ಕೋಲಾರ: ಗಿಡಗಳನ್ನು ತಮ್ಮ ಮಕ್ಕಳಂತೆ ಸಾಕಿದರೆ ಜಿಲ್ಲೆ ಹಸಿರಾಗುತ್ತದೆ-ರಘನಾಥ ರೆಡ್ಡಿ 

Source: shabbir | By Arshad Koppa | Published on 23rd August 2017, 8:39 AM | Coastal News | Special Report |

ಕೋಲಾರ: ಗಿಡಗಳನ್ನು ತಮ್ಮ ಮಕ್ಕಳಂತೆ ಸಾಕಿ ಪೋಷಿಸಿದಾಗ ಮುಂದಿನ ಭವಿಷ್ಯದಲ್ಲಿ ಮಳೆಬಿದ್ದು  ಜಿಲ್ಲೆ ಹಸಿರಾಗಿರುತ್ತದೆ, ಇಲ್ಲವಾದಲ್ಲಿ ಬರಡು ಭೂಮಿಯಾಗಿ ಮಾರ್ಪಟ್ಟು ವಾಸಕ್ಕೆ ಕಷ್ಟಕರವಾಗುತ್ತದೆ ಎಂದು, ಕ್ಷೇತ್ರ ಶಿಕ್ಷಣಾಧಿಕಾರಿ ರಘನಾಥ ರೆಡ್ಡಿ ಅವರು ತಿಳಿಸಿದರು.  
    ತಾಲ್ಲೂಕಿನ ವಿಟ್ಟಪ್ಪನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ  ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರಕ್ಕೆ ನಾವು ಮಾರಕವಾದರೆ ಮುಂದಿನ ನಮ್ಮ ಪೀಳಿಗೆಗೆ ತುಂಬಾ ತೊಂದರೆಯಾಗುತ್ತದೆ, ಆದ್ದರಿಂದ ನಾವು-ನೀವು ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿಸಲು ಹೆಚ್ಚು ಹೆಚ್ಚು ಗಿಡಗಳನ್ನು ಬೆಳಸಿ ಪೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮವಾದ ಕೆಲಸಮಾಡಿತ್ತಿದ್ದು, ಈ ಸಂಸ್ಥೆಗೆ ಮತ್ತಷ್ಟು ಸಹಕಾರದ ಅಗತ್ಯವಿದೆ ಎಂದರು. 
     ತಾಲ್ಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದು, ಇಂತಹ ಕಾರ್ಯಗಳಿಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ. ಗಿಡಗಳನ್ನು ನೆಟ್ಟ ಮೇಲೆ ಶಾಲಾ ಮಕ್ಕಳೂ ತಲಾ ಎರಡು ಗಿಡಗಳನ್ನು ಪ್ರಾಜಕ್ಟ್ ರೀತಿಯಲ್ಲಿ, ತೆಗೆದುಕೊಂಡು ಬೆಳೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
 ಗ್ರಾಮ ಪಂಚಾಯತಿ ಸದಸ್ಯ ಕೋಟೆ ನಾರಾಯಣಸ್ವಾಮಿ ರವರು ಮಾತನಾಡಿ, ಶಾಲೆಗೆ ನಾಲ್ಕು ಎಕರೆ ಜಮೀನು ಉಳಿಸಲು ಗ್ರಾಮಸ್ಥರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ತುಂಬಾ ಶ್ರಮಿಸಿದ್ದು, ಇದನ್ನು ಇಂದಿನ ಯುವಪೀಳೀಗೆ ಉತ್ತಮ ಪರಿಸರದ ನಿರ್ಮಾಣದಿಂದ ಸಮಾಜಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
 ಈ ಸಮಾರಂಭದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ರಾಜಪ್ಪ, ಸದಸ್ಯರಾದ ಚಿಕ್ಕಪ್ಪಯ್ಯ, ಸುರೇಶ್, ಹನುಮಪ್ಪ, ನಾಗಮ್ಮ, ಶ್ರೀನಿವಾಸ್, ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಅಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ, ಮುಖಂಡರಾದ ಮಂಗಳ ವಿ.ಗೌಡ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪಧಾಧಿಕಾರಿಗಳಾದ ಕೆ.ಆರ್. ಸುರೇಶ್. ವಿ.ಬಾಬು, ಮುನಿನಾರಾಯಣಪ್ಪ, ಚೇತನ್,ವಿಶ್ವನಾಥ್,ಅಶ್ವಿನಿ,ಪಿ.ಎ.ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ್ ಸಿಬ್ಬಂದಿಯಾದ ಅಶ್ವಥ್ ನಾರಾಯಣ,ರಾಜೇಶ್,ಜಯಮ್ಮ,ಸುಜಾತ, ಗ್ರಾಮಸ್ಥರು ಮತ್ತು ಮಕ್ಕಳು ಹಾಜರಿದ್ದರು.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...