ಕೋಲಾರ:ಪಟಾಕಿ ಸಿಡಿಸುವಾಗ 30ಕ್ಕೂ ಹೆಚ್ಚು ಮಂದಿಗೆ ಗಾಯ

Source: shabbir | By Arshad Koppa | Published on 21st October 2017, 10:48 AM | State News | Special Report |

ಕೋಲಾರ:- ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ 30ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ದೃಷ್ಠಿ ದೋಷ ಮತ್ತು ಸುಟ್ಟಗಾಯಗಳಿಂದ ಚಿಕಿತ್ಸೆಗೆಆಸ್ಪತ್ರೆಗಳಿಗೆ ಧಾವಿಸಿದ್ದು,  ನಗರದ ವಿವೇಕ ನೇತ್ರಾಲಯವೊಂದರಲ್ಲೇ 11 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ 24 ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು. 
ಬೆಳಕಿನ ಹಬ್ಬದಲ್ಲಿ ಮಕ್ಕಳು ಸಂಭ್ರಮದಿಂದ ಪಟಾಕಿ ಸಿಡಿಸುವಾಗ ಚಿಣ್ಣರಿಗೆ ಮಾತ್ರವಲ್ಲದೇ ಪೋಷಕರ ಕಣ್ಣಿಗೂ ಹಾನಿಯಾಗಿದ್ದು, ತಮ್ಮಲ್ಲಿಗೆ ಬಂದ 11 ಮಂದಿಯಲ್ಲಿ 10 ಮಂದಿಗೆ ಸಣ್ಣಪುಟ್ಟ ಪ್ರಮಾಣದಲ್ಲಿ ತೊಂದರೆಯಾಗಿದ್ದರೆ ಉಳಿದ ಒಬ್ಬರಿಗೆ ಕಾರ್ನಿಯಾಗೆ ಗಾಯವಾಗಿ ತೊಂದರೆ ಕಂಡು ಬಂದಿದೆ ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಪಟಾಕಿ ಸಿಡಿಸುವಾಗ ಪಟಾಕಿಯೊಳಗಿನ ರಾಸಾಯನಿಕದಿಂದ, ಸಿಡಿತದ ವೇಗಕ್ಕೆ ಮಣ್ಣು ಮತ್ತು ಬೆಂಕಿಯಿಂದ ಎರಡೂ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನ ಶಾನುಭೋಗನಹಳ್ಳಿಯ ಸುದೀಪ್ (12) ಎಂಬ ಬಾಲಕನಿಗೆ ಪಟಾಕಿ ಸಿಡಿಸುವಾಗ ಕಾರ್ನಿಯಲ್ ಅಲ್ಸರ್ ಆಗಿದ್ದು, ಇದು ವಾಸಿಯಾಗಲು ಒಂದೂವರೆ ತಿಂಗಳಾಗುತ್ತದೆ, ದೃಷ್ಟಿಗೇನು ತೊಂದರೆಯಾಗದು ಎಂದು ತಿಳಿಸಿದರು.
ಹೆಚ್ಚಿನ ಪ್ರಕರಣಗಳಲ್ಲಿ ಪಟಾಕಿ ಸಿಡಿಸುವರಿಗಿಂತ ಇತರರಿಗೆ ಹೆಚ್ಚಿನ ತೊಂದರೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು. 
ಈ ಅನಾಹುತದ ಕುರಿತು ವಿವೇಕಾ ನೇತ್ರಾಲಯಕ್ಕೆ ಬಂದಿದ್ದ ಪೋಷಕರೊಬ್ಬರನ್ನು ವಿಚಾರಿಸಿದಾಗ ತಮ್ಮ ಮಗನಿಂದ ಪಟಾಕಿ ಹೊಡೆಸುತ್ತಿದ್ದ ಸಂದರ್ಭದಲ್ಲಿ ಪಟಾಕಿಯ ಬೆಂಕಿಯ ಕಿಡಿ ಕಣ್ಣಿಗೆ ತಾಗಿ ಈ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ವೈದ್ಯ ಮಂಜುನಾಥ್ ಅವರು ಹೇಳುವಂತೆ ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ ಎಂದರು.
ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು ಎಂದು ತಿಳಿಸಿದರು.
ಶಂಕರ ಕಣ್ಣಾಸ್ಪತ್ರೆಗೆ 7
ಆಯುರ್ವೇದ ಚಿಕಿತ್ಸೆಗೆ 8
ಇದೇ ರೀತಿ ನಗರದ ಶಂಕರ ಕಣ್ಣಿನ ಆಸ್ಪತ್ರೆಗೂ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗಿರುವ 7 ಮಂದಿ ಚಿಕಿತ್ಸೆಗಾಗಿ ಬಂದಿದ್ದಾರೆ ಎಂದು ನೇತ್ರ ತಜ್ಞ ಡಾ.ಶಂಕರ್ ನಾಯಕ್ ತಿಳಿಸಿದರು.
ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಶೆಟ್ಟಿ ಸುಟ್ಟಗಾಯಗಳ ಆಯುರ್ವೇದ ಚಿಕಿತ್ಸಾಲಯಕ್ಕೆ ದೀಪಾವಳಿಯಾದ ಗುರುವಾರ ಮತ್ತು ಶುಕ್ರವಾರ ಸುಟ್ಟ ಗಾಯಗಳಿಂದ 20 ಮಂದಿ ಬಂದಿದ್ದು, ಇದರಲ್ಲಿ 8 ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡವರು ಎಂದು ತಿಳಿಸಿದರು.
ಉಳಿದಂತೆ ಕಜ್ಜಾಯ ಮಾಡುವಾಗ ಕಾದ ಎಣ್ಣೆ ಬಿದ್ದು ಗಾಯಗೊಂಡವರು, ಓರ್ವ ಸುಮಾರು ಒಂದು ವರ್ಷದ ಮಗು ಕುದಿಯುತ್ತಿದ್ದ ಚಹಾ ಬಿದ್ದು ಸುಟ್ಟಗಾಯಗಳಿಂದ ಚಿಕಿತ್ಸೆಗೆ ಬಂದಿದ್ದು ಕಂಡು ಬಂತು.
ಇದರಲ್ಲಿ ಮಾಲೂರು ತಾಲ್ಲೂಕಿನ ತುರಾಂಡಹಳ್ಳಿಯ ಸತೀಶ್ ಎಂಬುವವರ 9 ತಿಂಗಳ ಮಗು ಸುಭಾಷಿಣಿ ಬೇರಾರೋ ಪಟಾಕಿ ಸಿಡಿಸಿದಾಗ ಮನೆಯಲ್ಲಿದ್ದ ಮಗುವಿನ ಮೇಲೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗೆ ಕರೆತರಲಾಗಿತ್ತು.
ಇದೇ ರೀತಿ ಜಿಲ್ಲಾಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಇಟಿಸಿಎಂನ ವಾಸನ್ ಐಕೇರ್,ನೇತ್ರದೀಪ ರೋಟರಿ ಕಣ್ಣಾಸ್ಪತ್ರೆಗೂ ಕೆಲವು ಗಾಯಾಳುಗಳು ಬಂದು ಚಿಕಿತ್ಸೆ ಪಡೆದಿದ್ದು, ಒಟ್ಟಾರೆ 30ಕ್ಕೂ ಹೆಚ್ಚು ಮಂದಿ ಪಟಾಕಿ ಅವಾಂತರದಿಂದ ಸುಟ್ಟಗಾಯಗಳು ಹಾಗೂ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ.

ಕೋಲಾರದ ವೆಂಕಟೇಶಶೆಟ್ಟಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಟಾಕಿ ಸಿಡಿತರಿಂದ ಸುಟ್ಟ ಗಾಯವಾಗಿರುವ ಪುಟ್ಟ ಮಗುವಿನ ಕೈಗೆ ಬ್ಯಾಂಡೇಜ್ ಹಾಕುತ್ತಿರುವ ವೈದ್ಯ ವೆಂಕಟೇಶಶೆಟ್ಟಿ. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...