ಕೋಲಾರ: ಕೆ.ಜಿ.ಎಫ್‍ನಲ್ಲಿ ಸೈನೈಡ್ ದೂಳಿನಿಂದ ಮುಕ್ತಿಗಾಗಿ 25 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು

Source: shabbir | By Arshad Koppa | Published on 8th August 2017, 11:27 PM | State News | Guest Editorial |

ಕೋಲಾರ, ಆಗಸ್ಟ್ 08:ಕೆ.ಜಿ.ಎಫ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸುಮಾರು 120 ವರ್ಷಗಳ ಹಳೆಯ ಸೈನೈಡ್ ದಿಬ್ಬಗಳ ದೂಳಿನಿಂದ ಕೊನೆಗೂ ಮುಕ್ತಿ ಸಿಗುವ ನೂತನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಕಾರ್ಯರೂಪಕ್ಕೆ ತಂದಿದೆ. 
ಪುಟ್ಟ ಪುಟ್ಟ ಸೈನೈಡ್ ಗುಡ್ಡಗಳ ಮೇಲಿಂದ ಜೂನ್ ಹಾಗೂ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಬಿರುಸಾದ ಗಾಳಿಯಿಂದ ಹರಡುತ್ತಿದ್ದ ಸೈನೈಡ್ ದೂಳು ಕೆ.ಜಿ.ಎಫ್ ಹಾಗೂ ಕೋಲಾರ ಪ್ರದೇಶ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಆಂದ್ರ ಹಾಗೂ ತಮಿಳು ನಾಡು ಕೆಲವು ಪ್ರದೇಶಗಳಿಗೂ ಸಹ ಹರಡಿ ಹಲವಾರು ಉಸಿರಾಟ ಸಂಬಂಧಿತ ರೋಗಗಳಿಗೆ ಕಾಣವಾಗಿತ್ತು. 
ಇಡೀ ಊರಿಗೆ ಊರೇ ದೂಳಿನಿಂದ ಆವೃತವಾಗುತ್ತಿತ್ತು. ಇದನ್ನು ತಡೆಯಲು ಇತ್ತೀಚೆಗೆ ಜಿಲ್ಲಾಡಳಿತ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕೆ.ಜಿ.ಎಫ್‍ನ ನ್ಯಾಯಾಂಗ ಅಧಿಕಾರಿಗಳು ಸೇರಿ ಈ ಪ್ರದೇಶವನ್ನು ದೂಳು ಮುಕ್ತಗೊಳಿಸಲು ವಿವಿಧ ಸಸಿಗಳ ನೆಡು ತೋಪುಗಳನ್ನು ಸೃಷ್ಠಿಸಲು ನಿರ್ಧರಿಸಿದರು. ಒಟ್ಟು 40 ಹೆಕ್ಟೇರ್ ಪ್ರದೇಶದ ಈ ದಿಬ್ಬಗಳ  25 ಹೆಕ್ಟೇರ್ ಪ್ರದೇಶದಲ್ಲಿ 10 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. 
ಕತ್ತಾಳೆ, ಹೊಂಗೆ, ಹಮಟ, ಕುಸ್ ಹುಲ್ಲು ಮುಂತಾದ ಸಸಿಗಳನ್ನು ಈ ನೆಡು ತೋಪುಗಳಲ್ಲಿ ನೆಡಲಾಗಿದ್ದು ಸುಮಾರು ಅರ್ಧದಷ್ಟು ಪ್ರದೇಶವನ್ನು ಇದು ಆವರಿಸಿಕೊಳ್ಳಲಿದೆ.  ಈ ನೆಡು ತೋಪುಗಳ ವೀಕ್ಷಣೆ ಹಾಗೂ ಕಾರ್ಯ ಪರಿಶೀಲನೆಗೆ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಹಾಗೂ ಕೆ.ಜಿ.ಎಫ್‍ನ ನ್ಯಾಯಧೀಶರು ಭೇಟಿ ನೀಡಿದರು. 
ಸುಮಾರು 20 ಟನ್ ಕಾಂಪೋಸ್ಟ್ ಗೊಬ್ಬರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ತರಿಸಿಕೊಳ್ಳಲಾಗಿದ್ದು ಈ ನೆಡುತೋಪಿಗೆ ಅದನ್ನು ಬಳಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ರಾವ್ ಅವರು ತಿಳಿಸಿದರು. 
ಜಿಲ್ಲಾ ನ್ಯಾಯಾಧೀಶರಾದ ಎಂ.ಜಗದೀಶ್ವರ, ನ್ಯಾಯಾಧೀಶರುಗಳಾದ ದಯಾನಂದ್, ರವಿಕುಮಾರ್ ಹಾಗೂ ಲೋಕೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...