ರಾಜ್ಯಾದ್ಯಂತ ವೀಕೆಂಡ್ ಕರ್ಪೂ ಜಾರಿ; ನೈಟ್ ಕರ್ಪ್ಯೂ ವಿಸ್ತರಣೆ; ಪ್ರತಿಭಟನೆಗಳು, ರ‍್ಯಾಲಿಗಳಿಗೆ ಅವಕಾಶವಿಲ್ಲ • ಬೆಂಗಳೂರಿನಲ್ಲಿ ಎರಡು ವಾರ ಶಾಲಾ-ಕಾಲೇಜುಗಳು ಬಂದ್

Source: S O News | By I.G. Bhatkali | Published on 5th January 2022, 10:52 AM | State News |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಹಾಗೂ ಒಮೈಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದ ಎಲ್ಲ ಶಾಲಾ, ಕಾಲೇಜುಗಳ ಆಫ್‌ಲೈನ್ ತರಗತಿಗಳನ್ನು ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತಮಟ್ಟದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಯಾವುದೇ ವೈಯಕ್ತಿಕ ಸಂಘ ಸಂಸ್ಥೆಗಳ ನಾವಿಚಾರ ಮುಂದಿಟ್ಟುಕೊಂಡು ಈ ಈ ನಿರ್ಧಾರ ಕೈಗೊಂಡಿಲ್ಲ. ರಾಜ್ಯದ ಆರೋಗ್ಯ, ಪ್ರಾಣ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಯಾವುದೇ ರಾಲಿ, ಪ್ರತಿಭಟನೆಗಳು, ಜಾತ್ರೆ ಮಾಡುವಂತಿಲ್ಲ. ಜನ ಜಂಗುಳಿ ಸೇರುವಂತಿಲ್ಲ. ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. 9 ಮೆಟ್ರೊ, ಬಿಎಂಟಿಸಿಗೆ ಸಂಬಂಧಿಸಿದಂತೆ ಅವರೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುತ್ತಾರೆ.
ಆರ್.ಅಶೋಕ್, ಕಂದಾಯ ಸಚಿವ

ಬೆಂಗಳೂರಿನಲ್ಲಿ ಇವತ್ತು 3,048 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಮೈಕ್ರಾನ್ 147 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ದ್ವಿಗುಣ ಆಗುತ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ಪ್ರಕರಣ ಆಗಬಹುದು. ಈಗಾಗಲೇ ಮಹಾರಾಷ್ಟ್ರದಲ್ಲಿ 10 ಸಾವಿರ ಗಡಿ ದಾಟಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ 10, 11 ಮತ್ತು 12ನೇ ತರಗತಿ ಹೊರತುಪಡಿಸಿ, ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಆಫ್‌ಲೈನ್ ತರಗತಿಗಳು ಮುಚ್ಚಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆಗೆ ಈ ಹೊಸ ನಿಯವ ಜಾರಿಗೆ ಬರುತ್ತದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರ ಕರ್ಪೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆಹಾರ, ಹಾಲು, ತರಕಾರಿ, ಔಷಧ, ಹೊಟೇಲ್‌ಗಳಲ್ಲಿ ಪಾರ್ಸೆಲ್ ಪಡೆಯಲು ಅವಕಾಶ ಇರುತ್ತದೆ. ರಾತ್ರಿ ಕರ್ಪೂ ಅನ್ನು ಎರಡು ವಾರಗಳ ಕಾಲ ಮುಂದುವರಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಸರಕಾರಿ ಕಚೇರಿಗಳಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ರಾಜ್ಯಾದ್ಯಂತ ಚಿತ್ರಮಂದಿರ, ಮಾಲ್, ಬಾರ್, ಪಬ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಸಾಮರ್ಥ್ಯದಷ್ಟೆ ಅನುಮತಿ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡುವವರು ಕೋವಿಡ್ ಎರಡು ಲಸಿಕೆಗಳನ್ನು ಪಡೆದಿರಬೇಕು. ಮದುವೆಗಳು ಹೊರಾಂಗಣದಲ್ಲಿ ಇದ್ದರೆ 200, ಒಳಾಂಗಣದಲ್ಲಿ 100 ಜನರಿಗೆ ಸೀಮಿತಗೊಳಿಸಲಾಗಿದೆ. ಅಲ್ಲಿಯೂ ಕೋವಿಡ್ ಎರಡು ಡೋಸ್ ಪಡೆದಿರುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಪ್ರತಿಯೊಂದು ಕ್ಷೇತ್ರಕ್ಕೂ ತಲಾ 2 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನ, ಮಸೀದಿ, ಚರ್ಚಗಳಲ್ಲಿ 50 ಜನರಿಗೆ ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ತೆಲಂಗಾಣದಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದನ್ನು ಅವಲೋಕಿಸಿದ್ದೇವೆ ಜೊತೆಗೆ, ಬೇರೆ ದೇಶಗಳಲ್ಲಿನ ಕ್ರಮಗಳ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್‌ನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1.16ರಷ್ಟಿತ್ತು. ಕೇವಲ ನಾಲ್ಕು ದಿನಗಳಲ್ಲಿ ಇದು ಶೇ.3ರ ಗಡಿ ದಾಟಿದೆ ಎಂದರು.

ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಪರೀಕ್ಷೆ ಮಾಡಿದ ನಂತರ ಕೇಂದ್ರ ಸರಕಾರ ಯಾವ ದೇಶಗಳು ಹೈ ರಿಸ್ಕ್ ಎಂದು ತಿಳಿಸಿದೆಯೋ ಆ ದೇಶಗಳಿಂದ ㅎ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಿ ಪಾಸಿಟಿವ್ ಬಂದರೆ, ಟ್ರಯಾಜ್ ಮಾಡಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿಕೊಡುತ್ತೇವೆ. ಮನೆಗಳಿಗೆ ಕಳುಹಿಸುವುದಿಲ್ಲ. ಬಜೆಟ್ ಹೊಟೇಲ್, ಟು, ತ್ರಿ, ಫೈವ್ ಸ್ಟಾರ್ ಹೊಟೇಲ್ ಗಳಿಗೆ ಕಳುಹಿಸುತ್ತೇವೆ. ಬಜೆಟ್ ಹೋಟೆಲಗಳ ದರ ಸರಕಾರ ಭರಿಸುತ್ತದೆ. ಉಳಿದ ಹೊಟೇಲ್ ಗಳ ದರ ಪ್ರಯಾಣಿಕರೇ ಭರಿಸಬೇಕು ಎಂದು ಅವರು ಹೇಳಿದರು. ಹಾಸಿಗೆಗಳು, ಆಕ್ಸಿಜನ್, ಐಸಿಯು, ಅಗತ್ಯವಾಗಿ ಬೇಕಿರುವ ಔಷಧಿಗಳ ಸರಬರಾಜು, ಖರೀದಿ, ಸಿದ್ಧತೆಗಳ ಬಗ್ಗೆಯೂ ಸಂಪೂರ್ಣವಾಗಿ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 8 ವಲಯಗಳಾಗಿ ವಿಂಗಡಿಸಿ, ಹಾಸಿಗೆಗಳ ಸಿದ್ಧತೆ, ಟ್ರಯಾಜ್, ಆ್ಯಂಬುಲೆನ್ಸ್, ಆಕ್ಸಿಜನ್ ಸಿದ್ಧತೆಗಳ ಕುರಿತು ಮೈಕ್ರೋ ಮ್ಯಾನೇಜ್‌ಮೆಂಟ್ ಮಾಡಲು ಐಎಎಸ್, ಐಪಿಎಸ್ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.
198 ವಾರ್ಡುಗಳಲ್ಲಿ ಕ್ಷೇತ್ರವಾರು ಆ್ಯಂಬುಲೆನ್ಸ್ ನೀಡಿದ್ದೇವೆ. ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ರೈಲು, ರಸ್ತೆ, ವಿಮಾನ ಸೇರಿದಂತೆ ಯಾವುದೇ ಮಾರ್ಗದಲ್ಲಿ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು, ಕಡ್ಡಾಯವಾಗಿ ಅವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಬೇಕು ಎಂಬ ನಿಯಮ ತಂದಿದ್ದೇವೆ ಎಂದು ಸುಧಾಕರ್‌ ಹೇಳಿದರು.

ಹೊಸ ವರ್ಷದ ಸಂಭ್ರಮಕ್ಕೆ ಗೋವಾಗೆ ಹೋಗಿ ಬಂದವರಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಿದೆ. ಮೊದಲನೇ, ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆ ಅಷ್ಟೊಂದು ಭೀಕರ ವ್ಯಾಧಿ ಅಲ್ಲ, ವೆಂಟಿಲೇಟ‌, ಆಕ್ಸಿಜನ್ ಅವಶ್ಯಕತೆ ಬಹಳಷ್ಟು ಕಡಿಮೆಯಾಗುತ್ತದೆ. ಅತೀ ಹೆಚ್ಚು ಸೋಂಕಿತರು ಆದಾಗ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚುತ್ತದೆ. ಪರಿಸ್ಥಿತಿ ಕೈ ಮೀರಿ ಹೋಗದಂತೆ ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ಅದಕ್ಕೆ ದಂಡ ನಿಗದಿ ಮಾಡಲಾಗಿದೆ. ಯಾವುದೇ ಧಾರ್ಮಿಕ, ಸಂಘ ಸಂಸ್ಥೆಗಳು, ಯಾವುದೇ ಹೋರಾಟದ ಕಾರ್ಯಕ್ರಮಗಳೇ ಆಗಲಿ ಅವುಗಳಿಗೆ ಅವಕಾಶವಿಲ್ಲ. ಮುಂದಿನ ಎರಡು ವಾರ ಯಾರೂ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಸರಕಾರದ ನಿರ್ಧಾರಕ್ಕೆ ಗೌರವ ಕೊಟ್ಟು ಜನರ ಹಿತವನ್ನು ಕಾಯುವ ಕೆಲಸ ಮಾಡಬೇಕು ಎಂದು ಸುಧಾಕರ್‌ ಮನವಿ ಮಾಡಿದರು. ರಾಜ್ಯದಲ್ಲಿ ಕೋವಿಡ್-19 ಸೋಂಕು ಹಾಗೂ ಒಮೈಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದ ಎಲ್ಲ ಶಾಲಾ, ಕಾಲೇಜುಗಳ ಆಫ್‌ಲೈನ್ ತರಗತಿಗಳನ್ನು ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತಮಟ್ಟದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನಲ್ಲಿ ಇವತ್ತು 3,048 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಮೈಕ್ರಾನ್ 147 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ದ್ವಿಗುಣ ಆಗುತ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ಪ್ರಕರಣ ಆಗಬಹುದು. ಈಗಾಗಲೇ ಮಹಾರಾಷ್ಟ್ರದಲ್ಲಿ 10 ಸಾವಿರ ಗಡಿ ದಾಟಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ 10, 11 ಮತ್ತು 12ನೇ ತರಗತಿ ಹೊರತುಪಡಿಸಿ, ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಆಫ್‌ಲೈನ್ ತರಗತಿಗಳು ಮುಚ್ಚಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆಗೆ ಈ ಹೊಸ ನಿಯವ ಜಾರಿಗೆ ಬರುತ್ತದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರ ಕರ್ಪೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆಹಾರ, ಹಾಲು, ತರಕಾರಿ, ಔಷಧ, ಹೊಟೇಲ್‌ಗಳಲ್ಲಿ ಪಾರ್ಸೆಲ್ ಪಡೆಯಲು ಅವಕಾಶ ಇರುತ್ತದೆ. ರಾತ್ರಿ ಕರ್ಪೂ ಅನ್ನು ಎರಡು ವಾರಗಳ ಕಾಲ ಮುಂದುವರಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಸರಕಾರಿ ಕಚೇರಿಗಳಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ರಾಜ್ಯಾದ್ಯಂತ ಚಿತ್ರಮಂದಿರ, ಮಾಲ್, ಬಾರ್, ಪಬ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಸಾಮರ್ಥ್ಯದಷ್ಟೆ ಅನುಮತಿ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡುವವರು ಕೋವಿಡ್ ಎರಡು ಲಸಿಕೆಗಳನ್ನು ಪಡೆದಿರಬೇಕು. ಮದುವೆಗಳು ಹೊರಾಂಗಣದಲ್ಲಿ ಇದ್ದರೆ 200, ಒಳಾಂಗಣದಲ್ಲಿ 100 ಜನರಿಗೆ ಸೀಮಿತಗೊಳಿಸಲಾಗಿದೆ. ಅಲ್ಲಿಯೂ ಕೋವಿಡ್ ಎರಡು ಡೋಸ್ ಪಡೆದಿರುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ತೆಲಂಗಾಣದಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದನ್ನು ಅವಲೋಕಿಸಿದ್ದೇವೆ ಜೊತೆಗೆ, ಬೇರೆ ದೇಶಗಳಲ್ಲಿನ ಕ್ರಮಗಳ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್‌ನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1.16ರಷ್ಟಿತ್ತು. ಕೇವಲ ನಾಲ್ಕು ದಿನಗಳಲ್ಲಿ ಇದು ಶೇ.3ರ ಗಡಿ ದಾಟಿದೆ ಎಂದರು. ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಪರೀಕ್ಷೆ ಮಾಡಿದ ನಂತರ ಕೇಂದ್ರ ಸರಕಾರ ಯಾವ ದೇಶಗಳು ಹೈ ರಿಸ್ಕ್ ಎಂದು ತಿಳಿಸಿದೆಯೋ ಆ ದೇಶಗಳಿಂದ ㅎ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಿ ಪಾಸಿಟಿವ್ ಬಂದರೆ, ಟ್ರಯಾಜ್ ಮಾಡಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿಕೊಡುತ್ತೇವೆ. ಮನೆಗಳಿಗೆ ಕಳುಹಿಸುವುದಿಲ್ಲ.ಬಜೆಟ್ ಹೊಟೇಲ್, ಟು, ತ್ರಿ, ಫೈವ್ ಸ್ಟಾರ್ ಹೊಟೇಲ್ಗಳಿಗೆ ಕಳುಹಿಸುತ್ತೇವೆ. ಬಜೆಟ್ ಹೊಟೇಲ್‌ಗಳ ದರ ಸರಕಾರ ಭರಿಸುತ್ತದೆ. ಉಳಿದ ಹೊಟೇಲ್‌ಗಳ ದರ ಪ್ರಯಾಣಿಕರೇ ಭರಿಸಬೇಕು ಎಂದು ಅವರು ಹೇಳಿದರು. ಹಾಸಿಗೆಗಳು, ಆಕ್ಸಿಜನ್, ಐಸಿಯು, ಅಗತ್ಯವಾಗಿ ಬೇಕಿರುವ ಔಷಧಿಗಳ ಸರಬರಾಜು, ಖರೀದಿ, ಸಿದ್ಧತೆಗಳ ಬಗ್ಗೆಯೂ ಸಂಪೂರ್ಣವಾಗಿ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 8 ವಲಯಗಳಾಗಿ ವಿಂಗಡಿಸಿ, ಹಾಸಿಗೆಗಳ ಸಿದ್ಧತೆ, ಟ್ರಯಾಜ್, ಆ್ಯಂಬುಲೆನ್ಸ್, ಆಕ್ಸಿಜನ್ ಸಿದ್ಧತೆಗಳ ಕುರಿತು ಮೈಕ್ರೋ ಮ್ಯಾನೇಜ್‌ಮೆಂಟ್ ಮಾಡಲು ಐಎಎಸ್, ಐಪಿಎಸ್ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.

198 ವಾರ್ಡುಗಳಲ್ಲಿ ಕ್ಷೇತ್ರವಾರು ಆ್ಯಂಬುಲೆನ್ಸ್ ನೀಡಿದ್ದೇವೆ. ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ರೈಲು, ರಸ್ತೆ, ವಿಮಾನ ಸೇರಿದಂತೆ ಯಾವುದೇ ಮಾರ್ಗದಲ್ಲಿ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು, ಕಡ್ಡಾಯವಾಗಿ ಅವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಬೇಕು ಎಂಬ ನಿಯಮ ತಂದಿದ್ದೇವೆ ಎಂದು ಸುಧಾಕರ್‌ ಹೇಳಿದರು.

ಹೊಸ ವರ್ಷದ ಸಂಭ್ರಮಕ್ಕೆ ಗೋವಾಗೆ ಹೋಗಿ ಬಂದವರಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಿದೆ. ಮೊದಲನೇ, ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆ ಅಷ್ಟೊಂದು ಭೀಕರ ವ್ಯಾಧಿ ಅಲ್ಲ, ವೆಂಟಿಲೇಟ‌, ಆಕ್ಸಿಜನ್ ಅವಶ್ಯಕತೆ ಬಹಳಷ್ಟು ಕಡಿಮೆಯಾಗುತ್ತದೆ. ಅತೀ ಹೆಚ್ಚು ಸೋಂಕಿತರು ಆದಾಗ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚುತ್ತದೆ. ಪರಿಸ್ಥಿತಿ ಕೈ ಮೀರಿ ಹೋಗದಂತೆ ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ಅದಕ್ಕೆ ದಂಡ ನಿಗದಿ ಮಾಡಲಾಗಿದೆ. ಯಾವುದೇ ಧಾರ್ಮಿಕ, ಸಂಘ ಸಂಸ್ಥೆಗಳು, ಯಾವುದೇ ಹೋರಾಟದ ಕಾರ್ಯಕ್ರಮಗಳೇ ಆಗಲಿ ಅವುಗಳಿಗೆ ಅವಕಾಶವಿಲ್ಲ. ಮುಂದಿನ ಎರಡು ವಾರ ಯಾರೂ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಸರಕಾರದ ನಿರ್ಧಾರಕ್ಕೆ ಗೌರವ ಕೊಟ್ಟು ಜನರ ಹಿತವನ್ನು ಕಾಯುವ ಕೆಲಸ ಮಾಡಬೇಕು ಎಂದು ಸುಧಾಕರ್‌ ಮನವಿ ಮಾಡಿದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...