ಕೋಲಾರ: ಮತದಾರರ ಪಟ್ಟಿಗೆ ಸೇರ್ಪಡೆ: ವಿಶೇಷ ಆಂದೋಲನ 38 ಕ್ಯಾಂಪಸ್ ರಾಯಭಾರಿಗಳ ನೇಮಕ

Source: shabbir | By Arshad Koppa | Published on 27th July 2017, 7:37 AM | State News | Guest Editorial |

ಕೋಲಾರ, ಜುಲೈ 26:ಕೇಂದ್ರ ಚುನಾವಣಾ ಆಯೋಗವು ಜುಲೈ 01 ರಿಂದ 31 ರವರೆಗೆ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿಗೆ ಸೇರ್ಪಡೆ ಆಂದೋಲನದ ಪ್ರಯುಕ್ತ ಜಿಲ್ಲಾಡಳಿತವು ಯುವ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಪ್ರೇರೇಪಿಸಲು ಜಿಲ್ಲಾದ್ಯಂತ ವಿವಿಧ ಪಿ.ಯು ಹಾಗೂ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 38 ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ಅಂಬಾಸೆಡರ್‍ಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. 
ಈ ಕ್ಯಾಂಪಸ್ ಅಂಬಾಸೆಡರ್‍ಗಳ ಜವಾಬ್ದಾರಿಗಳನ್ನು ಅವರಿಗೆ ನೀಡಲಾಗಿರುವ ನೇಮಕಾತಿ ಪತ್ರದಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡಂತೆ ನಡೆದ ಸಭೆಯಲ್ಲಿ ಈ ನೇಮಕಾತಿಯನ್ನು ಮಾಡಲಾಯಿತು. 
ನೇಮಕಗೊಂಡ ಅಂಬಾಸೆಡರ್‍ಗಳು: 
ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಎನ್.ಚೈತ್ರ, ಎ.ವಿ.ಶಶಿಕುಮಾರ್, ಮುಳಬಾಗಿಲು ಪ್ರಥಮ ದರ್ಜೆ ಕಾಲೇಜಿನ ಎಸ್.ಶ್ರೀನಿವಾಸ್, ನವ್ಯಶ್ರೀ, ಮುಳಬಾಗಿಲಿನ ದಾನಮ್ಮ ಚೆನ್ನಬಸವಯ್ಯ ಕಾಲೇಜಿನ ಪೋಜಿಯಾ ಸುಲ್ತಾನ್, ಮುಳಬಾಗಿಲಿನ ಶಾರದಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಷಾಹಿತಾ ಅಂಜುಮ್, ಎನ್.ನಂದಿನಿ, ಕೆ.ಜಿ.ಎಫ್‍ನ ಪ್ರಥಮ ದರ್ಜೆ ಕಾಲೇಜಿನ ಪಿ.ಸ್ವರೂಪ್, ದೀಪಕ್, ಎಸ್.ದಿನೇಶ್ ಕುಮಾರ್, ಕೆ.ಜಿ.ಎಫ್‍ನ ಭಗವಾನ್ ಮಹಾವೀರ್ ಜೈನ್ ಕಾಲೇಜ್ ಅವಿನಾಶ್ ಕುಮಾರ್, ರೋಹಿತ್, ದೊರೊಥಿ, ವಿನಾಯಕ ಇಂಜಿನಿಯರಿಂಗ್ ಕಾಲೇಜಿನ ಮಾರಿಯಾ ಲೂಯಿಸ್, ಪ್ರಥಮ ದರ್ಜೆ ಕಾಲೇಜಿನ ಎಸ್. ಮನೋಹರ್, ಕವಿತಾ, ಮಾರ್ಗರೇಟ್, ಬಂಗಾರಪೇಟೆ ಪ್ರಥಮ ದರ್ಜೆ ಕಾಲೇಜಿನ ಜಿ.ರೋಹಿತ್, ವಿಷ್ಣು ಬಿ.ಎಡ್ ಕಾಲೇಜಿನ ಎಂ.ಎ.ರಂಜಿತ್, ಎಸ್.ಡಿ.ಸಿ. ಕಾಲೇಜಿನ ಪಿ.ಯಾದವ್ ಕೃಷ್ಣ, ಕೋಲಾರ ಬಸವಶ್ರೀ ಕಾಲೇಜಿನ ಎಂ.ಅರಂವಿದ, ಅರಹಳ್ಳಿ ಕಾನೂನು ಕಾಲೇಜಿನ ನವೀನ್ ಕುಮಾರ್, ಗೌತಮಿ, ಕಾವ್ಯ, ವೇಮಗಲ್‍ನ ಪ್ರಥಮ ದರ್ಜೆ ಕಾಲೇಜಿನ ಗಂಗರಾಜು, ಅನುಷಾ, ಟಮಕ ತೋಟಗಾರಿಕಾ ಕಾಲೇಜಿನ ಎಂ.ಚಂದನ್, ಕೋಲಾರ ಪ್ರಥಮ ದರ್ಜೆ ಕಾಲೇಜಿನ ಬಾನುಶ್ರೀ, ಎ.ಎನ್.ಯಶ್ವಂತ್ ಪ್ಯೂಲ್, ಸರ್ಕಾರಿ ಮಹಿಳಾ ಕಾಲೇಜಿನ ಕೆ.ಎಂ.ತೇಜಸ್ವಿನಿ, ಮಾಲೂರು ತಾಲ್ಲೂಕಿನ ಕ್ರಿಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನ ಶೈಕ್ ಪಾಜ್ ಅಲಿ, ದಿವ್ಯಶ್ರೀ, ಪ್ರಥಮ ದರ್ಜೆ ಕಾಲೇಜಿನ ಹೆಚ್.ಎಂ.ಸಂತೋಷ್, ಜಿ.ಹರೀಶ್, ನಿಸರ್ಗ ಕಾಲೇಜಿನ ಆರ್. ಕೀರ್ತನಾ, ಆರ್. ಆರಾಧನಾ, ಬಿ.ಜಿ.ಎಸ್ ಕಾಲೇಜಿನ ಕೆ.ಅಭಿಷೇಕ್ ಅವರನ್ನು ಕ್ಯಾಂಪಸ್ ಅಂಬಾಸೆಡರ್‍ಗಳನ್ನಾಗಿ ನೇಮಿಸಲಾಗಿದೆ.  

ಸುಗಟೂರಿನಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ವಿಶೇಷ ಆಂದೋಲನವನ್ನು ದಿನಾಂಕ: 01-07-2017 ರಿಂದ 31-07-2017 ರವರೆಗೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದು ಈ ಬಗ್ಗೆ ಪ್ರಚಾರ ಮಾಡಲಾಯಿತು. 18-21 ವರ್ಷದೊಳಗಿನ ಎಲ್ಲಾ ಯುವಕ-ಯುವತಿಯರು ತಪ್ಪದೇ ಮತದಾರರ ತಮ್ಮ ಹೆಸರುಗಳನ್ನು ತಪ್ಪದೇ ನೋಂದಾಯಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಲಾಯಿತು. 


ಕ್ಯಾಂಪಸ್ ಅಂಬಾಸೆಡರ್‍ಗಳು ಈ ಕ್ಯಾಂಪನಲ್ಲಿ ಹೆಚ್ಚು ಮಂದಿ ವಿದ್ಯಾರ್ಥಿಗಳು ನೋಂದಣ  ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಈ ಕ್ಯಾಂಪ್‍ಗಳಲ್ಲಿ ನೂರಾರು ಯುವ ಅರ್ಹ ಮತದಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಮೂನೆ-6ರ  ಅರ್ಜಿಗಳನ್ನು ವಿತರಿಸಲಾಯಿತು. 

 

ಮಾಲೂರು ಕಾಲೇಜು ದಿವ್ಯಶ್ರೀ ಅಂಬಾಸೆಡರ್. ನಮೂನೆ 6 ರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

 
ವಿಷ್ಣು ಬಿ.ಎಡ್ ಕಾಲೇಜು ಬಂಗಾರಪೇಟೆ ರಂಜಿತಾ ಅಂಬಾಸೆಡರ್.

 


ವೇಮಗಲ್‍ನ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಅನುಷಾ ಅಂಬಾಸೆಡರ್. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...