ಕುಮಟಾದಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ. ಬಿಜೆಪಿ ವಿರುದ್ಧ ಮುಖಂಡರ ವಾಗ್ದಾಳಿ.

Source: SO News | By Laxmi Tanaya | Published on 24th November 2022, 10:15 PM | Coastal News |

ಕುಮಟಾ : ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಮಾವೇಶ ಗುರುವಾರ ಪಟ್ಟಣದ ಮಣಕಿ ಮೈದಾನದಲ್ಲಿ ನಡೆಯಿತು.
 
2023ರ ವಿಧಾನಸಭಾ ಚುನಾವಣೆಯನ್ನ  ಕಾಂಗ್ರೆಸ್ ಗಮನದಲ್ಲಿರಿಸಿಕೊಂಡು  ಈ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಿತು. 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕುಮಟಾದಲ್ಲಿ ನಡೆದ ಈ ಸಭೆ ಐತಿಹಾಸಿಕವಾದ ಸಭೆ. ಪರೇಶ ಮೇಸ್ತಾ ವಿಚಾರ ಮಾತ್ರವಲ್ಲ. ನಿಮ್ಮನ್ನು ಜಾಗೃತಿಗೊಳಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮ ಸಂಘಟನೆಗೆ ಶಕ್ತಿ ನೀಡಿದ್ದಕ್ಕೆ ಶಿವಕುಮಾರ ಧನ್ಯವಾದ ಸಲ್ಲಿಸಿದರು. 

ಬಸವಣ್ಣ, ಕುವೆಂಪು, ಸಂತ ಶಿಶುನಾಳ ಷರೀಪರ ಕರ್ನಾಟಕ ಇದು. ದ್ವೇಷ, ಅಸೂಯೆಯಿಂದಾಗಿ ಜನ ವಲಸೆ ಹೋಗ್ತಿದ್ದಾರೆ. ಮಕ್ಕಳಿಗೆ ಮನೆ ಇದೆ, ಜಮೀನು ಇದೆ ಉದ್ಯೋಗ ಇಲ್ಲ. ಪ್ರಧಾನಮಂತ್ರಿಗಳು 15 ಲಕ್ಷ ಕೋಡ್ತಿದ್ದೇನೆಂದು ಹೇಳಿದ್ರು ಆಗಿಲ್ಲ. ರಾಹುಲ್ ಗಾಂಧೀಯವರು ಕನ್ಯಾಕುಮಾರಿ ಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಮಾಡಿದವರನ್ನ ನೆನೆಸಿಕೊಳ್ತಾರೆ.

 ದೇಶದ ಐಕ್ಯತೆ ಸಮಗ್ರತೆಗಾಗಿ ನಮ್ಮ ಕುಟುಂಬ ಸೇವೆ ಸಲ್ಲಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರಾದ ಆರ್ ವಿ ದೇಶಪಾಂಡೆ ಮತ್ತು ಐವನ್ ಡಿಸೋಜಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಿಎಂ ಸಿದ್ದರಾಮಯ್ಯ ಅವರು ಪರೇಶ ಮೇಸ್ತಾ ಪ್ರಕರಣವನ್ನ ಸಿಬಿಐ ಗೆ ನೀಡಿದ್ದರು. ಈಗ ಸಿಬಿಐ ಕೊಲೆ ಅಲ್ಲವೆಂದು ಹೇಳಿದೆ. ಸಿಬಿಐ ಕೇಂದ್ರ ದ ಅಧೀನದಲ್ಲಿರುವ ಸಂಸ್ಥೆ. ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಪ್ರಚೋದನೆ ನೀಡುತ್ತಿದೆ ಎಂದು ದೇಶಪಾಂಡೆ  ಆರೋಪಿಸಿದರು. 

ಕಾರ್ಯಕ್ರಮದಲ್ಲಿ ಶಾಸಕ ಯುಟಿ ಖಾದರ್, ಮಾಜಿ ಶಾಸಕರಾದ ವಿನಯಕುಮಾರ ಸೊರಕೆ,  ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಸತೀಶ್ ಸೈಲ್ ಮತ್ತು ಐವಾನ್ ಡಿಸೋಜಾ ಮಾತನಾಡಿದರು.

ಸಮಾವೇಶ ನಡೆಸುವ ಪೂರ್ವದಲ್ಲಿ ಕಾರ್ಯಕರ್ತರು ರ್ಯಾಲಿ ನಡೆಸಿದರು. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...