ಕೋಲಾರ: ಪ್ರಗತಿಪರ ರೈತರ ತಾಂತ್ರಿಕ ಆವಿಷ್ಕಾರಗಳನ್ನು ತರಬೇತಿಗಳ ಮೂಲಕ ಇತರೆ ರೈತರಿಗೆ ತಲುಪಿಸುವ  ಕಾರ್ಯಕ್ರಮ

Source: shabbir ahmed | By Arshad Koppa | Published on 14th January 2017, 8:55 AM | State News | Technology |

ಕೋಲಾರ, ಜನವರಿ 13:ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಮಗ್ರ ಕೃಷಿ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ.  ಇದಕ್ಕೆ ಪೂರಕವಾಗಿ ರಾಜ್ಯದಲ್ಲಿನ ಪ್ರಗತಿಪರ ರೈತರು ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ, ತಾವೇ ಅನ್ವೇಷಿಸಿರುವ ನೂತನ ಆವಿಷ್ಕಾರಗಳು ಹಾಗೂ ಅನುಸರಿಸುತ್ತಿರುವ ಆಧುನಿಕ ತಾಂತ್ರಿಕತೆಗಳನ್ನು, ತಮ್ಮ ಕ್ಷೇತ್ರದಲ್ಲೇ ಅಳವಡಿಸಿಕೊಂಡು ಫಲಿತಾಂಶ ಕಂಡುಕೊಂಡು, ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಿಕೊಂಡು ಅವರ ಆರ್ಥಿಕಮಟ್ಟ ಸುಧಾರಣೆ ಮಾಡಿಕೊಂಡಿರುತ್ತಾರೆ.  ಈ ಅಂಶಗಳ ಕುರಿತು ಪ್ರಗತಿಪರ ರೈತರ ಅನುಭವಗಳ ಮೂಲಕ ನೋಡಿ ಕಲಿ ಮಾಡಿ ತಿಳಿ ಎಂಬುದರ ನಿಟ್ಟಿನಲ್ಲಿ ಇತರೆ ರೈತರಿಗೆ ತರಬೇತಿ ಮುಖಾಂತರ ಅಳವಡಿಸಿಕೊಳ್ಳಲು ಉತ್ತೇಜನ ನೀಡಲು ಅವಶ್ಯವಿದೆ.  ಆದ್ದರಿಂದ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾಗಿರುವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಪ್ರಶಸ್ತಿ ವಿಜೇತರು ಮತ್ತು ಪ್ರಗತಿಪರ ರೈತರು ಆವಿಷ್ಕರಿಸಿರುವ ನೂತನ ತಾಂತ್ರಿಕತೆಗಳನ್ನು ಸ್ಥಳೀಯ ಅವಶ್ಯಕತೆಗನುಗುಣವಾಗಿ ಪ್ರಗತಿಪರ ರೈತರಿಂದ ಇತರೆ ರೈತರಿಗೆ ತರಬೇತಿಗಳನ್ನು ಏರ್ಪಡಿಸುವ ಸರ್ಕಾರದ ದೂರದೃಷ್ಟಿ ಹಾಗೂ ವಿನೂತನ ಕಾರ್ಯಕ್ರಮವನ್ನು ಕೃಷಿ ಇಲಾಖೆಯು 2016-17 ನೇ ಸಾಲಿನಲ್ಲಿ ಆರಂಭಿಸಿದೆ. ಇಂತಹ ತರಬೇತಿಗಳ ಮುಖಾಂತರ ಪ್ರಶಸ್ತಿ ವಿಜೇತ ಹಾಗೂ ಪ್ರಗತಿಪರ ರೈತರಿಂದ ಇತರ ರೈತರಿಗೆ ಉತ್ತೇಜನ ನೀಡಿ ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬಹುದಾಗಿದೆ. 

ಈ ಹಿನ್ನಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರದಲ್ಲಿ ದಿನಾಂಕ 18-20 ಜನವರಿ, 23-25 ಜನವರಿ, 30 ಜನವರಿ 1 ಫೆಬ್ರುವರಿ, 7-9 ಫೆಬ್ರುವರಿ, 21-23 ಫೆಬ್ರುವರಿ, 1-3 ಮಾರ್ಚ್, 7-9 ಮಾರ್ಚ್, 14-16 ಮಾರ್ಚ್ ದಿನಾಂಕಗಳಂದು ಪ್ರಗತಿಪರ ರೈತರಿಂದ ಇತರೇ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯ ಮೊದಲನೇ ದಿನ ಪ್ರಶಸ್ತಿ ವಿಜೇತ ಮತ್ತು ಪ್ರಗತಿಪರ ರೈತರಿಂದ ಇತರೇ ರೈತರಿಗೆ ತರಬೇತಿ ನೀಡುವುದು. ಎರಡನೇ ಮತ್ತು ಮೂರನೇ ದಿನ ಪ್ರಗತಿಪರ ರೈತರ ತಾಕುಗಳಿಗೆ ಭೇಟಿ ನೀಡಿ ಅವರು ಮಾಡಿರುವ ಸಾಧನೆಗಳನ್ನು ಸ್ವತಃ ನೋಡಿ ಕಲಿತು ಅವುಗಳನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಕ್ಷೇತ್ರ ಭೇಟಿ ಏರ್ಪಡಿಸಲಾಗಿದೆ. ತರಬೇತಿಯಲ್ಲಿ ಆಸಕ್ತಿವುಳ್ಳ ರೈತರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳು/ ರೈತ ಸಂಪರ್ಕ ಕೇಂದ್ರಗಳಲ್ಲಿ/ ಗ್ರಾಮ ಪಂಚಾಯತಿಗಳಲ್ಲಿ/ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸುವುದು. ಅರ್ಜಿಗಳನ್ನು ಆಯಾ ತರಬೇತಿ ಪ್ರಾರಂಭದ ದಿನಾಂಕದ 3 ದಿನಗಳ ಮೊದಲೇ ಅರ್ಜಿ ಸಲ್ಲಿಸುವುದು. ಈ ತರಬೇತಿಗಳಿಗೆ ಬರುವ ರೈತರಿಗೆ ವಾಸ್ತವಿಕ ಪ್ರಯಾಣ ಭತ್ಯೆ ನೀಡಲಾಗುವುದು ಹಾಗೂ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರ, ಕೋಲಾರ ದೂರವಾಣ  ಸಂಖ್ಯೆ 08152-243099/ 9480696395 ಅಥವಾ ಜಂಟಿ ಕೃಷಿ ನಿರ್ದೇಶಕರು, ಕೋಲಾರ ದೂರವಾಣ  ಸಂಖ್ಯೆ 08152-222246/ 08152-224332/ 8277932005 ಇವರಿಗೆ ಕರೆ ಮಾಡಿ ತಮ್ಮ ಅರ್ಜಿಗಳನ್ನು ಸಲ್ಲಿಸುವ ಕುರಿತು ಸಂಪರ್ಕಿಸಬಹುದು. 

Read These Next

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ಅಳವಡಿಸಿ, ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಪ್ರಸಾರ ...

ಬೆಂಗಳೂರು: ವಿವಿಧ ವಸತಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ...

ಬೆಂಗಳೂರು: ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2017ನೇ ಸಾಲಿನಿಂದ 2023ನೇ ಸಾಲಿನವರೆಗೆ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ...

ರಾಯಚೂರು ಜಿಲ್ಲೆಯ ಮಾನ್ವಿ ಬಳಿ ಸಾರಿಗೆ ಬಸ್ ಮತ್ತು ಖಾಸಗಿ ಶಾಲಾ ಬಸ್ ನಡುವೆ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳ ಸಾವು

ಮೃತಪಟ್ಟಿರುವ ವಿದ್ಯಾರ್ಥಿಗಳನ್ನು ಸಮರ್ಥ ಅಮರೇಶ(7) ಹಾಗೂ ಶ್ರೀಕಾಂತ್ ಮಾರೇಶ(12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 15 ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...