ಕೋಲಾರ:ಫೇಸ್‍ಬುಕ್ ವಾಟ್ಸ್‍ಅಪ್ ಸಾಮಾಜಿಕ ತಾಣ ಪ್ರಿಯರೇ ಈಗಲೇ ನಿಮ್ಮ ಊರಿನ ಕೆರೆಗಳ ಪೋಟೋ ಕ್ಲಿಕ್ಕಿಸಿಕೊಳ್ಳಿ  - ಜಿ. ನಾರಾಯಣಸ್ವಾಮಿ

Source: shabbir | By Arshad Koppa | Published on 7th August 2017, 7:32 AM | State News | Guest Editorial |

ಕೋಲಾರ ಆ. 6: ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರಿನ ಆದಿ ಮೂಲಗಳಾದ ರಾಜ ಮಹಾರಾಜರು, ದಾನಿಗಳು, ಮುಂದಾಲೋಚನೆಯಿಂದ ಕೆರೆಗಳನ್ನು ನಿರ್ಮಿಸಿ ನಮಗಾಗಿ ಉಳಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರವು ಈಗ ಸುಮಾರು 1500 ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡಿ ರೈತ ಕುಲವನ್ನು ಸರ್ವನಾಶ ಮಾಡಲು ಹೋರಟಿರುವುದು ದುರಂತವೇ ಸರಿ ಎಂದು ರೈತ ನಾಯಕ ಪೊ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ತಿಳಿಸಿದರು.
    ಅವರು ಇಂದು 6ನೇ ದಿನದ ಕರಪತ್ರ ಚಳುವಳಿಯನ್ನು ಕೋಲಾರ ನಗರದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದಲ್ಲಿ ಜನರಿಗೆ ಅರಿವು ಮೂಡಿಸಲಾಯಿತು.
    ಕೋಲಾರ ನಗರದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಹಿಡಿದು ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೂ ಇಂದ ಕೆರೆಯನ್ನು ನಗರ ಅಭಿವೃದ್ದಿಗೆ ಬಳಸಿಕೊಂಡು ಕ್ರೀಡಾಂಗಣ, ಬಸ್ ನಿಲ್ದಾಣ ಹಾಗೂ ಕುವೆಂಪು ಪಾರ್ಕ್, ಅಂಬೇಡ್ಕರ್ ಆಸ್ಟಲ್, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಜನೋಪಯೋಗಿ ಕೆಲಸಕ್ಕೆ ಹೊರತು ಪಡಿಸಿ ಬೇರೆಲ್ಲಾವೂ ಬೇರೆಲ್ಲವೂ ಏನಾಗಿದೆ ಎಂಬುದು ನಿಮಗೂ ತಿಳಿದಿರುವ ಇತಿಹಾಸ. ಈಗಾಗಲೇ ರಾಜಕಾಲುವೆಗಳು ಮುಚ್ಚಿಹೋಗಿವೆ. ಸರಿಯಾಗಿ ನೀರು ಕೋಲಾರಮ್ಮ ಕೆರೆಗೆ ಹೋಗದೆ ಕೆರೆಯು ತುಂಬುತ್ತಿಲ್ಲ. ಇವೆಲ್ಲವೂ ಕೆರೆಯ ಮೂಲಗಳನ್ನು ಮುಚ್ಚಿದ್ದರಂದಾಗಿದೆ. 
    ಅದೇ ರೀತಿ ಕೋಲಾರಮ್ಮ ಕೆರೆ, ಕೋಡಿಕಣ್ಣೂರು ಕೆರೆ ಸಹ ಅರ್ಧ ಭಾಗ ಒತ್ತುವರಿಯಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ನಾವು ಸಂಪೂರ್ಣ ಕೆರೆಯು ಮಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಷ್ಟ್ರೀಯ ಹೆದ್ದಾರಿಯಾದಾಗಿನಿಂದ ರಾಜಕಾಲುವೆಗಳು ತಿಂದು ಅಮ್ಮೆರಹಳ್ಳಿ ಕೆರೆಗೆ ನೀರು ಬರದೆ ಕೋಲಾರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕೆರೆಯು ಸಹ ಬರಿದಾಗಿದೆ.


    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಮಾತನಾಡಿ ಪ್ರತಿ ಹಳ್ಳಿಗೂ ಕೆರೆ,ಕುಂಟೆ, ಗೋಕುಂಟೆ, ಗೋಮಾಳ, ಗುಂಡುತೋಪುಗಳಿದ್ದವು ಆದರೆ ಈಗ ಎಲ್ಲವೂ ಒತ್ತುವರಿಯಾಗಿದೆ ಕೇವಲ ಆರ್ಧ ಕೆರೆಗಳು ಉಳಿದಿವೆ. ಅವನ್ನು ಸಹ ಡಿ ನೋಟಿಪೈ ಮಾಡಿದರೆ ರೈತನ ಬಾಯಿಗೆ ನೇರ ಮಣ್ಣು ಹಾಕಿದಂತೆ ಎಂದರು ಉದಾಹರಣಗೆ ಮಲ್ಲಸಂದ್ರ ಮುದುವಾಡಿ ಮದ್ಯದ ಕೆರೆಯು ಅರ್ಧ ಕೆರೆ ಒತ್ತುವರಿಯಾಗಿದೆ. ಸೀಪುರ ಕೆರೆ ರಾಜಕಾಲುವೆ ಒತ್ತುವರಿಯಾಗಿದೆ, ಕೆರೆ ಒತ್ತುವರಿಯಾಗಿದ್ದು, ಜನ ಸಾಮಾನ್ಯರು ನಮಗೇನೂ ಸೇರಿಲ್ಲವೆಂದು ಸುಮ್ಮನಿರುವುದು ಬಹಳ ದುಃಖದ ಸಂಗತಿ. ರೈತರು, ಸಾರ್ವಜನಿಕರು ಇನ್ನಾದರೂ ಹೆಚ್ಚೆತ್ತುಕೊಂಡು ಸರ್ಕಾರದ ಈ ಡಿನೋಟಿಪೈ ಕ್ರಮದ ವಿರುದ್ದ ತಿರುಗಿ ಬೀಳಬೇಕಾಗಿದೆ ಎಂದರು. ಇಲ್ಲವಾದರೆ ಮುಂದಿನ ಪೀಳಿಗೆಗೆ ಕೆರೆಗಳನ್ನು ಚಿತ್ರಗಳಲ್ಲಿ, ಪೇಸ್‍ಬುಕ್, ಯೂಟೂಬ್, ವಾಟ್ಸ್‍ಅಫ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುವ ಪರಿಸ್ಥಿತಿ ಕೋಲಾರ ಜಿಲ್ಲೆಗೆ ಬರುವುದು ದೂರವಿಲ್ಲವೆಂದರು.  ಫೇಸ್‍ಬುಕ್ ವಾಟ್ಸ್‍ಅಪ್ ಪ್ರಿಯರು ಈಗಲೇ ಕೆರೆಗಳ ಪೋಟೋ ಕ್ಲಿಕ್ಕಿಸಿಕೊಳ್ಳಿ ಎಂದರು.
    ಕರಪತ್ರ ಚಳುವಳಿಯಲ್ಲಿ ಚುಂಚನೇನಹಳ್ಳಿ ದ್ಯಾವೀರಪ್ಪ, ಸೀಸಂದ್ರ ಚಲಪತಿ, ಹೋಳೂರು ಮುನಿವೆಂಕಟರೆಡ್ಡಿ, ವಿದ್ಯಾರ್ಥಿ ಮುಖಂಡ ರಾಜು, ಗಂಗರಾಜು, ಮುರಳಿ, ಕದಿರೇನಹಳ್ಳಿ ಶ್ರೀನಿವಾಸ್, ನಗರ ಘಟಕದ ಜಬೀವುಲ್ಲಾ, ಸಲ್ಮಾನ್, ನವಾಜ್  ಮುಂತಾದವರು ಉಪಸ್ಥಿತರಿದ್ದರು.

                                  (ಕಲ್ವಮಂಜಲಿ ರಾಮುಶಿವಣ್ಣ)
     ಜಿಲ್ಲಾಧ್ಯಕ್ಷರು
ರೈತ ನಾಯಕ ಪೊ|| ನಂಜುಂಡಸ್ವಾಮಿ ಸ್ಥಾಪಿತ
   ಕರ್ನಾಟಕ ರಾಜ್ಯ ರೈತ ಸಂಘ ಹಾಗೂ 
    ಹಸಿರು ಸೇನೆ, ಕೋಲಾರ ಜಿಲ್ಲೆ.
ಮೊ. : 9731426520


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...