ಕೋಲಾರ: ಹರ್ಡೀಕರ್ ತತ್ವಾದರ್ಶದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ -ಎಂ.ಹೆಚ್. ಆಶೀಖಾನ್ 

Source: shabbir | By Arshad Koppa | Published on 27th August 2017, 9:10 AM | State News | Guest Editorial |

ಕೋಲಾರ ಆ.26: ಭಾರತ ಸೇವಾದಳ ಸೇರಿದಂತೆ ಹಲವು ಸಮಾಜ ಮುಖಿ ಚಿಂತನೆಯ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಭಾರತ ಸೇವಾದಳ ಸಂಸ್ಥಾಪಕರಾದ ನಾ.ಸು. ಹರ್ಡೀಕರ್ ಅವರ ತತ್ವಾದರ್ಶಗಳನ್ನು ನಾವು ರೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಎಂ.ಹೆಚ್. ಆಶೀಖಾನ್ ಹೇಳಿದರು.
    ಕೇಂದ್ರ ಕಾರಾಗೃಹದಲ್ಲಿಂದು ಜಿಲ್ಲಾ ಹಾಗೂ ತಾಲ್ಲೂಕು ಭಾರತ ಸೇವಾದಳ ಏರ್ಪಡಿಸಿದ್ದ ನಾ.ಸು.ಹರ್ಡಿಕರ್‍ರವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
    ಇಂದಿನ ಸ್ವಾರ್ಥ ಜನರಿಗೆ ಹರ್ಡೀಕರ್ ಅವರ ಸಮಾಜಮುಖಿ ಚಿಂತನೆಗಳನ್ನು ತಿಳಿಸಬೇಕು. ಸುಮಾರು 21 ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಎಲ್ಲಾ ವರ್ಗದ ಜನರನ್ನು ಸಂಘಟಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿ ಸ್ವಾತಂತ್ರ್ಯ ಪಡೆಯಲು ನೆರವಾದ ಆದರ್ಶ ಪುರುಷ ಎಂದರು.
    ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ವೆಂಕಟನಾರಾಯಣ್ ಮಾತನಾಡಿ ಸಮಯ ಮತ್ತೆ ಜೀವನದಲ್ಲಿ ಬರುವುದಿಲ್ಲ ಉತ್ತಮ ಕೆಲಸಗಳಿಂದ ಜನಸೇವೆ, ದೇಶಸೇವೆಗೆ ಜನರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
    ರಾಷ್ಟ್ರೀಯ ಭ್ರಾತೃತ್ವ, ರಾಷ್ಟ್ರೀಯತೆ, ನಾವು ಭಾರತೀಯರು ಎಂಬ ಭಾವನೆಯನ್ನು ಎಲ್ಲರೂ ಹೊಂದಬೇಕು ಎಂದು ಜಿಲ್ಲಾ ಭಾರರ ಸೇವಾದಳ ಉಪಾಧ್ಯಕ್ಷ ಜಿ. ಶ್ರೀನಿವಾಸ್ ತಿಳಿಸಿದರು.
    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ ಮಹಾನ್ ನಾಯಕರ ಜೀವನ ಚರಿತ್ರೆಯ ಅಧ್ಯಯನ ಮಾಡಿ ಆದರ್ಶ ಪುರುಷರಾಗಬೇಕು ಎಂದರು. 
ಭಾರತ ಸೇವಾದಳ ತಾಲ್ಲೂಕು ಕಾರ್ಯದರ್ಶಿ ಶ್ರೀರಾಮ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್. ಸುಧಾಕರ್, ಜಿಲ್ಲಾ ಸಮಿತಿಯ ಸದಸ್ಯ ಮುನೇಶ್, ರಾಜೇಶ್‍ಸಿಂಗ್, ಸಿ. ನಾರಾಯಣಸ್ವಾಮಿ, ವಿಶೇಷ ಆಹ್ವಾನಿತರಾದ ಅಪ್ಪಿ ನಾರಾಯಣಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ಸಂಪತ್ ಕುಮಾರ್, ಕೋಶಾಧ್ಯಕ್ಷ ಸೀಪು, ಸದಸ್ಯ ಮುನಿಯಪ್ಪ, ಜಿಲ್ಲಾ  ಸಂಘಟಕ ಎಂ.ಬಿ. ದಾನೇಶ್, ಆಜೀವ ಸದಸ್ಯ ವಿ.ಪಿ. ಸೋಮಶೇಖರ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಿ. ಮಂಜುನಾಥ್, ಕಾರಾಗೃಹ ಜೈಲರ್ ರೂಪವಾಣ  ಮತ್ತಿತರರು ಉಪಸ್ಥಿತರಿದ್ದರು.

                                    (ಜಿ. ಶ್ರೀನಿವಾಸ್)
                                       ಕೋಲಾರ.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...