ಕೋಲಾರ:ಕಾನೂನು ಬಾಹಿರವಾಗಿ ನಗರಸಭಾ ಆಸ್ತಿ ಬಾಡಿಗೆಗೆ ನೀಡಲು ದಾಖಲೆಗಳಲ್ಲಿ ಬದಲಾವಣೆ - ದೂರು ದಾಖಲು

Source: shabbir ahmed | By Arshad Koppa | Published on 24th December 2016, 8:49 AM | State News | Public Voice |

ಕೋಲಾರ ಡಿ. 22 : ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಮಾನ್ಯ ನಿರ್ದೇಶಕರಾದ ಡಾ|| ವಿಶಾಲ್ ರವರಿಗೆ ಕೋಲಾರ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡರವರು ಕೋಲಾರ ನಗರಸಭೆಯ ವಾರ್ಡ್ ನಂ. 12ರಲ್ಲಿರುವ ಮಹಿಳಾ ಸಮಾಜ ಶಾಲಾ  ಆವರಣದಲ್ಲಿರುವ ಕೋಲಾರ ನಗರಸಭೆಯ ಆಸ್ತಿಯನ್ನು ಕಾನೂನು ಬಾಹೀರವಾಗಿ 12 ವರ್ಷಗಳ ಅವದಿಗೆ ಬಾಡಿಗೆಗೆ ನೀಡಿರುವ ಬಗ್ಗೆ ಹಾಗೂ ನಗರಸಭೆಯ ದಾಖಲೆಗಳಲ್ಲಿ ಟ್ಯಂಪರ್ ಮಾಡಿರುವ ಬಗ್ಗೆ ದೂರನ್ನು ಸಲ್ಲಿಸಲಾಯಿತು.

ದೂರಿನಲ್ಲಿ ತಿಳಿಸಲಾದ ವಿಷಯಗಳೆಂದರೆ:-
    

ಕೋಲಾರ ನಗರಸಭೆಯ ವಾರ್ಡ್ ನಂ. 12ರಲ್ಲಿನ ಮಹಿಳಾ ಸಮಾಜ ಶಾಲೆಯ ಪ್ರದೇಶದಲ್ಲಿ ನಗರಸಭೆಗೆ  ಸೇರಿದ ಆಸ್ತಿ 172+136 x 118+97+40 ಅಳೆತೆಯ ಎಆರ್.ನಂ.371 ಕೋಲಾರ ನಗರಸಬೆಯ ಆಸ್ತಿಯಾಗಿರುವುದು ಸರಿಯಷ್ಟೆ. ಈ ಆಸ್ತಿಯು ಸುಮಾರು ___ ವರ್ಷಗಳಿಂದ ಮಹಿಳಾ ಸಮಾಜ ಶಾಲೆಯ ಆಡಳಿತ ಮಂಡಳಿಯವರ ವಶದಲ್ಲಿರುವುದು ಕಂಡು ಬಂದಿರುತ್ತೆ. ಈ ವಿಚಾರವಾಗಿ ದಿನಾಂಕ 30-03-2015 ರ ಸಾಮಾನ್ಯ ಸಭೆಯ ವಿಷಯ ಸಂಖ್ಯೆ 9ರಂತೆ ಅತಿ ಬೆಲೆಬಾಳುವಂತಹ ನಗರಸಭೆ ಆಸ್ತಿಯನ್ನು ಮಹಿಳಾ ಸಮಾಜ ಶಾಲೆಯ ಆಡಳಿತ ಮಂಡಳಿಯವರಿಗೆ ಪಿ.ಡಬ್ಲೂ.ಡಿ. ಧರಗಳಂತೆ ಬಾಡಿಗೆಗೆ ನೀಡಲು ಕಾನೂನು ಬಾಹಿರವಾಗಿ ನಿರ್ಣಯ ಕೈಗೊಂಡು ಬಾಡಿಗೆ ಕರಾರು ಮಾಡಿಕೊಂಡಿರುವುದು ತಿಳಿದು ಬಂದಿರುತ್ತದೆ.
    
ಆದರೆ ನಗರಸಭೆಯಲ್ಲಿ ಲಭ್ಯವಿರುವ ಮೂಲ ದಾಖಲೆಗಳನ್ನು ಆರ್.ಟಿ.ಐ. ಮುಖಾಂತರ ಪಡೆದು ಪರಿಶೀಲಿಸಲಾಗಿ 1959-60ನೇ ಸಾಲಿನ ದಾಖಲೆಗಳಲ್ಲಿ ಅಂದಿನ ಮುಖ್ಯಾಧಿಕಾರಿಗಳು ಸರ್ಕಾರದ ಮತ್ತು ಅಂದಿನ ಮಾನ್ಯ ಜಿಲ್ಲಾಧಿಕಾರಿಗಳ ಆದೇಶಗಳಂತೆ ಸುಮಾರು 50’ x 80’ ಅಳತೆಯ ಜಾಗವನ್ನು ನೀಡಿರುವುದಾಗಿ ಉಲ್ಲೇಖಿಸಿರುತ್ತಾರೆ. ತದ ನಂತರ 1970-71ನೇ ಸಾಲಿನ ದಾಖಲಾತಿಗಳಲ್ಲಿ ಈ ಉಲ್ಲೇಖವನ್ನು ದುರುದ್ದೇಶದಿಂದ ಬ್ಲೇಡ್‍ನಿಂದ ಅಳಸಿಹಾಕಿರುವುದು ಕಂಡು ಬಂದಿರುತ್ತೆ. ಒಟ್ಟಾರೆ ಸದರಿ ಮಹಿಳಾ ಸಮಾಜ ನೀಡಲಾಗಿರುವ ಜಾಗಕ್ಕೆ ಸಂಬಂಧಿಸಿದಂತೆ ದುರುದ್ದೇಶಪೂರಕವಾಗಿ ನಗರಸಭೆಯ ಎಲ್ಲಾ ದಾಖಲಾತಿಗಳನ್ನು ಟ್ಯಾಂಪರ್ ಮಾಡಿ ತಮ್ಮ ಸ್ವಂತಕ್ಕಾಗಿ ಅಧಿಕಾರವನ್ನು ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ರೀತಿ ದಾಖಲಾತಿಗಳನ್ನು ಟ್ಯಾಂಪರ್ ಮಾಡಿರುವುದು ಕಾನೂನು ಬಾಹಿರವಾಗಿರುವುದರಿಂದ ಈ ಸಂಬಂಧಪಟ್ಟವರ ಬಗ್ಗೆ ಸೂಕ್ತ ತನಿಕೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಕ್ರಮಕೈಗೊಳ್ಳಲು ಕೋರುತ್ತೇನೆ. 
    ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 72ರಡಿ ಮತ್ತು ಸರ್ಕಾರದ ನಡುವಳಿ / ಆದೇಶ ಸಂ. ನಅಇ129 ಟಿ.ಎಂ.ಡಿ 2002, ಬೆಂಗಳೂರು ದಿನಾಂಕ 02-06-2003 ರಂತೆ ನಗರದ ಸ್ಥಳೀಯ ಸಂಸ್ಥೆಗಳ ಸ್ವಾಮ್ಯದಲ್ಲಿರುವ ಆಸ್ತಿಗಳನ್ನು ಯಾವುದೇ ಸಂಘ ಸಂಸ್ಥೆಗಳಿಗೆ ಗುತ್ತಿಗೆ / ಬಾಡಿಗೆಗೆ ನೀಡುವ ಮೊದಲು ಸರ್ಕಾರದ ಪೂರ್ವಾನುಮೋದನೆ ಪಡೆಯಬೇಕಾಗಿರುತ್ತೆ. ಈ ವಿಚಾರವಾಗಿ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುತ್ತೆ. ಅಲ್ಲದೇ ಕರ್ನಾಟಕ ಸರ್ಕಾರದ ಸಚಿವಾಲಾಯದ ಸುತ್ತೋಲೆ ಸಂಖ್ಯೆ : ಅನಇ-51 ಟಿ.ಎಂ.ಓ 2001 ದಿನಾಂಕ 02-04-2001 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಯಾವುದೇ ಖಾಸಗಿ ಸಂಸ್ಥೆಗೆ ಅಥವಾ ಇನ್ನಿತರೇ ವ್ಯಕ್ತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ / ನಿವೇಶನಗಳನ್ನು ಬಾಡಿಗೆ / ಮಂಜೂರು ಮಾಡಲು ತೀರ್ಮಾನ ಕೈಗೊಳ್ಳಬಾರದೆಂದು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದ್ದರೂ ಸಹ ಮಹಿಳಾ ಸಮಾಜ ಶಾಲೆಗೆ ನಗರಸಭೆಯ ಆಸ್ತಿಯನ್ನು ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿರುತ್ತಾರೆ.
    ಈ ಹಿನ್ನಲೆಯಲ್ಲಿ ಕೋಲಾರ ನಗರಸಭೆಯ ವಾರ್ಡ್ ನಂ.13ರ ಸದಸ್ಯರಾದ ಶ್ರೀ. ಸಿ.ಎ.ರಾಧಾಕೃಷ್ಣ ಬಿನ್ ಲೇಟ್ ಆರ್. ವೆಂಕಟೇಶಪ್ಪ, ಪೇಟೆಚಾಮನಹಳ್ಳಿ ರವರು ತಮ್ಮ ಪತ್ನಿಯವರಾದ ಶ್ರೀಮತಿ ಕಮಲ ಕೋಂ ಸಿ.ಎ. ರಾಧಾಕೃಷ್ಣ ರವರನ್ನು ಮಹಿಳಾ ಸಮಾಜದ ಆಡಳಿತ ಮಂಡಳಿಯ ಕಾರ್ಯದರ್ಶಿಗಳನ್ನಾಗಿ ಉಲ್ಲೇಖ (3)ರ ನೋಂದಣ  ಪತ್ರದ ಪ್ರಕಾರ ಮಾಡಿಕೊಂಡು ಈ ಮೇಲ್ಕಂಡ ನಗರಸಭೆಯ ಆಸ್ತಿಯನ್ನು ಲಪಟಾಯಿಸಲು ಯೋಜನೆ ರೂಪಿಸಿಕೊಂಡಿರುವುದು ಕಂಡುಬಂದಿರುತ್ತೆ. ಆದರೆ ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕಾರ ಯಾವುದೇ ಸದಸ್ಯರು ಅಥವಾ ಅವರ ಕುಟುಂಬದವರು ಯಾವುದೇ ಲಾಭದಾಯಕ ಹುದ್ದೆಗಳಲ್ಲಿ ಅವಲಂಬಿತರಾಗಿರಬಾರದೆಂದು ಸೂಚಿಸಿರುವಾಗ ರಾದಾಕೃಷ್ಣರವರು ಮಹಿಳಾ ಸಮಾಜದ ಆಡಳಿತ ಮಂಡಳಿಯನ್ನು ಪುನರ್ ರಚಿಸಿ ತಮ್ಮ ಪತ್ನಿಯಾದ ಕಮಲರವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಂಡು ಕಾನೂನು ಬಾಹಿರವಾಗಿ ನಡೆದುಕೊಂಡಿರುವುದರಿಂದ ಇವರ ಸದಸ್ಯತ್ವವನ್ನು ರದ್ದುಪಡಿಸಬಹುದಾಗಿರುತ್ತದೆ.
    ಆದ್ದರಿಂದ ಈ ಎಲ್ಲಾ ಅಂಶಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೋಲಾರ ನಗರಸಭೆಗೆ ನ್ಯಾಯ ದೊರಕಸಿಕೊಡಬೇಕಾಗಿ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡರವರು ಕೋರಿದ್ದಾರೆ.
    


 

Read These Next