ಭಾರತದಲ್ಲಿ ನಾಲ್ಕು ಕೋಟಿ ದಾಟಿದ ಕೋವಿಡ್-19 ಪರೀಕ್ಷೆಗಳು

Source: ANI | Published on 29th August 2020, 7:30 PM | National News | Don't Miss |

ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 4 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ ಮತ್ತು ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ 4,04,06,609 ಜನರನ್ನು ಪರೀಕ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಐಸಿಎಂಆರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 9,28,761   ಪರೀಕ್ಷೆಗಳನ್ನು ನಡೆಸಲಾಗಿದ್ದು,  ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ಇದಾಗಿದೆ. ಪ್ರತಿ ಹತ್ತುಲಕ್ಷ ಜನರಲ್ಲಿ ಪರೀಕ್ಷೆ ಪ್ರಮಾಣ(ಟಿಪಿಎಂ) 29,280 ಕ್ಕೆ ಏರಿದೆ. 
ಪರೀಕ್ಷೆ ಪ್ರಮಾಣವನ್ನು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿಸಿರುವುದರಿಂದ ದೃಢಪಟ್ಟ ಪ್ರಕರಣಗಳ ಪ್ರಮಾಣವು ಅಂತಿಮವಾಗಿ ಕುಸಿಯಲಿದೆ.
2020 ರ ಜನವರಿಯಲ್ಲಿ ಪುಣೆಯ ಪ್ರಯೋಗಾಲಯದಲ್ಲಿ ಕೇವಲ ಒಂದು ಪರೀಕ್ಷೆ ನಡೆಸಿದ್ದು, ಇಂದು 4 ಕೋಟಿ ಪರೀಕ್ಷೆಗಳ ಮೈಲಿಗಲ್ಲು ತಲುಪುವಲ್ಲಿ ಭಾರತ ಬಹಳ ದೂರ ಕ್ರಮಿಸಿದೆ. ವಿಸ್ತೃತ ಪ್ರಯೋಗಾಲಯಗಳ ಜಾಲ ಮತ್ತು ಹಲವಾರು ನೀತಿ ಕ್ರಮಗಳ ಮೂಲಕ ದೇಶಾದ್ಯಂತ ಪರೀಕ್ಷಾ ಪ್ರಮಾಣ ಹೆಚ್ಚಾಗುತ್ತಿದೆ. ದೇಶದಲ್ಲಿ 1,576 ಪ್ರಯೋಗಾಲಯಗಳಿದ್ದು, ಇವುಗಳಲ್ಲಿ ಸರ್ಕಾರಿ ವಲಯದ   1,002, ಮತ್ತು  ಖಾಸಗಿ 574 ಪ್ರಯೋಗಾಲಯಗಳು ಸೇರಿವೆ.
ಇವುಗಳಲ್ಲಿ 806 ರಿಯಲ್-ಟೈಮ್ ಆರ್ ಟಿ ಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (462 ಸರ್ಕಾರಿ ಮತ್ತು 344 ಖಾಸಗಿ), 650 ಟ್ರೂನಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (506 ಸರ್ಕಾರಿ ಮತ್ತು 144 ಖಾಸಗಿ) ಮತ್ತು 120   ಸಿಬಿಎನ್ಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (34 ಸರ್ಕಾರಿ ಮತ್ತು 86 ಖಾಸಗಿ) ಸೇರಿವೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...