ಕುಂದಾಪುರ: ತ್ರಾಸಿ ಅಪಘಾತದ ಬಳಿಕವೂ ಎಚ್ಚೆತ್ತುಕೊಳ್ಳದ ಶಾಲಾ ಆಡಳಿತ ಮಂಡಳಿಗಳು

Source: so news | By Arshad Koppa | Published on 24th June 2016, 1:05 PM | Coastal News | Special Report | Public Voice | Don't Miss |

ಕುಂದಾಪುರ, ಜೂನ್ ೨೪: ಇಲ್ಲಿಗೆ ಸಮೀಪದ ತ್ರಾಸಿ ಬಳಿ ಸಂಭವಿಸಿದ ರಾಜ್ಯವನ್ನೇ ನಡುಗಿಸಿದ ಶಾಲಾ ವ್ಯಾನ ದುರಂತದಲ್ಲಿ 8 ಮಕ್ಕಳು ಸಾವನ್ನಪ್ಪಿದ್ದರೂ ಪಾಲಕರು ಮಾತ್ರ ಇನ್ನು ಎಚ್ಚತ್ತುಕೊಂಡಿಲ್ಲ.ಶಾಲೆಯ ಆಡಳಿತ ಮಂಡಳಿಗಳಿಗೆ ಮಕ್ಕಳ ಫೀಸ್ ಬೇಕು ಜವಾಬ್ದಾರಿ ಬೇಡ ಎನ್ನುವಂತೆ ವರ್ತನೆಯ ಮುಂದೆ ಕರಾವಳಿಯ ದುರಂತದ ಯಾವ ಪರಿಣಾಮವೂ ಇಲ್ಲಿ ಬೀರಿದಿರುವದು ದುರಾದೃಷ್ಟಕರ.

  ಘಟನೆ ನಡೆದು ಕೆಲವು ಘಂಟೆಗಳು ಕಳೆಯುವ ಮುನ್ನವೆ ಇಲ್ಲೊರ್ವ ಚಾಲಕ ಕ್ಲಾಸರೂಮ್ ತುಂಬುವಷ್ಟು ಪುಟಾಣಿ ವಿದ್ಯಾರ್ಥಿಗಳನ್ನು ಒಮಿನಿಯಲ್ಲಿ ತುಂಬಿಕೊಂಡಿದ್ದಾನೆ. ಮಕ್ಕಳನ್ನು ಕರೆಯಲು ಮನೆಮನೆಗೂ ತೆರಳಿದಾಗ. ಸ್ವತಃ ಪಾಲಕರೆ ಬಂದು ತುಂಬಿದ ವಾಹನದಲ್ಲಿ ತನ್ನದೊಂದು ಪಾಲು ಕೊಟ್ಟು ಟಾಟಾ ಬೈ ಎಂದು ಹೇಳಿದ್ದಾರೆ. ಇಲ್ಲಿ ಪ್ರತಿದಿನ ಒಂದೆ ಓಮಿನಿಯಲ್ಲಿ 30 ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಪ್ರಯಾಣ ನಡೆಸುತ್ತಿದೆ. ಈ ಪೈಪೋಟಿಯಲ್ಲಿ ಅಟೋ ರಿಕ್ಷಾಗಳೂ ಹಿಂದೆ ಬಿದ್ದಿಲ್ಲ. ಇವರಿಗೆ ಶಾಲಾ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಸಂಬಂದಿಸಿದ  ಅಧಿಕಾರಿಗಳ ಭಯವಂತೂ ಇಲ್ಲ. ಹೋಗಲಿ ಮಕ್ಕಳ ಜೀವದ ಕಾಳಜಿಯೂ ಇಲ್ಲವಲ್ಲ ಎನ್ನುವದು ವಿಷಾದ. ನಿಯಮ ಮೀರಿ ಮಕ್ಕಳ್ಳಿದ್ದ ವಾಹನ ಅಫಘಾತಕ್ಕೀಡಾದರೆ ಇವರಿಗೆ ವಿಮೆಯೋ ದೊರಕಲ್ಲ ಎನ್ನು ಜ್ಞಾನವೂ ಇಲ್ಲ. 
ಬುಧವಾರ ಬೆಳಿಗ್ಗೆ ಓಮಿನಿಯೊಂದರಲ್ಲಿ ಕ್ಲಾಸರೂಮ್ ತುಂಬುವಷ್ಟು(30) ಮಕ್ಕಳನ್ನು ಸರಕುಗಳಂತೆ ತುಂಬಿಕೊಂಡು ಶಾಲೆಗೆ ಕರೆದೊಯ್ಯುಲಾಗುತ್ತಿತ್ತು.  ಸಂಬಂದ ಪಟ್ಟ ಪ್ರಾಧಿಕಾರದ ಪರವಾನಿಗೆ, ಪಾಸ ಹೊಂದದೆ ಇರುವದು ಪೊಲೀಸ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಿಸಬೇಕು ಎನ್ನುವ ಧಾವಂತದಿಂದ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ  ಮುರ್ಡೇಶ್ವರದ ಮಾವಳ್ಳಿ 2 ಪಂಚಾಯಿತಿ ವ್ಯಾಪ್ತಿಯ ನಾಗೇಶ ಮಾಸ್ತಪ್ಪ ನಾಯ್ಕ ಇವರನ್ನು ನಗರ ವೃತ್ತ ನಿರೀಕ್ಷಕ ಪ್ರಶಾಂತ ನಾಯಕ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕುಂದಾಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಕ್ಕಳು ಬಲಿಯಾಗಿದ್ದಾರೆ. ಅವಘಡ ನಡೆಯುವ ಮುನ್ನವೆ ಎಚ್ಚೆತ್ತುಕೊಳ್ಳಬೇಕು. ಇನ್ನು ಮುಂದೆ ಅಟೋ ರಿಕ್ಷಾಗಳಾಗಲಿ, ಮಕ್ಕಳನ್ನು ಸಾಗಿಸುವ ಯಾವುದೆ ವಾಹನಗಳಾಗಲಿ ನಿಯಮಬಾಹಿರವಾಗಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವದು. ಪದೇ ಪದೇ ನಿಯಮ ಉಲ್ಲಂಘಿಸಿದರೆ ಪರವಾನಿಗೆ ರದ್ದು ಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ವೃತ್ತ ನಿರೀಕ್ಷಕರಾದ ಪ್ರಶಾಂತ ನಾಯಕ, ಹೇಳಿದ್ದಾರೆ. 
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...