ಲಿಗಾ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಪಂದ್ಯದ 27 ನೇ ನಿಮಿಷದಲ್ಲಿ ಬೆಂಜಮಾ ಮೊದಲ ಗೋಲು ಗಳಿಸಿ ರಿಯಲ್ ಮ್ಯಾಡ್ರಿಡ್‌ಗೆ ಮುನ್ನಡೆ ನೀಡಿದರು. ಮತ್ತು ನಂತರ 76 ನೇಯಲ್ಲಿ ಎರಡನೇ ಗೋಲು ಗಳಿಸಿ ತಂಡ ಬಾರಿಗೆ ಗೆಲುವಿನತ್ತ ಕೊಂಡೊಯ್ದರು.
ಮತ್ತೊಂದು ಪಂದ್ಯದಲ್ಲಿ ಒಸಾಸುನಾ ಬಾರ್ಸಿಲೋನಾವನ್ನು 2–1ರಿಂದ ಸೋಲಿಸಿತು. ಬಾರ್ಸಿಲೋನಾ ಸೋಲಿನೊಂದಿಗೆ, ರಿಯಲ್ ಮ್ಯಾಡ್ರಿಡ್ ಮುಂದಿನ ಪಂದ್ಯವನ್ನು ಆಡದೆ ತಮ್ಮ ಪ್ರಶಸ್ತಿಯನ್ನು ಖಚಿತಪಡಿಸಿಕೊಂಡಿತು.
ರಿಯಲ್ ಮ್ಯಾಡ್ರಿಡ್ ತರಬೇತುದಾರ ಜೆನೆದಿನ್ ಜಿಡಾನೆ ತರಬೇತುದಾರನಾಗಿ ತನ್ನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

 

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ಅಬಕಾರಿ ದಾಳಿ: ಅಕ್ರಮ ಮದ್ಯ ವಶ

ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ...

ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ...