ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

Source: shabbir | By Arshad Koppa | Published on 7th July 2017, 2:49 PM | State News | Tour |

ಕೋಲಾರ ಜು.05: ತಾಲ್ಲೂಕಿನ ಜಂಬಾಪುರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಲಕ್ಷ್ಮಿ ಸ್ತ್ರೀ-ಶಕ್ತಿ ಸಂಘ, ಸತ್ಯಮ್ಮ ಸ್ತ್ರಿ-ಶಕ್ತಿ ಸಂಘ, ಕನ್ನಡ ಜಾನಪದ ಕಲಾ ಸಂಘ ಇವರ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 


    ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಿ. ಮುನಿಕೃಷ್ಣ  ಹಳ್ಳಿಗಾಡಿನ ಕಲೆ, ಜನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
    ವೇದಿಕೆಯಲ್ಲಿ ಕಲಾವಿದರಾದ ಜನ್ನಘಟ್ಟ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ವತ್ಥಮ್ಮ, ಮಾಜಿ ಸದಸ್ಯ ಹಿಪ್ಪಿ ನಾರಾಯಣಸ್ವಾಮಿ, ಟೈಲರ್ ನಾರಾಯಣಸ್ವಾಮಿ, ಇರಸಂದ್ರ ಕೃಷ್ಣಪ್ಪ, ಚೌಡಪ್ಪ, ರೆಡ್ಡೆಪ್ಪ, ಶಾಮಣ್ಣ, ಮೀಸೆ ಮುನಿಯಪ್ಪ ಮುಂತಾದವರು ಹಾಜರಿದ್ದು ತತ್ವಪದ ಗಾಯನವನ್ನು ಹೊಸಮಟ್ನಹಳ್ಳಿ ಎಂ. ವೆಂಕಟಸ್ವಾಮಿ ಮತ್ತು ತಂಡ, ಜನಪದ ಗೀತೆಯನ್ನು ಇರಗಸಂದ್ರದ ತಿರುಮಲ ಮೂರ್ತಿ ಮತ್ತು ತಂಡದವರು ಬಹಳ ಸುಮದುರವಾಗಿ ಹಾಡಿ ರಂಜಿಸಿದರು. ಊರಿನ ಎಲ್ಲಾ ಗ್ರಾಮಸ್ಥರು ಕಲಾವಿದರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜನ್ನಘಟ್ಟ ಕೃಷ್ಣಮೂರ್ತಿ)
 ಮೊ.:9448962360


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
 

Read These Next

ತಂಬಾಕು ದುಷ್ಪರಿಣಾಮ ಮತ್ತು ಕೋಟ್ಪಾ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮ. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ : ಎಸ್‍ಪಿ

ಶಿವಮೊಗ್ಗ : ಪ್ರಸ್ತುತ ದಿನಮಾನಗಳಲ್ಲಿ ಹದಿ ವಯಸ್ಸಿನ ಮಕ್ಕಳೇ ತಂಬಾಕು ಉತ್ಪನ್ನಗಳ ಚಟಕ್ಕೆ ಒಳಗಾಗುತ್ತಿದ್ದು, ಮಕ್ಕಳನ್ನು ...