ಕಂಪ್ಯೂಟರ್ ಪರದೆ ಮೇಲೆ ಶ್ರೀಕೃಷ್ಣನ ಲೀಲೆ. ಆನ್ ಲೈನ್ ನಲ್ಲಿ ನಡೆದ ರಾಜ್ಯಮಟ್ಟದ ಮುದ್ದು ಕೃಷ್ಣ , ಮುದ್ದು ರಾಧಾ ಸ್ಪರ್ಧೆ.

Source: SO News | By Laxmi Tanaya | Published on 30th August 2021, 7:53 PM | Coastal News |

ಭಟ್ಕಳ : ಕಂಪ್ಯೂಟರ್ ಪರದೆಯ ಮೇಲೆ ಶ್ರೀಕೃಷ್ಣನ ಲೀಲೆಯನ್ನು  ನೋಡುವ ಮತ್ತು ನಿಷ್ಪಕ್ಷಪಾತವಾಗಿ ನಿರ್ಣಯವನ್ನು ನೀಡುವ ಅವಕಾಶವನ್ನು ಭಟ್ಕಳ ತಾಲೂಕಾ ಗಾಣಿಗ ಸೇವ ಸಂಘ ನೀಡಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮಾನಸುತ ಶಂಭು‌ ಹೆಗಡೆ ಹೇಳಿದರು.

 ಸ್ಪರ್ದೆಯ  ನಿರ್ಣಾಯಕರಾಗಿ ಅವರು  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಟ್ಕಳ ತಾಲೂಕಾ ಗಾಣಿಗ ಸೇವ ಸಂಘ ಭಟ್ಕಳ, ಶ್ರೀಗೋಪಾಲಕೃಷ್ಣ ಪತ್ತಿನ ಸಹಕಾರಿಸಂಘ ನಿಯಮಿತ ಭಟ್ಕಳ ಮತ್ತು ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಆನ್ ಲೈನ್ ನಲ್ಲಿ ನಡೆದ  ರಾಜ್ಯಮಟ್ಟದ ಮುದ್ದು ಕೃಷ್ಣ , ಮುದ್ದು ರಾಧಾ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮವನ್ನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಪ್ರಕಾಶ ಶಿರಾಲಿ, ಕಳೆದ ಎರಡು ವರ್ಷಗಳಿಂದ  ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮೋತ್ಸವವನ್ನು ಆಚರಿಸಿ ಮುದ್ದು ಕೃಷ್ಣ  ಮುದ್ದು ರಾಧೆ ಸ್ಪರ್ಧೆಯನ್ನು ಆಯೋಜಿಸಿದ ನಮಗೆ ಈ ಕೋವಿಡ್-19 ಸಂದರ್ಭದಲ್ಲಿ ಮಕ್ಕಳಿಗೆ ಅವಕಾಶ ಕೈತಪ್ಪಬಾರದು ಎನ್ನುವ ಕಾರಣಕ್ಕೆ  ಆನ್ ಲೈನ್ ನಲ್ಲಿ ಆಯೋಜಿಸಿ ಸುಮಾರು 250ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಂದ ಭಾಗವಹಿಸಿದ್ದಾರೆ. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಇ- ಪ್ರಶಸ್ತಿ ಪತ್ರ ಮತ್ತು ಕೃಷ್ಣ  ಅಷ್ಟಮಿಯ ಪ್ರತೀಕವಾಗಿ ಮೊದಲ ಮೂರು ಸ್ಥಾನ ಪಡೆದ ಕೃಷ್ಣ ಮತ್ತು ರಾಧೆಯರಿಗೆ ಕ್ರಮವಾಗಿ 5000, 3000 ಮತ್ತು 2000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ನಂತರದ  5 ಸ್ಥಾನಗಳಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಹಾಗೂ ಫೇಸ್ಬುಕ್ ನಲ್ಲಿ ಅತೀ ಹೆಚ್ಚು ಲೈಕ್ ಪಡೆದ ಕೃಷ್ಣ  ಮತ್ತು ರಾಧೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಸಹ ನಿರ್ಣಾಯಕರಾಗಿ ಚಿತ್ರಕಲಾ ಶಿಕ್ಷಕರಾದ ಚೆನ್ನವೀರಪ್ಪ ಹೊಸಮನಿ, ಶಿಕ್ಷಕರಾದ ಗೀತಾ ಶಿರೂರು ಉಪಸ್ಥಿತರಿದ್ದರು. 

ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇದ್ರ ಶ್ಯಾನಭಾಗ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ ಸುಭಾಷ್ ಶೆಟ್ಟಿ ಮಾತನಾಡಿದರು.

ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ , ಉಪಾಧ್ಯಕ್ಷ ಎಮ್. ಆರ್. ಮುರ್ಡೇಶ್ವರ ಮತ್ತು ಗಜಾನನ ಶೆಟ್ಟಿ , ಕಾರ್ಯದರ್ಶಿ ರಾಜೇಶ ಶೆಟ್ಟಿ ಮತ್ತು ಮನೋಜ ಶೆಟ್ಟಿ ಉಪಸ್ಥಿತರಿದ್ದರು. ಆನ್ ಲೈನ್ ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಂಪೂರ್ಣ ನೆರವನ್ನು ನೀಡಿದ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಉಪನ್ಯಾಸಕಿ ಪಲ್ಲವಿ ನಾಯ್ಕ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪುತ್ತೂರಿನ ವಾಗ್ಮಿ ಕೆ. ಪ್ರಥಮ, ಮಂಗಳೂರಿನ ರಿಧಿ ಶೆಟ್ಟಿಗಾರ ದ್ವಿತೀಯ, ಮಂಗಳೂರಿನ ತನುಷ್ಕಾ  ಬಿ. ತೃತೀಯ, ಮಂಗಳೂರಿನ ಸಿಯಾ ಸಾಹಿ ನಾಲ್ಕನೇಯ, ಭಟ್ಕಳದ  ಶಮಿಕಾ ಪ್ರವೀಣ ಶೆಟ್ಟಿ ಐದನೇಯ, ಭಟ್ಕಳದ ರುಹಾನಿ ಗಾಣಿಗ ಆರನೇ, ಭಟ್ಕಳದ ಅದ್ವಿತಾ ಎಸ್ ಆಚಾರ್ಯ ಏಳನೇಯ ಮತ್ತು ಬೆಂಗಳೂರಿನ ಬಿ ಅಧಿತ್ರಿ ಎಂಟನೇಯ ಸ್ಥಾನ ಪಡೆದುಕೊಂಡರು. 

ಮುದ್ದು ರಾಧಾ ಸ್ಪರ್ಧೆಯಲ್ಲಿ ಭಟ್ಕಳದ ಅದ್ವಿತಾ ಎಸ್ ಆಚಾರ್ಯ ಪ್ರಥಮ, ಮಂಗಳೂರಿನ ಸಿಯಾ ಸಾಹಿ ದ್ವಿತೀಯ, ಮುರ್ಡೇಶ್ವರದ ಸಮನ್ವಿ  ಗಿರೀಷ ಶೆಟ್ಟಿ ತೃತೀಯ, ಹೊನ್ನಾವರದ ವೈಣವಿ ರಾಜೇಶ ಶೆಟ್ಟಿ ನಾಲ್ಕನೇಯ, ಭಟ್ಕಳದ ಅನ್ವಿತಾ ಜಗದೀಶ ಶೆಟ್ಟಿ ಐದನೇಯ, ಭಟ್ಕಳದ  ರುಹಾನಿ ಗಾಣಿಗ ಆರನೇ, ಭಟ್ಕಳದ ವೃದ್ಧಿ ವಿರೇಂದ್ರ ಶ್ಯಾನಭಾಗ ಏಳನೇಯ ಮತ್ತು ಬ್ರಹ್ಮಾವರದ ಶ್ರೇಷ್ಟಾ ಎಚ್.ಎಸ್ ಎಂಟನೇ ಸ್ಥಾನ ಪಡೆದುಕೊಂಡರು. 

ಅತೀ ಹೆಚ್ಚು ಫೇಸ ಬುಕ್ ಲೈಕ್ ವಿಭಾಗದಲ್ಲಿ ಬೆಂಗಳೂರಿನ ಆಭಿನವ ಜಿ. ಮತ್ತು ಯಶ್ಮಿತ್ ಮಿಥುನ ಮುರ್ಡೇಶ್ವರ ಕೃಷ್ಣನಾಗಿ, ಭಟ್ಕಳದ ವೃದ್ಧಿ ವಿರೇಂದ್ರ ಶ್ಯಾನಭಾಗ  ಮತ್ತು ಶ್ರೇಯಾ ಕೇಶವ ನಾಯ್ಕ, ಭಟ್ಕಳ ರಾಧೆಯಾಗಿ ಪ್ರಥಮ ಸ್ಥಾನ ಪಡೆದು  ವಿಶೇಷ ಬಹುಮಾನವನ್ನು ಪಡೆದುಕೊಂಡರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...