ಕೋಲಾರ: ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಿ: ನಂಜುಂಡಪ್ಪ

Source: shabbir | By Arshad Koppa | Published on 27th July 2017, 7:32 AM | State News | Guest Editorial |

ಕೋಲಾರ, ಜುಲೈ 26:ರೈತರು ಬೆಳೆಯುವ ಬೆಳೆಗಳು ಮಳೆಯ ಕೊರತೆ, ಕೀಟಗಳ ಹಾವಳಿ, ಬೆಳೆ ರೋಗಗಳು ಮುಂತಾದ ಕಾರಣಗಳಿಂದಾಗಿ ನಷ್ಟ ಅನುಭವಿಸಬೇಕಾಗುತ್ತಿದೆ. ಆದ್ದರಿಂದ ಎಲ್ಲಾ ರೈತರು ಬೆಳೆ ವಿಮೆ ಮಾಡಿಸುವ ಮೂಲಕ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ನಂಜುಂಡಪ್ಪನವರು ತಿಳಿಸಿದರು.
ಸುಗಟೂರು ಬಸ್ ನಿಲ್ದಾಣದ ಅವರಣದಲ್ಲಿ ಇಂದು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಇಲಾಖೆಗಳು ಒಟ್ಟಿಗೆ ಸೇರಿ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡುತ್ತಿವೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು.
ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಬೆಳೆಗಳನ್ನು ಕಡಿಮೆ ವೆಚ್ಚದಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆದುಕೊಳ್ಳಲು ಈ ಅಭಿಯಾನವು ಉಪಯುಕ್ತವಾಗಿದೆ. ಯಾವ ರೀತಿ ಉಳುಮೆ ಮಾಡಬೇಕು, ಭಿತ್ತನೆಯ ವಿಧಾನಗಳು, ನೀರಾವರಿ ಪದ್ದತಿಗಳು, ಕೀಟನಾಶಗಳ ಸಿಂಪಡಣೆ ಮುಂತಾದ ವಿಧಾನಗಳನ್ನು ಸಮಗ್ರವಾಗಿ ಅಳವಡಿಸಿಕೊಳ್ಳುವ ಮೂಲಕ ಅಧಿಕ ಆದಾಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. 


ನಿವೃತ್ತ ತೋಟಗಾರಿಕಾ ನಿರ್ದೇಶಕರಾದ ಹಾಲಲಿಂಗಯ್ಯ ಮಾತನಾಡಿ, ಟೊಮೆಟೋ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಈ ಬೆಳೆಯನ್ನು  ವರ್ಷದ 365 ದಿನವೂ ಬೆಳೆಯಬಹುದಾಗಿದೆ. ಈ ಬೆಳೆಯನ್ನು ಸಂಜೆ 04 ಗಂಟೆಯ ನಂತರ ನಾಟಿ ಮಾಡಬೇಕು. ಬೆಳೆಯನ್ನು ನೆಟ್ಟ 52 ದಿನಗಳಲ್ಲಿ ಫಸಲನ್ನು ಪಡೆಯಬಹುದು. ಕೀಟಗಳ ನಿವಾರಣೆಗೆ ಬೇವಿನ ಹಿಂಡಿಯ ಪುಡಿಯನ್ನು ಬುಡಕ್ಕೆ ಸಿಂಪಡಿಸಬೇಕು. ಒಂದು ಟೊಮೆಟೋ ಗಿಡಕ್ಕೆ 3-4 ಲೀಟರ್ ನೀರು ಅವಶ್ಯಕ ಎಂದು ವಿವರಿಸಿದರು. 
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ತಿರುಮಲಪ್ಪ, ಕೃಷ್ಣಪ್ಪ, ಸುಗಟೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ ನಾರಾಯಣಪ್ಪ, ಉಪಾಧ್ಯಕ್ಷರಾದ ಮುನಿರಾಜಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಎಸ್.ರಂಗಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ಸುನೀಲ್, ಕೃಷಿ ವಿಜ್ಞಾನಿಗಳಾದ ನೂರುಲ್ಲಾ, ಶಶಿಧರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.   

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...