ಕೋವಿಡ್-19; ಸಾಮಾಜಿಕ ಜಾಲಾತಾಣದಲ್ಲಿ ವಿಕೃತಿ ಮೆರೆದ ಸಮಾಜಘಾತಕರು

Source: sonews | By Staff Correspondent | Published on 10th May 2020, 11:20 PM | Coastal News | Special Report | Don't Miss |

ಕುಮಟಾದ ವ್ಯಕ್ತಿಗೆ ದುಬಾರಿಯಾಯಿತು ಮೃತರ ಅಂತಿಮ ದರ್ಶನ

ಭಟ್ಕಳ: ಲಾಕ್ ಡೌನ್ ಸಡಿಲಿಕೆಯ ಸಮಯದಲ್ಲಿ ಶವಸಂಸ್ಕಾರದಲ್ಲಿ ಪಾಲ್ಗೊಂಡು ಮೃತನ ಅಂತಿಮ ದರ್ಶನ ಪಡೆಯಲು ಕುಮಟಾದಿಂದ ಭಟ್ಕಳಕ್ಕೆ ಬಂದ ವ್ಯಕ್ತಿಯೊಬ್ಬರಿಗೆ ಮೃತರ ಅಂತಿಮ ದರ್ಶನ ದುಬಾರಿಯಾಗಿ ಪರಿಣಮಿಸಿದ್ದು  ಘಟನೆಗೆ ಸಂಬಂಧಿಸಿದಂತೆ ಕುಮಟಾ ಹೊನ್ನಾವರ ಭಾಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಟ್ಕಳದ ಕೊರೋನಾ ಸೋಂಕಿತರು ಮತ್ತು ಒಂದು ವಿಶೇಷ ಸಮುದಾಯದ ವಿರುದ್ಧ ಅವಹೇಳನಕಾರಿ ನಿಂದನಾತ್ಮಕ ಪೋಸ್ಟ್ ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿಗೆ ಕರಣವಾಗುತ್ತಿದ್ದಾರೆ. 

ಭಟ್ಕಳದಲ್ಲಿ ಮೇ 8ರಂದು ಒಮ್ಮೇಲೆ 12 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ  ಭಟ್ಕಳಕ್ಕೆ ಬಂದಿದ್ದ ಕುಮಟಾದ ವ್ಯಕ್ತಿಯನ್ನು ಕೊರೋನಾ ಭಯದಿಂದ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಮೂಲಗಳ ಪ್ರಕಾರ ಆ ವ್ಯಕ್ತಿಯ ಸಂಬಂದಿಕರೋರ್ವವರು ಭಟ್ಕಳದಲ್ಲಿ ಮೇ 5ರಂದು ನಿಧರಾಗಿದ್ದು ಅವರ ಅಂತಿಮ ಕಾರ್ಯದಲ್ಲಿ ಭಾಗವಹಿಸಲು ಕುಮಟಾ ದಿಂದ ಭಟ್ಕಳಕ್ಕೆ ಬಂದಿದ್ದರು ಎನ್ನಲಾಗಿದೆ. ಆ ವ್ಯಕ್ತಿ ಕುಮಟಾಕ್ಕೆ ಹೋದ ಬಳಿಕ ಆ ವ್ಯಕ್ತಿಯಿಂದ ಕೊರೋನಾ ಬಂದಿರಬಹುದು ಎಂಬ ಶಂಕೆಯಿಂದ ಆತನ ಜೊತೆಗೆ ಕುಟುಂಬವನ್ನು ಹೋಂ ಕ್ವಾರೆಂಟೈನ್ ಮಾಡಿ ಮನೆಯಿಂದ ಯಾರು ಕೂಡ ಹೊರ ಬರದಂತೆ ತಾಕೀತು ಮಾಡಲಾಯಿತು ಎನ್ನಲಾಗಿದೆ. 

ಆದರೆ, ಶನಿವಾರ ಬೆಳಿಗ್ಗೆ ಆ ವ್ಯಕ್ತಿ ಯ ಸಹೋದರ ಅಂಗಡಿಯನ್ನು ತೆರೆಯಲು ಮುಂದಾದಾಗ ಕೆಲವು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಭಟ್ಕಳಕ್ಕೆ ಬಂದಿರುವ ವ್ಯಕ್ತಿಯ ಸಹೋದರನನ್ನು ಹೋಂ ಕೊರೆಂಟೈನ್ ಮಾಡಿದ್ದಾಗಿ ವರದಿಯಾಗಿದೆ.

ಘಟನೆಗೆ ರೆಕ್ಕೆಪುಕ್ಕ ನೀಡಿ ಸಾಮಾಜಿಕ ಜಾಲಾತಾಣದಲ್ಲಿ ವೈಭವೀಕರಣ: ಇದೇ ಘಟನೆಯನ್ನು ಮುಂದಿಟ್ಟುಕೊಂಡು ಕೆಲ ಕಿಡಿಗೇಡಿ ಸಮಜಾಘಾತುಗಳು ಅದಕ್ಕೆ ರೆಕ್ಕೆಪುಕ್ಕವನ್ನು ಕಟ್ಟಿ ಭಟ್ಕಳದಿಂದ ಬಂದ ವ್ಯಕ್ತಿಗೆ ಕೊರೋನಾ ಸೋಂಕು ಇದೆ. ಆತನ ಸಂಪರ್ಕಕ್ಕೆ ಹಲವು ಮಂದಿ ಬಂದಿದ್ದಾರೆ ಕುಮಟಾ ಪಟ್ಟಣಕ್ಕೆ ಕೊರೋನಾ ಸೋಂಕು ತಾಗಿದೆ ಎಂಬ ರೀತಿಯಲ್ಲಿ ಬರೆದುಕೊಂಡು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಘಟನೆ ಕುರಿತಂತೆ ಕೆಲ ಸ್ಥಳೀಯ ಪತ್ರಿಕೆಗಳು ವ್ಯಕ್ತಿಯ ಕುರಿತು ಸಂಶಯ ಮೂಡಿಸಬಲ್ಲ ವರದಿಗಳನ್ನು ಪ್ರಕಟಿಸಿದ್ದು ಕುಮಟಾ ಉಪವಿಭಾಗದ ಸಹಾಯಕ ಅಯುಕ್ತ ಅಜಿತ್ ಎಂ. ರವರು “ಭಟ್ಕಳದಲ್ಲಿ ಕೋವಿಡ್-19  ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಕುಮಾಟಾ ತಾಲೂಕಿ ಸಾರ್ವಜನಿಕ ವಲಯದಲ್ಲಿ ಹಲವಾರು ವದಂತಿಗಳು ಹರಿದಾಡತೊಡಗಿದೆ. ಈವರೆಗೆ ತಾಲೂಕಿನಾದ್ಯಂತ ಯಾವುದೇ ಬಗೆಯ ಸಮಸ್ಯೆ ಕಾಣಿಸಿಕೊಂಡಿಲ್ಲವಾಗಿದ್ದು ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಗಮನ ಕೊಡದೇ ಸೂಕ್ತ ಮುನ್ನೆಚ್ಚರಿಕೆ ಕ್ಗರಮಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಕೊಂಡು, ಈ ಕೋವಿಡ್-19 ನಿಂದ ಮುಕ್ತಿ ಹೊಂದಲು ಸಹಕರಿಸಬೇಕಾಗ ಅಗ್ಯತತೆಯಿದೆ. ಅಲ್ಲದೇ ಈ ರೀತಿಯ ಸುಳ್ಳು ಸುದ್ಧಿ, ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಶಿಸ್ತುಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಬಳಿಕ ಫಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ ಸುಳ್ಳು ವದಂತಿ ಹರಡುವುದು ನಿಲ್ಲಿಸಿದ್ದಾರೆ.

ಭಟ್ಕಳದ ಕೋವಿಡ್-19 ಸೋಂಕಿತರನ್ನು ಕಾರವಾರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರ ಕುರಿತಂತೆಯೂ ಹಲವು ಅಪಸ್ವರಗಳು ಕೇಳಿಬಂದಿದ್ದು ಅಲ್ಲಿಯೂ ಕೂಡ ಒಂದು ಧರ್ಮವನ್ನು ಉಲ್ಲೇಖಿಸಿ ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ. ಇದಕ್ಕೆಲ್ಲ ಜಿಲ್ಲಾಡಳಿತ ಸೂಕ್ತ ಕಠಿನ ಕಾನೂನು ಕ್ರಮ ಜರಗಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದು ಕೊರೋನಾ ಕುರಿತಂತೆ ಯಾವುದೆ ತಪ್ಪು ಸಂದೇಶಗಳು ಹರಿಯಬಿಡದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿಗಾ ವಹಿಸುವುದು ಕೂಡ ಅಷ್ಟೇ ಸೂಕ್ತವಾಗಿದೆ. ಇಂತಹ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಅವರನ್ನು ಜೈಲಿಗೆ ಅಟ್ಟಬೇಕೆಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. 

ಜವಾಬ್ದಾರಿ ಮರೆಯುತ್ತಿರುವ ಸುದ್ದಿತಾಣಗಳು: ಉತ್ತರಕನ್ನಡ ಜಿಲ್ಲೆಯಲ್ಲಿ ಕೈಗೊಂದರಂತೆ ಆನ್ ಲೈನ್ ಸುದ್ದಿತಾಣಗಳು ಹುಟ್ಟಿಕೊಂಡಿದ್ದು ಇವುಗಳು ಬ್ರೇಕಿಂಗ್ ಸುದ್ದಿ ಕೊಡುವ ಧಾವಂತದಲ್ಲಿ ಕೊರೋನಾ ಸೋಂಕು ಕುರಿತಂತೆ ತಲೆಬುಡವಿಲ್ಲದ ಸುದ್ದಿಗಳನ್ನು ವೈಭವೀಕರಿಸಿ ವಾಟ್ಸಪ್ ಮೂಲಕ ಹರಿಯಬಿಡುತ್ತಿದ್ದು ಇವುಗಳು ತಮ್ಮ ಜವಾಬ್ದಾರಿಕೆಯನ್ನು ಮರೆಯುತ್ತಿವೆ. ಜಿಲ್ಲಾಡಳಿತ ಅನ್ ಲೈನ್ ಸುದ್ದಿತಾಣಗಳ ವರದಿಗಳ ಮೇಲೆ ಸೂಕ್ಷ್ಮ ನಿಗಾವಹಿಸಬೇಕಾಗಿದೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...