ಕೋಲಾರ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ

Source: sonews | By Staff Correspondent | Published on 13th July 2019, 10:22 PM | State News |

2836 ಮಂದಿ ಪೈಕಿ 1303 ಪಾಸ್-ಶೇ.45.94 ರಷ್ಟು ಫಲಿತಾಂಶ 

ಕೋಲಾರ: ಜೂನ್‍ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 2836 ಮಂದಿ ಪೈಕಿ 1303 ಮಂದಿ ತೇರ್ಗಡೆಯಾಗುವ ಮೂಲಕ ಶೇ.45.94 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿರುವ ಅವರು, ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 1753 ಮಂದಿ ಬಾಲಕರು ಪರೀಕ್ಷೆ ಬರೆದಿದ್ದು, ಅವರಲ್ಲಿ 758 ಮಂದಿ ತೇರ್ಗಡೆಯಾಗಿ ಶೇ.43.24 ಫಲಿತಾಂಶ ಬಂದಿದೆ. ಹಾಗೆಯೇ ಪರೀಕ್ಷೆಗೆ ಕುಳಿತಿದ್ದ 1083 ಮಂದಿ ಬಾಲಕಿಯರ ಪೈಕಿ 545 ಮಂದಿ ತೇರ್ಗಡೆಯಾಗಿದ್ದು, ಶೇ.50.32 ಫಲಿತಾಂಶ ಬಂದಿದ್ದು,ಪೂರಕ ಪರೀಕ್ಷೆಯಲ್ಲೂ ಬಾಲಕಿಯರು ಸಾಧನೆ ಮಾಡಿದ್ದಾರೆ ಎಂದರು.

ತಾಲ್ಲೂಕು/ಕ್ಷೇತ್ರವಾರು ಫಲಿತಾಂಶದ ವಿವರ
ಬಂಗಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 539 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 240 ಮಂದಿ ತೇರ್ಗಡೆಯಾಗಿ ಶೇ.44.53 ಫಲಿತಾಂಶ ಬಂದಿದೆ. ಇಲ್ಲಿ 332 ಬಾಲಕರು ಪರೀಕ್ಷೆ ಬರೆದಿದ್ದು 135 ಮಂದಿ ಪಾಸಾಗಿ ಶೇ.40.68 ರಷ್ಟು ಫಲಿತಾಂಶ ಬಂದಿದ್ದರೆ, 207 ಬಾಲಕಿಯರು ಪರೀಕ್ಷೆ ಬರೆದು 108 ಮಂದಿ ತೇರ್ಗಡೆಯಾಗಿ ಶೇ.50.72 ಫಲಿತಾಂಶ ಲಭಿಸಿದೆ.

ಕೆಜಿಎಫ್ ತಾಲ್ಲೂಕಿನಲ್ಲಿ 407 ಮಂದಿ ಪರೀಕ್ಷೆಗೆ ನೊಂದಾಯಿಸಿದ್ದು 279 ಮಂದಿ ತೇರ್ಗಡೆಯಾಗಿ 68.55 ಫಲಿತಾಂಶ ಬಂದಿದೆ. 265 ಬಾಲಕರು ಪರೀಕ್ಷೆ ಬರೆದಿದ್ದು, 178 ಮಂದಿ ತೇರ್ಗಡೆಯಾಗಿ ಶೇ.67.17 ಫಲಿತಾಂಶ ಬಂದಿದೆ. ಅದೇ ರೀತಿ 142 ಬಾಲಕಿಯರು ಪರೀಕ್ಷೆ ಬರೆದಿದ್ದು 101 ಮಂದಿ ತೇರ್ಗಡೆಯಾಗಿ ಶೇ.71.13 ಫಲಿತಾಂಶ ಬಂದಿದೆ. 

ಜಿಲ್ಲಾ ಕೇಂದ್ರ ಕೋಲಾರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತ 843 ವಿದ್ಯಾರ್ಥಿಗಳ ಪೈಕಿ311 ಮಂದಿ ತೇರ್ಗಡೆಯಾಗಿದ್ದು, ಶೇ.36.89 ಫಲಿತಾಂಶ ಬಂದಿದೆ. ಉಳಿದಂತೆ ಬಾಲಕಿಯರರ ವಿಭಾಗದಲ್ಲಿ ಪರೀಕ್ಷೆಗೆ ಕುಳಿತಿದ್ದ 341 ಮಂದಿಯಲ್ಲಿ 151 ಮಂದಿ ತೇರ್ಗಡೆಯಾಗಿ ಶೇ.44.28 ಫಲಿತಾಂಶ ಬಂದಿದೆ. ಬಾಲಕರ ವಿಭಾಗದಲ್ಲಿ 502 ಮಂದಿ ಪರೀಕ್ಷೆ ಬರೆದಿದ್ದು, 160 ಮಂದಿ ಪಾಸಾಗಿ ಶೇ.31 ರಷ್ಟು ಫಲಿತಾಂಶ ಬಂದಿದೆ.
ಮಾಲೂರು ತಾಲ್ಲೂಕಿನಲ್ಲಿ 340 ಮಂದಿ ಪರೀಕ್ಷೆ ಬರೆದಿದ್ದು, 147 ಮಂದಿ ತೇರ್ಗಡೆಯಾಗಿ ಶೇ.43.24 ಫಲಿತಾಂಶ ಬಂದಿದೆ. ಬಾಲಕಿಯರ ವಿಭಾಗಲ್ಲಿ 121 ಪರೀಕ್ಷೆ ಬರೆದಿದ್ದು, 51 ಮಂದಿ ಪಾಸಾಗಿ ಶೇ.42.15 ಫಲಿತಾಂಶ ಬಂದಿದ್ದರೆ ಬಾಲಕರ ವಿಭಾಗದಲ್ಲಿ 219 ಮಂದಿ ಕುಳಿತಿದ್ದು, 96 ಮಂದಿ ತೇರ್ಗಡೆಯಾಗಿ ಶೇ.43.84 ಫಲಿತಾಂಶ ಬಂದಿದೆ. 

ಮುಳಬಾಗಿಲು ತಾಲ್ಲೂಕಿನಲ್ಲಿ 522 ಮಂದಿ ಪರೀಕ್ಷೆಗೆ ನೊಂದಾಯಿಸಿದ್ದು 237 ಮಂದಿ ತೇರ್ಗಡೆಯಾಗಿ 45.40 ಫಲಿತಾಂಶ ಬಂದಿದೆ. 328 ಬಾಲಕರು ಪರೀಕ್ಷೆ ಬರೆದಿದ್ದು, 143 ಮಂದಿ ತೇರ್ಗಡೆಯಾಗಿ ಶೇ.43.60 ಫಲಿತಾಂಶ ಬಂದಿದೆ. ಅದೇ ರೀತಿ 194 ಬಾಲಕಿಯರು ಪರೀಕ್ಷೆ ಬರೆದಿದ್ದು 94 ಮಂದಿ ತೇರ್ಗಡೆಯಾಗಿ ಶೇ.48.45 ಫಲಿತಾಂಶ ಬಂದಿದೆ. 

ಶ್ರೀನಿವಾಸಪುರ ತಾಲ್ಲೂಕಿನಲ್ಲಿ 160ಮಂದಿ ಪರೀಕ್ಷೆ ಬರೆದಿದ್ದು, 74 ಮಂದಿ ತೇರ್ಗಡೆಯಾಗಿ ಶೇ.46.25 ಫಲಿತಾಂಶ ಬಂದಿದೆ. ಬಾಲಕರ ವಿಭಾಗದಲ್ಲಿ 91 ಮಂದಿ ಪರೀಕ್ಷೆಗೆ ಕುಳಿತಿದ್ದು 36 ಮಂದಿ ತೇರ್ಗಡೆಯಾಗಿ ಶೇ.39.56 ಫಲಿತಾಂಶ ಬಂದಿದೆ. ಬಾಲಕಿಯರ ವಿಭಾಗದಲ್ಲಿ 69 ಮಂದಿ ಪರೀಕ್ಷೆಗೆ ಕುಳಿತಿದ್ದು 38 ಮಂದಿ ತೇರ್ಗಡೆಯಾಗಿ ಶೇ.55.07 ಫಲಿತಾಂಶ ಬಂದಿದೆ ಎಂದು ವಿವರ ನೀಡಿದರು.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...