8 ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿಗೆ ಗೇಟ್ ಪಾಸ್ ನೀಡಲಿದೆ ಕುವೈಟ್ ನ ಈ ಹೊಸ ಮಸೂದೆ!

Source: PTI | Published on 7th July 2020, 12:23 AM | Gulf News | Don't Miss |

 

ಕುವೈಟ್: ವಿದೇಶದಿಂದ ಬಂದಿರುವರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕುವೈಟ್ ಜಾರಿಗೊಳಿಸಲು ಉದ್ದೇಶಿಸಿರುವ ಎಕ್ಸ್ ಪಾಟ್ ಕೋಟಾ ಮಸೂದೆ ಕನಿಷ್ಟ 8 ಲಕ್ಷ ಭಾರತೀಯರು ಆ ದೇಶ ಬಿಡುವ ಪರಿಸ್ಥಿತಿ ತಂದೊಡ್ಡಲಿದೆ.
ಕುವೈಟ್ ನ ರಾಷ್ಟ್ರೀಯ ಅಸೆಂಬ್ಲಿಯ ಲೀಗಲ್ ಹಾಗೂ ಲೆಜಿಸ್ಲೇಟೀವ್ ಸಮಿತಿಗೆ ಡ್ರಾಫ್ಟ್ ಎಕ್ಸ್ಪಾಟ್ ಕೋಟಾ ಬಿಲ್ ನ್ನು ಕಳಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಪ್ರಕಟಿಸಿದೆ.
ದೇಶದ ಒಟ್ಟಾರೆ ಜನಸಂಖ್ಯೆಯ ಶೇ.15 ಕ್ಕಿಂತ ಹೆಚ್ಚು ಭಾರತೀಯರು ಇರಬಾರದು ಎಂಬ ಅಂಶವನ್ನು ಈ ಕಾನೂನಲ್ಲಿ ಜಾರಿಗೆ ತರಲಾಗುತ್ತದೆ. ಪರಿಣಾಮವಾಗಿ ಕುವೈಟ್ ನಲ್ಲಿ ಒಟ್ಟಾರೆ ಇರುವ ವಿದೇಶಿಗರ ಪೈಕಿ ಅತಿ ಹೆಚ್ಚಾಗಿರುವ 1.45 ಮಿಲಿಯನ್ ನಲ್ಲಿ 8 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ. 4.3 ಮಿಲಿಯನ್ ಒಟ್ಟಾರೆ ಜನಸಂಖ್ಯೆಯ ಪೈಕಿ 3 ಮಿಲಿಯನ್ ಜನರು ವಿದೇಶಿಗರಿದ್ದಾರೆ.
ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುವೈಟ್ ನ ಶಾಸಕರು ವಿದೇಶಿಗರ ಸಂಖ್ಯೆಯನ್ನು ಇಳಿಕೆ ಮಾಡಲು ಈ ಕ್ರಮ ಕೈಗೊಂಡಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯ ಕುವೈಟ್ ನ ಪ್ರಕಾರ 49,000 ಕೋವಿಡ್-19 ಪ್ರಕರಣಗಳು ಇದೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...