ಶಾಲೆಗಳ ಅಭಿವೃದ್ದಿಗೆ ಹಣವನ್ನು ತರುವ ಜವಾಬ್ದಾರಿ ನನ್ನದು- ಕೆ.ಆರ್.ರಮೇಶ್ ಕುಮಾರ್

Source: sonews | By Staff Correspondent | Published on 1st October 2019, 10:47 PM | State News |

ಶ್ರೀನಿವಾಸಪುರ: ಸರ್ಕಾರಿ ಶಾಲೆಗಳೆಂದರೆ ನನಗೆ ಪಂಚ ಪ್ರಾಣ ಶಾಲೆಗಳ ಅಭಿವೃದ್ದಿಗೆ ಹಣವನ್ನು ತರುವ ಜವಾಬ್ದಾರಿ ನನ್ನದು ಅಧಿಕಾರಿಗಳಾದ ನೀವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕೆಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಮೊದಲು ಆ ಶಾಲೆಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಬೇಕು. ಶಾಲೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಒಂದೇ ಕಡೆ ಇದ್ದರೆ ಶಾಲೆಯು ಅಭಿವೃದ್ದಿಯಾಗುತ್ತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಮುಖ್ಯವಾಗಿ ಗ್ರಂಥಾಲಯ, ಶೌಚಾಲಯ, ಕ್ರೀಡಾಂಗಣ, ಅಗತ್ಯವಾಗಿ ಶಾಲಾ ಕೊಠಡಿಗಳು ಎಷ್ಟು ಬೇಕು ಎಂಬುದು ಪಟ್ಟಿ ಮಾಡಿ ನನಗೆ ಕೊಡಿ ಸರ್ಕಾರದಿಂದ ಹಣವನ್ನು ಒದಗಿಸುವ ಕೆಲಸ ಮಾಡುತ್ತೇನೆಂದರು.
ಈಗಿನ ಗುತ್ತಿಗೆದಾರರಿಗೆ ಜಾಗ ಸಿಕ್ಕಿದರೆ ಸಾಕು ಅವರಿಗೆ ಇಷ್ಟಬಂದಂತೆ ಕೊಠಡಿಗಳನ್ನು ನಿರ್ಮಿಸಿ ಹೋಗುತ್ತಾರೆ ಕೆಲವು ದಿವಸಗಳ ನಂತರ ಅದು ಸೋರುತ್ತದೆ. ಗುತ್ತಿಗೆದಾರರು ಪ್ರಮಾಣಿಕವಾಗಿ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಕಟ್ಟಡ ನಿರ್ಮಿಸಿದಾಗ ಅವರಿಗೂ ಒಳ್ಳೆಯ ಹೆಸರು ಬರುತ್ತದೆ ಆದರೆ ಆವಸರದ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸುತ್ತಾರೆ. ಗುತ್ತಿಗೆದಾರರು ಜವಾಬ್ದಾರಿತವಾಗಿ ಕೆಲಸಗಳನ್ನು ಮಾಡಬೇಕಾಗುತ್ತದೆ.
ರೇಷ್ಮೆ ಇಲಾಖೆಗೆ ಸಹಾಯಕ ನಿರ್ದೇಶಕ ನಾಗರಾಜ್ ರನ್ನು ನಿಮ್ಮ ಇಲಾಖೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ರೈತರು ಕಛೇರಿಗೆ ತಿರುಗಾಡದಂತೆ ಸೌಲಭ್ಯಗಳನ್ನು ಒದಗಿಸಿ ನಿಮಗೂ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಬಗ್ಗೆ ಹಲವಾರು ದೂರುಗಳು ನನ್ನ ಗಮನಕ್ಕೆ ಬರುತ್ತಿವೆ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಸಲಹೆ ನೀಡದರು.
ನಾನು ಮೆತ್ತಗೆ ಮಾತನಾಡಿದರೆ ಕೇಳುವುದಿಲ್ಲ ಏರು ಧ್ವನಿಯಲ್ಲಿ ಮಾತನಾಡಿದರೆ ರಮೇಶ್ ಕುಮಾರ್ ಹೀಗೆ ಮಾತನಾಡುತ್ತಾರೆಂದು ಅಧಿಕಾರಿಗಳು ಹೇಳುತ್ತಾರೆ. ಸಾರ್ವಜನಿಕರು ಕಛೇರಿಗೆ ಅಲದಾಡಬಾರದು ಅವರ ಕೆಲಸಗಳು ಅಲ್ಲಿಯೇ ಆಗಬೇಕೆಂಬುದು ನನ್ನ ಉದ್ದೇಶ ಕೆಲಸ ಮಾತ್ರ ಆಗುತ್ತಿಲ್ಲ ಹಾಗೂ ಹಣ ಸಹ ದುರುಪಯೋಗ ಆಗುತ್ತಿಲ್ಲ  ಆದರೆ ಕೆಲಸ ಮಾತ್ರ ಎಲ್ಲೂ ಆಗುತ್ತಿಲ್ಲ ಎಂದು ಅಧಿಕಾರಿಗಳಿಗಳಲ್ಲಿ ಪ್ರಶ್ನಿಸಿ ಕೂಡಲೇ ಯಾವ ಹಳ್ಳಿಯಲ್ಲಿ ಯಾವ ಕೆಲಸ ಬೇಕೆಂದರೂ ಅಧಿಕಾರಿಗಳು ನಿಗಾ ವಹಿಸಿ ಪಟ್ಟಿಯನ್ನು ಸಿದ್ದಪಡಿಸಿ ನನಗೆ ಕೊಡಿ ದಸರಾ ಹಬ್ಬ ಮುಗಿದ ಮೇಲೆ ಹಂತ ಹಂತವಾಗಿ ನಾನೇ ಕಾಮಗಾರಿಗೆ ಚಾಲನೇ ನೀಡುತ್ತೇನೆಂದರು.
ಇದೇ ಸಮಯದಲ್ಲಿ 13 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.
ಇದೇ 13 ರಂದು ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಿ ಎಂದರು.

ಇದೇ ಸಮಯದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನರೇಶ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸನ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಗೋವಿಂದಸ್ವಾಮಿ, ರಾಯಲ್ಪಾಡ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜಯ್‍ರೆಡ್ಡಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಎಸ್.ಆನಂದ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಪಿಡಬ್ಲ್ಯು ಇಲಾಖೆಯ ಸಹಾಯಕ ಕಾರ್ಯಪಾಲಯ ಅಭಿಯಂತರರು ಎಲ್.ಕೆ. ಶ್ರೀನಿವಾಸಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಣ್ಣ, ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ಸುದ್ದಿ -2
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಲಪಲ್ಲಿ ಗ್ರಾಮದಲ್ಲಿ ಬಾಬಯ್ಯ ಸ್ವಾಮಿ ಹಬ್ಬವನ್ನು ಗ್ರಾಮಸ್ಥರು ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಹರಿಕೆ ಒತ್ತ ಭಕ್ತಾಧಿಗಳು ಪೀರುಗಳನ್ನು ದೇವರಿಗೆ ಸಮರ್ಪಿಸಿ ಸಕ್ಕರೆಯನ್ನು ಮುಡುಪಾಗಿ ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಬಯ್ಯ ದೇವರ ಮೆರವಣಿಗೆಯನ್ನು ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳನ್ನು ಸೈಯದ್ ಅಮಾನುಲ್ಲಾಖಾನ್ ರವರ ಕಟುಂಬದವರು ನಡೆಸಿಕೊಟ್ಟಿದ್ದರು. ಈ ಹಬ್ಬಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು.


 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...