ಕೋಲಾರ:ಖಾದ್ರಿಪುರ ಗ್ರಾಮದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯ ಸಾಮಾಗ್ರಿ ವಿತರಣೆ

Source: shabbir | By Arshad Koppa | Published on 16th August 2017, 7:49 AM | State News | Guest Editorial |

ಕೋಲಾರ,ಆ.15: ಡಾ.ಬಿಆರ್ ಅಂಬೇಡ್ಕರ್ ವಿದ್ಯಾಭಿವೃದ್ದಿ ಸಂಸ್ಥೆ (ರಿ) ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ 71ನೇ ಸ್ವಾಸಂತ್ರ್ಯ ದಿನಾಚರಣೆಯನ್ನು ಖಾದ್ರಿಪುರ ಗ್ರಾಮದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳು ಹಾಗೂ ಕುರ್ಚಿ  ಉಚಿತವಾಗಿ ನೀಡುವ ಮೂಲಕ ಆಚರಿಸಲಾಯಿತ್ತು.
    

ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಮಾ ರವರು ದ್ವಜಾರೋಹಣ ನೆರವೇರಿಸಿದರು.
    ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಕೆ.ಸಿ. ಬಾಲಾಜಿ  ಮಾತನಾಡಿ ಸ್ವಚ್ಚಭಾರತದ ಬಗ್ಗೆ, ಬಡತನ ನಿರ್ಮೂಲನ ಬಗ್ಗೆ  ಭ್ರಷ್ಟಚಾರಮುಕ್ತ ವಿಷಯದ ಬಗ್ಗೆ  ತಿಳಿಸಿಕೊಡುತ್ತಾ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು. 
    ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಎಂ.ಗೋವಿಂದರವರು ಮಾತನಾಡಿ ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾನಿಯರನ್ನು ಸ್ಮರಿಸುತ್ತಾ ಯುವಕರು ಮತ್ತು ವಿದ್ಯಾರ್ಥಿ ಸಮುದಾಯ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆ ವಿದ್ಯಾಬ್ಯಾಸ ಪಡೆದು ಉನ್ನತ ಸ್ಥಾನಗಳನು ಅಲಂಕರಿಸುವಂತೆ ಕರೆ ನೀಡಿದರು. 
    ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್ ಸಿರಾಜ್ ಮಾತನಾಡಿ ಅಂದು ನಮಗೆ ಸ್ವಾತಂತ್ರ್ಯ ತಂದು ಕೊಡಲು ಎಲ್ಲ ಮಹನೀಯರು ಜಾತಿ, ಧರ್ಮ, ಬೇಧ ಭಾವನೆಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಸ್ವತಂತ್ರ್ಯವನ್ನು ತಂದುಕೊಟ್ಟಿದ್ದರು. ಇಂದು ನಾವು ಸಹ ಅವರ ಹಾದಿಯಲ್ಲಿ ಸಾಗುತ್ತಾ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕೆಂದು ಹೆಳಿದರು.
     ಡಾ. ಬಿಆರ್ ಅಂಬೇಡ್ಕರ್ ವಿದ್ಯಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೆ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸ್ವಾತಂತ್ರ್ಯಕ್ಕೆ ಆನೇಕ ಮಹಾನೀಯರು ಹೋರಟ ಬಲಿದಾನಗಳಿಂದ ಭಾರತಕ್ಕೆ ಸ್ವತಂತ್ರ ಬಂದಿತು. ಬ್ರೀಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಅವರು ಮಾಡಿದ ಕೆಚ್ಚೆದೆಯ ಹೋರಾಟ ಬಲಿಧಾನಗಳನ್ನು ಇಂದಿನ ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಿಕೂಳ್ಳುವಂತೆ ತಿಳಿಸಿದರು. 
    ಅಂಬೇಡ್ಕರ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಜೆಯ್ ಮಾತನಾಡಿ ಪ್ರತಿಯೊಬ್ಬರು ಶೋಚಲಯ ನಿರ್ಮಿಸಿಕೂಂಡು ಸ್ವಚ್ಚ ಕಾಪಡಿಕೂಂಡು ಬರಬೇಕೆಂದು ಮಕ್ಕಳ್ಳಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಕ್ರಮದ ಕಾರ್ಯ ನಿರ್ವಹಣೆ ಮು.ಶಿಕ್ಷಕ ಉಮಾದೇವಿ.ಎನ್ ವಹಿಸಿದ್ದರು. ಸ್ವಾಗತವನ್ನು ಶಿಕ್ಷಕಿಯಾದ ಶಿವಮ್ಮ ರವರಿಂದ ನೆರವೇರಿತ್ತು. ಮತ್ತೋಬ್ಬ ಶಿಕ್ಷಕಿಯಾದ ಉಮಾ.ವಿ ರವರು ನಿರೂಪಣೆ ವಹಿಸಿದ್ದರು. ವಂದನರ್ಪಣೆ ಶಿಕ್ಷಕಿ ಆರತಿ ರವರಿಂದ ನೆರವೆರಿತ್ತು. 
    ಈ ಕಾರ್ಯಕದಲ್ಲಿ ಶಿಕ್ಷಕಿ ಅನಿತ ಎಸ್.ಬೇಗಿನಾಳ್ ಅಂಗನವಾಡಿ ಕಾರ್ಯಕರ್ತೆ ಎಸ್ ಮೇರಿ, ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಾ ಮತ್ತು ಗ್ರಾಮ ಯುಕರಾದ ಮಹೇಶ್, ಹರೀಶ್, ಪ್ರಸನ್ನ, ವೆಂಕಟಪ್ಪ, ಸತೀಶ್, ಸಂದೀಪ್, ಬಾಲಕೃಷ್ಣ ಹಾಗೂ ಗ್ರಾಮಸ್ಥರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...