ಮುಂಡಗೋಡ: ಮುಂಡಗೋಡ ತಾಲೂಕಿನಲ್ಲಿ ಇಂದು 7 ಜನರಲ್ಲಿ ಕೋವಿಡ್ ಸೋಂಕು ದೃಡಪಟ್ಟಿದೆ

Source: Nazir Tadapatri | By JD Bhatkali | Published on 15th May 2021, 2:51 PM | Coastal News | Don't Miss |

ಮುಂಡಗೋಡ: ಕೆಲವು ದಿನಗಳಿಂದ 60 ರ ಗಡಿ ದಾಟುತ್ತಿದ್ದ ಕೋವಿಡ್-19 ಸೋಂಕಿತರ ಪ್ರಮಾಣ ಇಂದು ಕೇವಲ 7 ಇಳಿದಿರುವುದು ಮುಂಡಗೋಡ ಜನತೆ ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ.

ಮುಂಡಗೋಡ ಪಟ್ಟಣದಲ್ಲಿ ಕಂಬಾರಗಟ್ಟಿ ಪ್ಲಾಟ್‍ನಲ್ಲಿ 2, ನಂದಿಕೇಶ್ವರ ಹಾಗೂ ಗಾಂಧಿನಗರದಲ್ಲಿ ತಲಾ 1. ಗ್ರಾಮಾಂತರ ಪ್ರದೇಶ ಮಳಗಿ ಗ್ರಾಮದಲ್ಲಿ, ಟಿಬೇಟ್ ಕ್ಯಾಂಪ್ ಹಾಗೂ ಹನಮಾಪುರ ಗ್ರಾಮದಲ್ಲಿ ತಲಾ ಒಂದು ಸೋಂಕಿತರ ಪ್ರಕರಣಗಳು ದೃಡಪಟ್ಟಿವೆ.

ಈ ಕುರಿತು ಆರೋಗ್ಯಾಧಿಕಾರಿ ಎಚ್. ಎಫ್. ಇಂಗಳೆಯವರನ್ನು ಕೇಳಿದಾಗ ಖುಷಿ ಪಡುವ ಅಗತ್ಯವಿಲ್ಲ ನಾಳೆಯ ದಿನ ಹೆಚ್ಚಿಗೆಯೂ ಬರಬಹುದು ಆದ್ದರಿಂದ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸಿಕೊಂಡು ಮುಂಜಾಗ್ರತ ಕ್ರಮ ವಹಿಸುವುದು ಅತ್ಯವಶ್ಯವಾಗಿದೆ.

ಮಾಸ್ಕ್ ಹಾಕುವುದು, ಸಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೆಸರ ಉಪಯೋಗಿಸುವುದು ಹಾಗೂ ಕಾರಣವಿಲ್ಲದೆ ಮನೆಯಿಂದ ಹೊರಗೆ ಬರಬಾರದು ಎಂದರು.

Read These Next

ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

“ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಲಾಕ್ ಡೌನ್ ಸಡಿಲಿಸಬೇಕು. ಮಾಜಿ ಶಾಸಕ ಐವಾನ್ ಡಿಸೋಜಾ ಆಗ್ರಹ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಡೀ ದಿನ ಸಡಿಲಿಕೆ ಮಾಡಬೇಕು. ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಎಲ್ಲರಿಗೆ ಲಸಿಕೆ ...

ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಮನ್ನಾ ಮಾಡಬೇಕು- ಮುನೀರ್ ಕಾಟಿಪಳ್ಳ

ಮಂಗಳೂರು: ಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ , ...